ದಲಿತರ ಕುಂದು ಕೊರತೆಗಳ ಸಭೆಯಲ್ಲಿ ಅಸ್ಪೃಶ್ಯತೆ ಆಚರಣೆ ದೈನಂದಿನ ಚಲಾವಣೆ ನಾಣ್ಯದಂತಾಗಿದೆ :- ದಲಿತ ಮುಖಂಡ ಬಿ.ಮರಿಸ್ವಾಮಿ
ಕೂಡ್ಲಿಗಿ ( ಮೇ.29) :
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದಿನಾಂಕ 28- 5-2023 ರಂದು ನಡೆದ ವಿಜಯನಗರ ಜಿಲ್ಲಾ ಪೊಲೀಸ್ ಕೂಡ್ಲಿಗಿ ಉಪ ವಿಭಾಗ ಠಾಣೆಯಲ್ಲಿ ನಡೆಸಿದ ದಲಿತರ ಈ ಸಭೆಯಲ್ಲಿ ವಿಜಯನಗರ ಜಿಲ್ಲಾ ವರಿಷ್ಠಾಧಿಕಾರಿಗಳು ಬಿ.ಎಲ್, ಹರಿಬಾಬು ಅಧ್ಯಕ್ಷತೆಯಲ್ಲಿ ನಡೆದಂತಹ ದಲಿತರ ಕುಂದು ಕೊರತೆಗಳ ಸಭೆಯಲ್ಲಿ ವಿಜಯನಗರ ಜಿಲ್ಲೆಯ ಅನೇಕ ದಲಿತ ನಾಯಕರು ಸಭೆಗೆ ಹಾಜರಾಗಿದ್ದು ಈ ಸಭೆಯಲ್ಲಿ ಮಾನ್ಯ ಎಸ್ ಪಿ ಅವರಿಗೆ ದಲಿತ ನಾಯಕರು ದಲಿತರಿಗೆ ವಿಭಿನ್ನ ರೀತಿಯ ಶೋಷಣೆ ನಮ್ಮ ದಲಿತ ಸಮುದಾಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕೊಟ್ಟೂರಿನ ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ಮರಿಸ್ವಾಮಿ ಇವರು ತಮ್ಮ ದಲಿತ ಸಮುದಾಯದ ಮೇಲೆ ಮನೆ ಬಾಡಿಗೆ ಮಾಲೀಕರು ದಲಿತರಿಗೆ ಕೊಡುವ ವಿಷಯವಾಗಿ ವಿಭಿನ್ನ ರೀತಿಯ ಶೋಷಣೆ ನಮ್ಮ ಸಮುದಾಯದ ಮೇಲೆ ಬೀರುತ್ತಿದೆ ಎಂದು ತಮ್ಮ ಅನುಭವದ ಸ್ಥಿತಿ ಬಗ್ಗೆ ತಿಳಿಸಿದರು,

ಹಾಗೆ ಇಷ್ಟು ವರ್ಷಗಳು ನಮ್ಮ ದಲಿತ ಸಮುದಾಯದ ಮೇಲೆ ಗುಡಿ ಪ್ರವೇಶ ಹೋಟೆಲ್ ನಲ್ಲಿ ಟೀ ಗ್ಲಾಸ್ ತಟ್ಟೆಗಳ ಶೋಷಣೆ ಹಾಗೂ ಕೀಳುಮಟ್ಟದ ಶೋಷಣೆಗಳನ್ನು ಈ ಹಿಂದೆಲ್ಲಾ ನಡೆಯುತ್ತಿರುವುದನ್ನು ಈ ದಿನಮಾನಗಳಲ್ಲಿ ಕಾನೂನು ರಕ್ಷಣೆಯಿಂದ ಹಂತ ಘನ ಘೋರ ಶೋಷಣೆಯು ಈ ದಿನಗಳಲ್ಲಿ ಮುದುವರಿದವು ಗಳಾಗಿವೆ ,ಆದರೆ ಕೊಟ್ಟೂರು ಹಾಗೂ ಇನ್ನೂ ಕೆಲವು ಹಳ್ಳಿಗಳಲ್ಲಿ ನಮ್ಮ ದಲಿತ ಸಮುದಾಯದ ಅಧಿಕಾರಿ ವರ್ಗದವರಿಗೂ ಸಾಮಾನ್ಯ ದಲಿತ ಜನರಿಗೆ ಮನೆ ಬಾಡಿಗೆ ವಿಷಯವಾಗಿ ಮಾಲೀಕರು ಮನೆ ಬಾಡಿಗೆ ಕೊಡದೆ ಯಾವುದಾದರೂ ಒಂದು ನೆಪ ಹೇಳಿ ಮನೆ ಬಾಡಿಗೆ ಇರುವುದನ್ನು ಇವತ್ತು ಬೇರೆ ಕಡೆಯಿಂದ ಜೀವನ ಮಾಡಲಿಕ್ಕೆ ಹಾಗೂ ಅಧಿಕಾರಿಗಳು ವರ್ಗಾವಣೆಗೊಂಡಂತಹ ಕೆಲ ಹಂತದ ಅಧಿಕಾರಿಗಳಿಗೆ ಮನೆ ಬಾಡಿಗೆ ಕೊಡಲು ಮಾಲೀಕರು ನಿರಾಕರಿಸುವುದನ್ನು ಇದು ಒಂದು ರೀತಿಯ ಶೋಷಣೆ ನಮ್ಮ ದಲಿತ ಸಮುದಾಯದ ಮೇಲೆ ಪ್ರಭಾವ ಬೀರುತ್ತಿದೆ ಇದನ್ನು ಕಾನೂನಾತ್ಮಕವಾಗಿ ಯಾವುದಾದರೂ ಒಂದು ಮಾರ್ಗದಲ್ಲಿ ಕಾನೂನನ್ನು ರಚಿಸಿ ದಲಿತರಿಗೆ ಈ ವಿಷಯವಾಗಿ ಶೋಷಣೆ ಬೀರದಂತೆ ನ್ಯಾಯ ಒದಗಿಸಿ ಕೊಡಿ ಎಂದು ಮಾನ್ಯ ಶ್ರೀ ಹರಿಬಾಬು ಎಸ್ ಪಿ ಇವರಿಗೆ ಮರಿಸ್ವಾಮಿ ಇವರು ತಿಳಿಸಿದರು, ಹಾಗೆ ಇನ್ನೂ ದಲಿತ ಜನಗಳಿಗೆ ಕೆಲವು ಹಳ್ಳಿಗಳಲ್ಲಿ ಕಪ್ಪು ಸಿಸ್ಟಮ್ ಹಾಗೂ ಶೇವಿಂಗ್ ಕಟಿಂಗ್ ಶೋಷಣೆ ಇನ್ನು ಕೆಲ ಹಳ್ಳಿಗಳಲ್ಲಿ ಜೀವಂತವಾಗಿದೆ ಎಂದು ಎಸ್ಸಿ ಎಸ್ಟಿ ಕಮ್ಯುನಿಟಿಯ ಸದಸ್ಯರಾದ ಟಿ ಉಮೇಶ್ ಇವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾನ್ಯ ಎಸ್ ಪಿ ಶ್ರೀಹರಿಬಾಬು ಇವರು ಸಾಮೂಹಿಕವಾಗಿ ಹೇಳದೆ ಯಾವ ಹಳ್ಳಿ ಹೆಸರು,ಯಾವ ವ್ಯಕ್ತಿಯ ಹೆಸರು ಹಾಗೂ ಯಾವ ಹೋಟೆಲ್ ಮಾಲೀಕರ ಹೆಸರುಗಳನ್ನು ನಮಗೆ ಕೊಡಿ ನಾವು ಅವರ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು, ಹಾಗೂ ಕೂಡ್ಲಿಗಿ ಪಟ್ಟಣದಲ್ಲಿ ಮುಂದಿನ ಜೂನ್ ತಿಂಗಳಲ್ಲಿ ಶಾಲಾ-ಕಾಲೇಜುಗಳು ಪ್ರಾರಂಭವಾಗಲಿದ್ದು ಪಟ್ಟಣದಲ್ಲಿ ಭಾರಿ ವಾಹನಗಳ ಸಂಚಾರದಿಂದ ವಿಪರೀತವಾಗಿ ಧೂಳ್ ನಿಂದ ಮಕ್ಕಳಿಗೂ ಸಾರ್ವಜನಿಕರಿಗೂ ಆರೋಗ್ಯ ದೃಷ್ಟಿಯಿಂದ ಅಪಾಯ ಹಾಗೂ ವಿಪರೀತವಾಗಿ ವಾಹನಗಳ ಸಂಚಾರದಿಂದ ಅಪಘಾತ ಉಂಟಾಗುವ ಟ್ರಾಫಿಕ್ ಆಗುತ್ತೆ ಇದನ್ನು ಬಾರಿ ವಾಹನಗಳ ಸಂಚಾರವನ್ನು ಪಟ್ಟಣದಲ್ಲಿ ಬಿಟ್ಟು ಬೇರೆ ಮಾರ್ಗವಾಗಿ ಮಾಡಿ ಅಥವಾ ಶಾಲಾ-ಕಾಲೇಜುಗಳ ಪ್ರಾರಂಭದ ಸಮಯದಲ್ಲಿ ಅಥವಾ ಶಾಲಾ-ಕಾಲೇಜುಗಳ ಬಿಡುವ ಸಮಯದಲ್ಲಿ ಭಾರಿ ವಾಹನಗಳಿಗೆ ಅವಕಾಶ ಕೊಡದೆ ಬೇರೆ ಸಮಯದಲ್ಲಿ ಕಲ್ಪಿಸಿಕೊಡಿ ಎಂದು ವಾಲ್ಮೀಕಿ ಸಮುದಾಯದ ಮುಖಂಡರಾದ ಕಾವಲಿ ಶಿವಪ್ಪ ನಾಯಕ ಇವರು ತಿಳಿಸಿದರು, ಇನ್ನು ಹಲವಾರು ವಿಷಯ ವನ್ನು ದಲಿತ ಸಭೆಯಲ್ಲಿ ಚರ್ಚೆ ಮಾಡುವುದರೊಂದಿಗೆ ನಾವು ಕಾನೂನಾತ್ಮಕವಾಗಿ ಪರಿಹರಿಸಲು ಕೆಲಸ ಮಾಡುತ್ತೇವೆ ಎಂದು ವಿಜಯನಗರ ಜಿಲ್ಲಾ ಎಸ್ ಪಿ ಹರಿಬಾಬು ತಮ್ಮ ಸಿಬ್ಬಂದಿಯೊಂದಿಗೆ ವೇದಿಕೆ ಮೂಲಕ ತಿಳಿಸಿದರು.

ಈ ಸಂದರ್ಭದಲ್ಲಿ ಸಭೆಯಲ್ಲಿ ಹಾಜರಿದ್ದ ಮಾನ್ಯ ಕೂಡ್ಲಿಗಿ ಡಿವೈಎಸ್ಪಿ ಮಲ್ಲಿಕಾರ್ಜುನ್ ಮಲ್ಲಾಪುರ್ ಕೊಟ್ಟೂರು ಸಿಪಿಐ ವೆಂಕಟಸ್ವಾಮಿ ಹಗರಿಬೊಮ್ಮನಹಳ್ಳಿ, ಸಿಪಿಐ ಟಿ.ಮಂಜಣ್ಣ ಕೂಡ್ಲಿಗಿ ಪಿಎಸ್ಐ ಧನಂಜಯ್ ವೇದಿಕೆಯಲ್ಲಿ ಹಾಜರಿದ್ದು ಸಭೆಗೆ ದಲಿತ ಮುಖಂಡರುಗಳಾದ ಟಿ. ಉಮೇಶ್. ಚಲವಾದಿ ಮಹಾಸಭಾ ರಾಜ್ಯ ಕಾರ್ಯದರ್ಶಿ ಹಾಗೂ ಡಿ.ಎಸ್.ಎಸ್ ಸಂಘದ ತಾಲೂಕ ಸಂಚಾಲಕರಾದ ನಿವೃತ್ತ ಯೋಧ ಹೆಚ್. ರಮೇಶ್ ಮಾದಿಗ ದಂಡೋರ ತಾಲೂಕ ಅಧ್ಯಕ್ಷರಾದ ಮಹೇಶ್ ಹೆಗ್ಡಾಳ್, ಡಿ.ಎಸ್.ಎಸ್ ಮುಖಂಡರಾದ ನಾಗಪ್ಪ ಡಣಾಪುರ್ ,ಶ್ರೀ ವಾಲ್ಮೀಕಿ ಸಂಘದ ಮಾಜಿ ಅಧ್ಯಕ್ಷರಾದ ಜೈರಾಮ್ ನಾಯಕ್, ಡಿ.ಎಸ್.ಎಸ್ ತಾಲೂಕು ಖಜಾಂಚಿಯಾದ ಕುಮಾರ ಮಾಕನಾಡಕು, ಇನ್ನೋರ್ವ ಡಿ.ಎಸ್.ಎಸ್ ಮುಖಂಡರಾದ ಮೂಗಪ್ಪ ,ಹೀಗೆ ಅನೇಕ ಮುಖಂಡರುಗಳು ಸಭೆಯಲ್ಲಿ ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ. ಸಾಲುಮನೆ. ಕೂಡ್ಲಿಗಿ