ಅಭಿವೃದ್ದಿಯ ಹರಿಕಾರ ಮಾನ್ಯ ಯಶವಂತರಾಯಗೌಡ ಪಾಟೀಲರವರಿಗೆ ಸಚಿವ ಸ್ಥಾನ ಕೊಡಿ ..!
ಇಂಡಿ (ಮೇ.17) :
ವಿಜಯಪುರ ಜಿಲ್ಲೆಯ ಇಂಡಿ ಮತಕ್ಷೇತ್ರದ ಹಾಲಿ ಶಾಸಕರಾದ ಮಾನ್ಯ ಯಶವಂತರಾಯಗೌಡ ಪಾಟೀಲ ಇವರು ಸತತವಾಗಿ 3 ಬಾರಿ ಇಂಡಿ ತಾಲೂಕಿಗೆ ವಿಧಾನಸಭೆಯ ಸದಸ್ಯರಾಗಿ ತಾಲೂಕಿಗೆ ಹ್ಯಾಟ್ರಿಕ್ ಸಾಧನೆಗೈದಿದ್ದಾರೆ. ಕ್ಷೇತ್ರಕ್ಕೆ ಶಾಸಕರಿಟ್ಟ ಅಭಿಮಾನ ಮತ ಪ್ರಭುಗಳ ವಿಶ್ವಾಸ ಸಂಪೂರ್ಣವಾಗಿ ಗೆದ್ದ ಶಾಸಕರೆಂದರೆ ಅವರು ಮಾನ್ಯ ಯಶವಂತರಾಯಗೌಡ ಪಾಟೀಲರು ಇವರು ರಾಜಕೀಯದಲ್ಲಿ ಸಾವ೯ಜನಿಕರ ಮನಸ್ಸು ಗೆದ್ದು ತಾಲೂಕಿನ ಕಲ್ಯಾಣದ ಅಭಿವೃದ್ಧಿಯಿಂದಲೇ ಈ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು.

ಈ ಬಾರಿ ಕಾಂಗ್ರೇಸ್ ಪಕ್ಷದ ಹೈಕಮಾಂಡ್ ರವರು ನಮ್ಮ ಇಂಡಿ ಮತಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನ ಕೊಡಬೇಕೆಂದು ತಾಲೂಕಾ ಕಾಂಗ್ರೆಸ್ ಪಕ್ಷದ ಮುಖಂಡರಾದ ದಯಾನಂದ ಮಸಳಿ, ಮನೋಹರ ಸಿಂಗೆ, ಭೋಜಪ್ಪ ಸುರಗೇನವರ, ಅಂಬಣ್ಣ ಕಲಶೆಟ್ಟಿ, ರಾಮ ಗೊಲ್ಲರ, ಖಾಜಪ್ಪ ಸಿಂಗೆ . ತುಕಾರಾಮ ಸುರಗೆ. ಮಾಯಪ್ಪ ಸುರಗೆ.ಸೈದಣ್ಣ ತಳವಾರ.ಮಲ್ಲಿಕಾಜು೯ನ ಅವಟೆ ಹಾಗೂ ಕಾಂಗ್ರೆಸ್ ಪಕ್ಷದ ಇತರೆ ಕಾಯ೯ಕತ೯ರು ವಿನಂತಿಸಿಕೊಂಡಿದ್ದಾರೆ.
ತಾಲೂಕ ವರದಿಗಾರರು: ಶಿವಪ್ಪ. ಹರಿಜನ.ಇಂಡಿ ….