ಸ್ವಗ್ರಾಮವಾದ ನರಸಿಂಹಗಿರಿ ಸರ್ಕಾರಿ ಶಾಲೆಯಲ್ಲಿ ತಮ್ಮ ಬಾಲ್ಯದ ವಿದ್ಯಾರ್ಥಿ ಜೀವನದ ಮೆಲುಕು ಹಾಕಿದ ಡಾll ಎನ್.ಟಿ.ಶ್ರೀನಿವಾಸ್ ಶಾಸಕರು.
ನರಸಿಂಹಗಿರಿ ಜೂನ್.2

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿಯ ಡಾಕ್ಟರ್ ಶ್ರೀನಿವಾಸ್ ಎನ್ ಟಿ ಮಾನ್ಯ ಜನಪ್ರಿಯ ಶಾಸಕರು ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸ್ವಗ್ರಾಮ ನರಸಿಂಹನಗಿರಿಗೆ ಭೇಟಿ ನೀಡಿ ಮಕ್ಕಳಿಗೆ ಪುಸ್ತಕ ಪೆನ್ನು ಸಮವಸ್ತ್ರ ಇನ್ನಿತರ ಸಾಮಗ್ರಿಗಳನ್ನು ನೀಡಲಾಯಿತು ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಯುವರಾಜ್ ನಾಯ್ಕ್ ಮುಖ್ಯ ಗುರುಗಳು ಶಿಕ್ಷಕರು ಸಿಬ್ಬಂದಿ ವರ್ಗ ಗ್ರಾಮಸ್ಥರು ಭಾಗವಹಿಸಿದ್ದರು.

ಮಾನ್ಯ ಶಾಸಕರು ಈ ಸಂದರ್ಭದಲ್ಲಿ ತಮ್ಮ ಬಾಲ್ಯದ ವಿದ್ಯಾರ್ಥಿ ಜೀವನದ ನೆನಪುಗಳನ್ನು ಮೆಲುಕು ಹಾಕುತ್ತಾ ನಾನು ಸಹ ಇದೇ ಶಾಲೆಯಲ್ಲಿ ಓದಿ ಗಿಡ ಹಾಕಿ, ಆ ಮರದ ನೆರಳಲ್ಲೇ ಮಕ್ಕಳಿಗೆ ಪೆನ್ನು ಪುಸ್ತಕ ಸಮವಸ್ತ್ರ ವಿತರಿಸುವುದು ನನಗೆ ತುಂಬಾ ಸಂತೋಷ ಆಗುವ ವಿಚಾರವಾಗಿದೆ ಎಂದರು. ಹಾಗೂ ಶಿಕ್ಷಕರಿಗೆ ನಮ್ಮ ಗ್ರಾಮದ ಎಲ್ಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿಬೇಕು ಎಂದು ಶಿಕ್ಷಕ ವೃಂದದೇವರಿಗೆ ತಿಳಿಸಿದರು. ಹಾಗೂ ನಮ್ಮ ತಾಲೂಕಿನ ಕ್ಷೇತ್ರದ ಎಲ್ಲಾ ಹೋಬಳಿಗಳ ಎಲ್ಲಾ ಹಳ್ಳಿಗಳಲ್ಲೂ ಸರ್ಕಾರದಿಂದ ಮೂಲಭೂತ ಸೌಲಭ್ಯಗಳು ಒದಗಿಸಿ ಕೊಡುವುದಾಗಿ ಭರವಸೆ ನೀಡಿದರು , ಹಾಗೂ ಮಕ್ಕಳಿಗೆ ನೀವು ಕೂಡ ಸಮಾಜದಲ್ಲಿ ಉನ್ನತ ಅಧಿಕಾರಿಗಳಾಗಿ ಬೆಳೆಯುವಂತೆ ವಿದ್ಯಾರ್ಥಿಗಳಿಗೆ ಶಿಕ್ಷಣದ ಎಲ್ಲಾ ರಂಗಳಲ್ಲೂ ಉತ್ತಮವಾಗಿ ಬೆಳೆದು ಎಲ್ಲಾ ವಿದ್ಯಾರ್ಥಿಗಳು ಮುಂದಿನ ದಿನಮಾನಗಳಲ್ಲಿ ಉತ್ತಮವಾದ ಸರ್ಕಾರಿ ದೊಡ್ಡ ದೊಡ್ಡ ನೌಕರಿಯ ಅಧಿಕಾರಿಗಳಾಗಿ ಶಿಕ್ಷಣದಲ್ಲಿ ಪದವಿಗಳನ್ನು ಪಡೆಯಬೇಕೆಂದು ಹಾರೈಸಿದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ