ಬಸವ-ಶಂಕರ-ರಾಮಾನುಜಾರ್ಚಾರ್ಯರ ಶಿಷ್ಯರ ಗುರು ಭಕ್ತಿ ಅಸಾಧಾರಣವಾದದ್ದು – ಮಾತಾಜೀ ತ್ಯಾಗಮಯೀ.
ಚಳ್ಳಕೆರೆ ಏ.27

ಜಗಜ್ಯೋತಿ ಬಸವೇಶ್ವರರು, ಶಂಕರಾಚಾರ್ಯರು, ರಾಮಾನುಜಾಚಾರ್ಯರ ಜೀವನದಲ್ಲಿ ಬರುವ ಅವರ ಶಿಷ್ಯರ ಗುರುಭಕ್ತಿ ನಿಜಕ್ಕೂ ಅಸಾಧಾರಣವಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಆತ್ಮೊನ್ನತಿಗೆ ಮೆಟ್ಟಿಲುಗಳು- ಭಯ” ಹಾಗೂ “ಬಸವ,ಶಂಕರ, ರಾಮಾನುಜಾಚಾರ್ಯರ ಜಯಂತಿಯ ಪ್ರಯುಕ್ತ ಅವರ ಜೀವನ ಮತ್ತು ಕೊಡುಗೆಗಳ” ಬಗ್ಗೆ ವಿಶೇಷ ಪ್ರವಚನ ನೀಡಿದರು.

ಬಸವಣ್ಣನವರ ಮೇಲೆ ಅತಿಶಯ ಗೌರವ ಇಟ್ಟಿದ್ದ ಹರಳಯ್ಯ ದಂಪತಿಗಳು, ಶಂಕರಾಚಾರ್ಯರ ಶಿಷ್ಯರಾದ ಪದ್ಮಪಾದಾಚಾರ್ಯರು, ರಾಮಾನುಜಾಚಾರ್ಯರ ಶಿಷ್ಯರಾದ ರಂಗದಾಸರ ಗುರುಭಕ್ತಿ ಸದಾ ಸ್ಮರಣೀಯವಾದದ್ದು ಅದು ನಮಗೆ ಆದರ್ಶವಾಗಬೇಕು ಎಂದು ಹೇಳಿದರು.
ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ವಿಶೇಷ ಭಜನೆ, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ಸತ್ಸಂಗ ಸಭೆಯಲ್ಲಿ ಶ್ರೀಮತಿ ವನಜಾಕ್ಷಿ ಮೋಹನ್, ಮಂಜುಳ, ಚೇತನ್, ಚೆನ್ನಕೇಶವ, ಯತೀಶ್ ಎಂ ಸಿದ್ದಾಪುರ, ಗೀತಾ ವೆಂಕಟೇಶರೆಡ್ಡಿ, ಕಾವೇರಿ ಸುರೇಶ್, ಮಾನ್ಯ, ದರ್ಶನ್ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

