ಚಡಚಣ ತಾಲೂಕಾ ಅತಿಥಿ ಶಿಕ್ಷಕರ ಪದಾಧಿಕಾರಿಗಳ ಆಯ್ಕೆ…
ಚಡಚಣ (ಮೇ.2) :
ವಿಜಯಪೂರ ಜಿಲ್ಲೆಯ ಚಡಚಣ ಪಟ್ಟಣದ ಟ್ಯಾಲೆಂಟ್ ನವೋದಯ ಕೋಚಿಂಗ್ ಕ್ಲಾಸಸ್ ಆವರಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಅತಿಥಿ ಶಿಕ್ಷಕರ ಪದಾಧಿಕಾರಿಗಳ ಆಯ್ಕೆ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಭೆಯಲ್ಲಿ ಜಿಲ್ಲಾ ಅತಿಥಿ ಶಿಕ್ಷಕರ ಅಧ್ಯಕ್ಷರಾದ ಧಾನೇಶ ಕಲಕೇರಿ ಮಾತನಾಡಿ ಎಲ್ಲಾ ಹುದ್ದೆಗಳಿಗಿಂತ ಶಿಕ್ಷಕರ ಹುದ್ದೆ ದೊಡ್ಡದು ಆದರೆ ಆ ಶಿಕ್ಷಕರಿಗೆ ರಕ್ಷೆಣೆ ಇಲ್ಲದಂತಾಗಿದೆ ರಕ್ಷೆಣೆ ಸಿಗಬೇಕಾದರೆ ಬಿಕ್ಷೆ ಬೇಡುವ ಪರಿಸ್ಥಿತಿ ಎದುರಾಗಿದೆ ನಾವು ಬಿಕ್ಷುಕರಲ್ಲ ಮುಂದಿನ ನಾಡಿನ ರಕ್ಷಕರನ್ನು ತಯಾರು ಮಾಡುವ ಶಿಕ್ಷಕರು ಅವರೇ ಗೌರವ ಶಿಕ್ಷಕರು ಎಂದು ಹೇಳಿದರು .

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಬಿ ಎಸ್ ಹೊಸೂರ ಮಾತನಾಡಿದರು ನಂತರ ಚಡಚಣ ತಾಲೂಕಿನ ನೂತನ ಅಧ್ಯಕ್ಷರಾಗಿ ಪ್ರಕಾಶ ಯಳಮೇಲಿ .ಗೌರವ ಅಧ್ಯಕ್ಷರಾಗಿ ತಮ್ಮರಾಯ ಕುಲಕರ್ಣಿ.ಉಪಾಧ್ಯಕ್ಷರಾಗಿ ಪ್ರದೀಪ ಮದಬಾವಿ.ಪ್ರಧಾನ ಕಾರ್ಯದರ್ಶಿಗಳಾಗಿ ಮಂಜುನಾಥ ಪೂಜಾರಿ . ಖಜಾಂಚಿಯಾಗಿ ಗೀರಿಶ ಕಾಂಬಳೆ. ಸಂಘಟನಾ ಕಾರ್ಯದರ್ಶಿಗಳಾಗಿ ಸಂಜೀವಕುಮಾರ ಕಟಕದೊಂಡ ಹಾಗೂ ರಮೇಶ ಪರೀಟ. ಸಂಚಾಲಕರಾಗಿ ರಾಚಪ್ಪ ಕಟ್ಟಿಮನಿ ಹಾಗೂ ದಯಾನಂದ ವಾಡಿ. ನಿರ್ದೇಶಕರಾಗಿ ಶ್ರೀಮತಿ ಕಮಲಾಬಾಯಿ ಬುಕ್ಕಾ.ಶ್ರೀಮತಿ ದಾನಮ್ಮ ಬೋರಗಿ. ಮಲ್ಲಿಕಾರ್ಜುನ ಕಾಮಗೊಂಡ .ಪ್ರಕಾಶ ಗೀರಿಮಲ್ಲ. ಉಮೇಶ ಬಾಲಗಾಂವ. ರವಿ ಬಿರುಣಗಿ ಇವರನ್ನು ನೇಮಿಸಲಾಯಿತು ಈ ಸಭೆಯಲ್ಲಿ ತಾಲೂಕಿನ ಅತಿಥಿ ಶಿಕ್ಷಕರಾದ ಅರುಣಕುಮಾರ ಸುನೀಲ ಶಿವಶಂಕರ ಜ್ಯೋತಿ ಅಂಬಾಜಿ ಜಯಶ್ರೀ ಮುತ್ತುರಾಜ.ಸೇರಿದಂತೆ ಮುಂತಾದವರು ಅತಿಥಿ ಶಿಕ್ಷಕರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು: ಬೀ.ಎಸ್.ಹೊಸೂರ್. ವಿಜಯಪುರ ..