ಗಾಳಿ ಮಳೆಗೆ ಧರೆಗುರುಳಿದ ಮರ – ವಿದ್ಯುತ್ ಕಂಬ.
ಖಾನಹೊಸಹಳ್ಳಿ ಮೇ.29

ಕೂಡ್ಲಿಗಿ ತಾಲೂಕಿನ ಖಾನಹೊಸಹಳ್ಳಿ ವ್ಯಾಪ್ತಿಯ ಸೋಮವಾರ ಸಂಜೆ ಗಾಳಿ-ಮಳೆ ಗುಡುಗು-ಸಿಡಿಲು ಅಬ್ಬರಿಸಿದೆ. ಭಾರೀ ಗುಡುಗು, ಬಿರುಗಾಳಿ ಸಹಿತ ಮಳೆಯಾಗಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಹಲವೆಡೆ ಮರ, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಕೆಲ ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ನೋಡನೋಡುತ್ತಿದ್ದಂತೆ ಖಾನಹೊಸಳ್ಳಿಯ ಕುಲುಮೆಹಟ್ಟಿ. ಸ.ಮಾ.ಹಿ. ಪ್ರಾಥಮಿಕ ಶಾಲೆಯ ಆವರಣದ ಕಾಪೌಂಡ್ ಹೊರಗಡೆ ಇರುವ ಮರಗಳು ಬಿರುಗಾಳಿ ಸಹಿತ ಮಳೆಯಾದ ಕಾರಣ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಬಿದ್ದುಹೋಗಿವೆ. ಸೋಮವಾರ ಸಂಜೆ ಒಂದು ತಾಸು ಸುರಿದ ಗುಡುಗು ಸಿಡಿಲು ಮಳೆಯಿಂದ ಕಾನಮಡಗು ಗ್ರಾಮದ ದಲಿತ ಕಾಲೋನಿಯಲ್ಲಿ ಮಳೆಯಿಂದ ಕೊಳಚೆ ನೀರು ರಸ್ತೆಯ ಮೇಲೆ ಹರಿದಿದ್ದಲ್ಲದೆ, ಮನೆಯ ಒಳಗೆ ನೀರು ನುಗ್ಗಿವೆ. ಅಲ್ಲದೆ ರಸ್ತೆಯ ಮೇಲೆ ಕಸಕಡ್ಡಿಗಳು ನಿಂತಿವೆ. ಖಾನಹೊಸಹಳ್ಳಿ ಗ್ರಾಮದಲ್ಲಿ ನಾಲಕ್ಕು ಹೆಚ್ಚು ಮನೆಗಳು ಭಾಗಶಃ ಹಾನಿಯಾಗಿದೆ. ಖಾನಹೊಸಹಳ್ಳಿ ಗ್ರಾಮದ ಕಾಳಮ್ಮ ಗಂಡ ಅಂಜಿನಪ್ಪ ಸೀಟಿನ ಮನೆ ಹಾಗೂ ಶೇಕನ್ ಬಿ. ಗಂಡ ಹಸೇನ್ ಸಾಬ್ ಸೀಟಿನ ಮನೆ ಮಳೆ ಗಾಳಿಗೆ ಹಾರಿಹೋಗಿದೆ, ಮಾರಕ್ಕ ಗಂಡ ಮಾಲಿಂಗಣ್ಣ ಇವರ ಸೀಟಿನ ಮನೆ ಹಾರಿ ಹೋಗಿದೆ, ಶಿವ ನಾಗಮ್ಮ ಗಂಡ ಓಬಳೇಶ್ ಇವರ ಸೀಟಿನ ಮನೆ ಹಾರಿಹೋಗಿದೆ, ಸುಜಾತ ಗಂಡ ಶಿವಯ್ಯ ಇವರ ಮನೆ ಗಾಳಿ ಮಳೆಗೆ ಒಟ್ಟು ಐದು ಮನೆಗಳು ಭಾಗಶಃ ಹಾನಿಯಾಗಿದೆ ಎಂದು ಕಂದಾಯ ನಿರೀಕ್ಷಕರು ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಖಾನಹೊಸಹಳ್ಳಿ, ಕಾನ ಮಡಗು, ಆಲೂರು, ಸಿದ್ದಾಪುರ ಕೆಂಚಮಲ್ಲನಹಳ್ಳಿ, ಎಂಬಿ ಅಯ್ಯನಹಳ್ಳಿ ಸಹಿತ ಸುತ್ತಮುತ್ತ ಉತ್ತಮ ಮಳೆಯಾಗಿದ್ದು ಇತರೆಡೆ ಹೂಡೇಂ, ತಾಯಕನಹಳ್ಳಿ, ಜುಮ್ಮೊಬನಹಳ್ಳಿ, ಕುಮತಿ, ಹೊಸೂರು ಸಾಧಾರಣ ಮಳೆಯಾಗಿದೆ.ರಸ್ತೆ ಸಂಚಾರ ಅಸ್ತವ್ಯಸ್ತ ಮುಖ್ಯ ರಸ್ತೆಗಳ ಮೇಲೆ ಬೃಹತ್ ಮರಗಳು ಉರುಳಿ ಬಿದ್ದು ಸೋಮವಾರ ಸಂಜೆ ರಸ್ತೆ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಹುಡೇಂ ಮಾರ್ಗವಾಗಿ ಹೋಗುವ ರಸ್ತೆಯಲ್ಲಿ ಮರಗಳು ವಿದ್ಯುತ್ ತಂತಿಯ ಮೇಲೆ ಉರುಳಿ ಬಿದ್ದಿವೆ. ಸಿಡಿಲಿಗೆ ಮೂಕ ಪ್ರಾಣಿಗಳು ಬಲಿ ಇಲ್ಲಿನ ಸಕಲಾಪುರದಹಟ್ಟಿ ಗೊಲ್ಲರಹಟ್ಟಿ ಗ್ರಾಮದ ತಿಪ್ಪೇಸ್ವಾಮಿ ಮತ್ತು ಗೌಡಜ್ಜರು ತಿಪ್ಪೇಸ್ವಾಮಿಗೆ ಸೇರಿದ ಎರಡು ಟಗರು, ಐದು ಕುರಿ ಮತ್ತು ಐದು ಕುರಿಗಳಿಗೆ ಗಾಯವಾಗಿವೆ. ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಕುರಿ ಮೇಯಿಸುವಾಗ ಗಾಳಿ, ಸಿಡಿಲು, ಮಳೆ ಆರ್ಭಟಕ್ಕೆ ಮರದ ಕೆಳಗೆ ಕುರಿಗಳು ನಿಂತಿರುವಾಗ ಸಿಡಿಲು ಪಡೆದು ಅನಾಹುತ ಸಂಭವಿಸಿದೆ. ಕುರಿ, ಟಗರು 1 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ ಹಾಗೂ ಸಮೀಪದ ಅರ್ಜುನ ಚಿನ್ನನಹಳ್ಳಿ ಗ್ರಾಮದ ಸುರೇಶ್ ತಂದೆ ಪಾಲಯ್ಯ ಎಂಬುವರಿಗೆ ಸೇರಿದ ಎರಡು ಎತ್ತುಗಳು, ಒಂದು ಆಕಳು ಮರದಡಿ ಕಟ್ಟಿದ್ದ ಸಂದರ್ಭದಲ್ಲಿ ಸೋಮವಾರ ಸಂಜೆ ಜರುಗಿದೆ. ಸುಮಾರು 1,50, ಲಕ್ಷಕ್ಕೂ ಸಾವಿರಕ್ಕೂ ಹೆಚ್ಚು ಹಾನಿಯಾಗಿದೆ ಎಂದು ರೈತರು ತಿಳಿಸಿದ್ದಾರೆ. ಸ್ಥಳಕ್ಕೆ ಕಂದಾಯ ಪರಿವೀಕ್ಷಕರು ಹಾಗೂ ವಿಲೇಜ್ ಅಕೌಂಟ್ ಭೇಟ್ಟಿ ನೀಡಿ ಪರಿಶೀಲಿಸಿದ್ದಾರೆ.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ