ಕರ್ನಾಟಕದ ನೂತನ ಪೌರಾಡಳಿತ ಸಚಿವ ರಹೀಮ್ ಖಾನ್ ರನ್ನು ಪೌರ ನೌಕರರ 25ಕ್ಕೂ ಹೆಚ್ಚು ಪದಾಧಿಕಾರಿಗಳು ಅಭಿನಂದಿಸಿದರು.
ಬೆಂಗಳೂರು ಜೂನ್.1

ಬೆಂಗಳೂರಿನ ವಿಕಾಸಸೌಧದಲ್ಲಿ ಬುಧವಾರದಂದು ಕರ್ನಾಟಕ ನೂತನ ಪೌರಾಡಳಿತ ಸಚಿವರಾದ ಶ್ರೀ ರಹೀಮ್ ಖಾನ್ ರವರನ್ನು ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ 25ಕ್ಕೂ ಹೆಚ್ಚು ಪದಾಧಿಕಾರಿಗಳು ವಿಕಾಸಸೌಧಕ್ಕೆ ದೌಡಾಯಿಸಿ, ನೂತನ ಸರ್ಕಾರದ ಸಚಿವರಿಗೆ ಅಭಿನಂದನ ಸನ್ಮಾನ ಕಾರ್ಯಕ್ರಮವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಕೆ. ಪ್ರಭಾಕರ್ ಹಾಗೂ ಕಾರ್ಯಾಧ್ಯಕ್ಷರಾದ ಪಿ. ಮುರುಳಿ ,ಪ್ರಧಾನ ಕಾರ್ಯದರ್ಶಿಯಾದ ಎಂ. ಗುರುನಾಥ್, ಹೆಬ್ಗೊಡೆ ರಾಜಣ್ಣ ,ಹಾಗೂ ಮಹಮ್ಮದ್ ಗೌಸ್, ರಾಜ್ಯಪೌರ ನೌಕರರ ಸಂಘದ ಬಹುತೇಕ ಪ್ರಮುಖ ಮುಖಂಡರುಗಳು ಭಾಗವಹಿಸಿದ್ದರು. ಹಾಗೂ ಪೌರ ನೌಕರರ ಸಂಘದ ಪದಾಧಿಕಾರಿಗಳು ವಿಕಾಸ ವಿಕಾಸಸೌಧದಲ್ಲಿ ನೆರೆದಿದ್ದ ಪೌರ ನೌಕರು ಮುಕ್ತವಾಗಿ ಚರ್ಚಿಸಿ ವಿವಿಧ ವೃಂದದವರು ಮುಂದಿನ ದಿನಗಳಲ್ಲಿ ಪೌರ ನೌಕರರನ್ನು ಹಾಗೂ ವಿವಿಧ ವೃಂದದವರನ್ನು ಖಾಯಂ ಗೊಳಿಸದೆ ಇರುವ ಪೌರ ಕೆಲಸ ಮಾಡುವವರನ್ನು ಖಾಯಂಗೊಳಿಸುವಂತೆ ಮುಕ್ತವಾದ ಚರ್ಚೆಯೊಂದಿಗೆ ಚರ್ಚಿಸಿ ,ಪೌರ ನೌಕರ ವೃಂದದವರು ನೂತನ ಸರ್ಕಾರಕ್ಕೆ ಮೊದಲನೇ ಮನವಿ ಪತ್ರವನ್ನು ಸಹ ಮಾನ್ಯ ಸಚಿವರಿಗೆ ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಕೆ. ಪ್ರಭಾಕರ್ ಇವರ ಮೂಲಕ ಎಲ್ಲರ ಸಮ್ಮುಖದಲ್ಲಿ ಮನವಿ ಪತ್ರ ಕೊಡಲಾಯಿತು.

ಹಾಗೂ ನಗರಾಭಿವೃದ್ಧಿ ಸಚಿವರಾದ ಶ್ರೀ ಸುರೇಶ್ ಭೈರತಿ ಅವರನ್ನು ಸಹ ಭೇಟಿ ಮಾಡಿ ಅವರನ್ನು ಸಹ ಪೌರ ನೌಕರರ ಸಂಘದ ಅಧ್ಯಕ್ಷ ಹಾಗೂ ಎಲ್ಲಾ ಪದಾಧಿಕಾರಿಗಳು ಅಭಿನಂದನೆಯಿಂದ ಸನ್ಮಾನ ಮಾಡಲಾಯಿತು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ