ಅತ್ಯಾಲ್ಪಾವಧಿಯಲ್ಲಿ ಸನಾತನ ಹಿಂದೂ ಧರ್ಮವನ್ನು ಸಂಸ್ಥಾಪಿಸಿದವರು ಶ್ರೀಶಂಕರಾಚಾರ್ಯರು – ಶ್ರೀಮತಿ ಪ್ರೇಮಲೀಲಾ ರಾಮಣ್ಣ ಅಭಿಪ್ರಾಯ.

ಚಳ್ಳಕೆರೆ ಮೇ.01

ಅತ್ಯಾಲ್ಪಾವಧಿಯಲ್ಲಿ ಸನಾತನ ಹಿಂದೂ ಧರ್ಮ ಹಾಗೂ ವೇದಾಂತ ಸಾಹಿತ್ಯಕ್ಕೆ ಆದಿಗುರು ಶ್ರೀಶಂಕರಾಚಾರ್ಯರು ನೀಡಿದ ಕೊಡುಗೆ ಅನುಪಮವಾದದ್ದು ಎಂದು ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯರಾದ ಶ್ರೀಮತಿ ಪ್ರೇಮಲೀಲಾ ರಾಮಣ್ಣ ತಿಳಿಸಿದರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ “ಶ್ರೀಶಂಕರಾಚಾರ್ಯರ ಜಯಂತ್ಯುತ್ಸವ” ದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿಶೇಷ ಭಜನೆ ನಡೆಸಿಕೊಟ್ಟ ಅವರು “ಶ್ರೀಶಂಕರಾಚಾರ್ಯರ”ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಶಂಕರಾಚಾರ್ಯರ ಬಾಲ್ಯ ಜೀವನವನ್ನು ಕಟ್ಟಿಕೊಟ್ಟು ಶಂಕರ ಶಬ್ದದ ಅರ್ಥವನ್ನು ವಿವರಿಸಿ ಶಂಕರ ಎಂದರೆ “ಮಂಗಳಕರ- ಶುಭಕರವಾದದ್ದು, “ಕನಕಧಾರ ಸ್ತೋತ್ರ” ರಚನೆಯ ಹಿನ್ನಲೆಯನ್ನು ವಿವರಿಸಿದ ಅವರು ಶಂಕರರ ಜೀವನದ ಅನೇಕ ಮಹತ್ವಪೂರ್ಣ ಘಟನೆಗಳ ಬಗ್ಗೆ ಮಾತನಾಡಿದರು.

ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಮಾತನಾಡಿ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಶ್ರೀಶಂಕರಾಚಾರ್ಯರು ಮೂವತ್ತೆರಡು ವರ್ಷಗಳ ಅತ್ಯಾಲ್ಪ ಜೀವನದಲ್ಲಿ ಸೌಂದರ್ಯ ಲಹರಿ, ಭಜ ಗೋವಿಂದಂ ಸೇರಿದಂತೆ ಅನೇಕ ಪುಸ್ತಕಗಳ ಮೇಲೆ ಭಾಷ್ಯಗಳನ್ನು ಬರೆದ ಶಂಕರರು ಅಹಂ ಬ್ರಹ್ಮಾಸಿ- ಭಗವಂತನೊಬ್ಬನೇ ಸತ್ಯ-ಜಗತ್ತು ಅನಿತ್ಯ ಎಂಬ ಅವರ ಸಂದೇಶಗಳು ಮನನಯೋಗ್ಯ ವಿಚಾರಗಳಾಗಿವೆ.

ಅವರು ಸ್ಥಾಪಿಸಿದ ನಾಲ್ಕು ಪೀಠಗಳು ಗೋವರ್ಧನಾ ಪೀಠ, ದ್ವಾರಕಾ ಪೀಠ, ಶೃಂಗೇರಿ ಶಾರದಾಪೀಠ, ಜ್ಯೋತಿರ್ ಪೀಠಗಳು ಇಂದಿಗೂ ಅತ್ಯುತ್ತಮವಾಗಿ ಹಿಂದೂ ಧರ್ಮದ ಪುನರ್ ಉದ್ಧಾರ ಕಾರ್ಯದಲ್ಲಿ ತೊಡಗಿಸಿ ಕೊಂಡು ಧರ್ಮ ಜಾಗೃತಿ ಮಾಡುತ್ತಿವೆ ಎಂದು ಅವರು ಹೇಳಿದರು.

ಸತ್ಸಂಗದ ಪ್ರಯುಕ್ತ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಶಂಕರಾಚಾರ್ಯರು ಬರೆದ ಭಜನೆಗಳ ಗಾಯನ.ಯತೀಶ್ ಎಂ ಸಿದ್ದಾಪುರ ಅವರಿಂದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ, ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.

ಜಯಂತೋತ್ಸವ ಕಾರ್ಯಕ್ರಮದಲ್ಲಿ ಶ್ರೀಮತಿ ಸೌಮ್ಯ ಉಮೇಶ್, ರಂಗಮ್ಮ ಗುಂಡಲ, ಪ್ರೇಮಾ, ಸೌಮ್ಯ ಪ್ರಸಾದ್, ರಾಧಾ ಭೀಮಾರೆಡ್ಡಿ, ಸುವರ್ಣ, ಗೀತಾ ವೆಂಕಟೇಶರೆಡ್ಡಿ, ಹನ್ವಿಕಾ, ಅನುಸೂಯ ರಾಘವೇಂದ್ರ, ಎಂ ಲಕ್ಷ್ಮೀದೇವಮ್ಮ, ಪಂಕಜಾ, ಪ್ರಮೀಳಾ ಜಗದೀಶ್, ಗೀತಾ ಸುಂದರೇಶ್, ಸರಸ್ವತಿ ನಾಗರಾಜ್ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button