ಪಿಂಚಣಿ ಅದಾಲತ್ ಸದುಪಯೋಗಕ್ಕೆ ಸಲಹೆ.
ನಾಗರಹಳ್ಳಿ ಜೂನ್.3

ಕಂದಾಯ ಇಲಾಖೆಯ ಸಹಯೋಗದಲ್ಲಿ ತಾಲೂಕು ಹೋಬಳಿ ಮಟ್ಟದಲ್ಲಿ ಏರ್ಪಡಿಸುವ ಪಿಂಚಣಿ ಅದಾಲತ್ ಸೌಲಭ್ಯಗಳ ಸದುಪಯೋಗವನ್ನು ಅರ್ಹರು ಪಡೆದುಕೊಳ್ಳುವಂತೆ ತಹಸೀಲ್ದಾರ ನಾಗಯ್ಯ ಹಿರೇಮಠ ಹೇಳಿದರು.ತಾಲೂಕಿನ ನಾಗರಹಳ್ಳಿ ಗ್ರಾಮದ ಪ್ರಾಥಮಿಕ ಶಾಲಾ ಆವರಣದಲ್ಲಿ ಗ್ರಾಮ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಮಂಜುರಾತಿ ಪತ್ರ ವಿತರಿಸಿ ಮಾತನಾಡಿದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರಕಾರದ ಸವಲತ್ತು ತಲುಪಬೇಕು. ಈ ನಿಟ್ಟಿನಲ್ಲಿ ಜವಾಬ್ದಾರಿಯುತ ಪ್ರತಿಯೊಬ್ಬರೂ ಕೈ ಜೋಡಿಸಿ ಯೋಜನೆಗಳ ಸಾಕಾರಕ್ಕೆ ಮುಂದಾಗಬೇಕು. ಕಂದಾಯ ಇಲಾಖೆಯಿಂದ ವಿಕಲಚೇತನ,ವಿಧವಾ,ಸಂಧ್ಯಾಸುರಕ್ಷಾ ವೇತನ ಮುಂತಾದ ಹಲವು ಪಿಂಚಣಿ ಯೋಜನೆ ಅರ್ಹರಿಗೆ ತಲುಪಿಸಬೇಕು ಎಂದರು.ಸ್ಥಳೀಯ ಎಂಟು ಜನ ಅರ್ಹ ಫಲಾನುಭವಿಗಳಿಗೆ ಮಂಜುರಾತಿ ಪತ್ರ ವಿತರಿಸಿದರು.ಕಂದಾಯ ನಿರೀಕ್ಷಕ ಪಂಡಿತ ಕೊಡಹೊನ್ನ, ವಿಷಯ ನಿರ್ವಾಹಕರಾದ ದಾನಮ್ಮ ಕಂಬಾರ,ಉಮಾ ಕಟ್ಟಿಮನಿ, ಗ್ರಾಮ ಆಡಳಿತ ಅಧಿಕಾರಿ ಬಸವರಾಜ. ಅವಜಿ. ವೇದಿಕೆಯ ಮೇಲಿದ್ದರು.