ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ ಅತಿಥಿ ಶಿಕ್ಷಕರಿಗೆ ಮೊದಲ ಆದ್ಯತೆ ನೀಡಿ.
ವಿಜಯಪುರ ಜೂನ್.9

ಪ್ರಾಥಮಿಕ ಮತ್ತು ಪ್ರೌಢಶಾಲೆಯ ಅತಿಥಿ ಶಿಕ್ಷಕರಾದ ನಾವುಗಳು ಅನೇಕ ವರ್ಷಗಳಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಅತೀ ಕಡಿಮೆ ಸಂಬಳದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ ನಮ್ಮ ಇಡೀ ಕುಟುಂಬಗಳು ಈ ಉದ್ಯೋಗದ ಮೇಲೆ ಅವಲಂಬಿತವಾಗಿದೆ ಇವಾಗ ನಮಗೆ ಸೇವಾ ಅವಧಿಯನ್ನು ಕಡೆಗಣಿಸಿ ಅನ್ಯಾಯ ಮಾಡಲಾಗುತ್ತಿದೆ ಆದರೆ ಶಿಕ್ಷಣ ಇಲಾಖೆಯು ನಾವು ಸೇವೆ ಸಲ್ಲಿಸುತ್ತಿರುವ ಶಾಲೆಗಳಲ್ಲಿ ಮೆರಿಟ್ ಪದ್ಧತಿ ಅಳವಡಿಸಿಕೊಂಡು ಬೇರೊಬ್ಬ ಹೊಸ ಅತಿಥಿ ಶಿಕ್ಷಕರನ್ನು ನೇಮಕ ಮಾಡುವುದುರೊಂದಿಗೆ ನಮಗೆ ಶಾಲೆಯಿಂದ ಹೊರಗೂಳಿಯುವ ಸಾಧ್ಯತೆ ಪರಿಸ್ಥಿತಿ ಎದುರಾಗಿದೆ ನಮ್ಮಭವಿಷ್ಯದ ಮೇಲೆ ಕಲ್ಲಾಕುವ ಕೆಲಸ ಮಾಡುತ್ತಿದೆ ಹಾಗಾಗಿ ಶಿಕ್ಷಣ ಇಲಾಖೆಯು ಮೊದಲು ಸೇವೆ ಸಲ್ಲಿಸಿದವರಿಗೆ ಮೊದಲ ಆದ್ಯತೆ ಕೊಡಬೇಕು ಇಲ್ಲಾವಾದ ಪಕ್ಷದಲ್ಲಿ ನಿಮ್ಮ ಕಛೇರಿಯ ಮುಂದೆ ನಮ್ಮಜಿಲ್ಲೆಯ ಅತಿಥಿ ಶಿಕ್ಷಕರೆಲ್ಲರೂ ಪ್ರತಿಭಟನೆ ಮಾಡಲಾಗುವುದೆಂದು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ