ಮಹಾತ್ಮ ಪ್ರೊll ಬಿ ಕೃಷ್ಣಪ್ಪ ಶೋಷಣೆ ವಿರುದ್ಧ ಹೋರಾಟ ಮಾಡಿದ್ದಾರೆ.
ತರೀಕೆರೆ ಜೂನ್.9

ರಾಜ್ಯದಲ್ಲಿ ಜಾತಿ ಪದ್ಧತಿ, ಅಸ್ಪೃಶ್ಯತೆ ವಿರುದ್ಧ ಸಂಘಟಿತ ಹೋರಾಟ ಮಾಡಿದ ಮಹಾತ್ಮರು ಪ್ರೊ ಬಿ ಕೃಷ್ಣಪ್ಪ. ಎಂದು ಕ, ದ, ಸಂ,ಸ ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್ ವೆಂಕಟೇಶ್ ಪಟ್ಟಣದ ಕೋಟೆ ಕ್ಯಾಂಪಿನ ಡಾ. ಬಿಆರ್ ಅಂಬೇಡ್ಕರ್ ನಗರದ,ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ,ತಾಲೂಕು ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ್ದ ಮಹಾತ್ಮ ಪ್ರೊಫೆಸರ್ ಬಿ ಕೃಷ್ಣಪ್ಪ ರವರ 85ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದಾವಣಗೆರೆ ಜಿಲ್ಲೆ, ಹರಿಹರ ಪಟ್ಟಣದಲ್ಲಿ ಪೌರಕಾರ್ಮಿಕರ ಮಗನಾಗಿ ಬಡತನದಲ್ಲಿ ಹುಟ್ಟಿದ ಕೃಷ್ಣಪ್ಪರವರು ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡಿ, ಭದ್ರಾವತಿಯ ಸರ್ ಎಂ ವಿಶ್ವೇಶ್ವರಯ್ಯ ವಿಜ್ಞಾನ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಾ ರಾಜ್ಯದಲ್ಲಿ ದಲಿತರ ಮೇಲೆ ನಡೆಯುತ್ತಿದ್ದ ದೌರ್ಜನ್ಯ, ದಬ್ಬಾಳಿಕೆ, ಕೊಲೆ, ಅತ್ಯಾಚಾರಗಳ ವಿರುದ್ಧ ಸಂಘಟಿತ ಹೋರಾಟವನ್ನು ಮಾಡಿ, ದಮನಿತರಿಗೆ, ಧ್ವನಿ ಇಲ್ಲದವರಿಗೆ ನ್ಯಾಯ ಕೊಡಿಸಿದ್ದಾರೆ. ಈ ಹೋರಾಟದ ಫಲವಾಗಿ ದೌರ್ಜನ್ಯ ತಡೆ ಕಾಯಿದೆ ಜಾರಿಗೆ ಬಂದಿತು. ದಲಿತರ ಭೂಮಿಗಾಗಿ ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಪಿಟಿಸಿಎಲ್ ಕಾಯ್ದೆ ಜಾರಿಗೆ ಬಂದಿತು. ಹೆಂಡ ಸಾರಾಯಿ ಬೇಡ, ಹೋಬಳಿಗೊಂದು ವಸತಿ ಶಾಲೆ ಬೇಕು,ಎಂದು ಚಳುವಳಿ ಮಾಡಿದ್ದಕ್ಕೆ ಹೆಂಡ ಸಾರಾಯಿ ಮಾರಾಟವನ್ನು ಸರ್ಕಾರ ನಿಷೇಧಿಸಿ, ಹೋಬಳಿಗೊಂದು ವಸತಿ ಶಾಲೆಗಳನ್ನು ತೆರೆಯುತ್ತಿದೆ. ಚಂದ್ರಗುತ್ತಿಯ ಯಲ್ಲಮ್ಮ ಜಾತ್ರೆಯಲ್ಲಿ ನಡೆಯುತ್ತಿದ್ದ ಅನಿಷ್ಟ ಪದ್ದತಿ, ಮಹಿಳೆಯರ ಬೆತ್ತಲೆ ಸೇವೆಯನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ದರಿಂದ ಜಾತ್ರೆಯನ್ನು ಸರ್ಕಾರ ನಿಷೇಧಿಸಿ ಬೆತ್ತಲೆ ಸೇವೆಯನ್ನು ರದ್ದು ಮಾಡಿತ್ತು ಸರ್ಕಾರ. ಈಗ ಅವರ ಪ್ರತಿಯೊಂದು ಚಳುವಳಿ ಹೋರಾಟಗಳಿಂದ ಅನೇಕ ಶಾಸನಗಳು ಕಾಯ್ದೆಗಳನ್ನು ಸರ್ಕಾರ ಜಾರಿ ಮಾಡಿದೆ.

ಅಂಬೇಡ್ಕರ್ ಅವರ ವಿಚಾರಗಳು ಬರಹಗಳನ್ನು 70ರ ದಶಕದಲ್ಲಿ ರಾಜ್ಯಾದ್ಯಂತ ಪ್ರತಿ ಹಳ್ಳಿ ಹಳ್ಳಿಗೂ ಪ್ರವಾಸ ಮಾಡಿ, ಸಂಘಟನೆ ಮಾಡಿ ಜನರಲ್ಲಿ ಅರಿವು ಮೂಡಿಸಿ ಶೋಷಣೆಯ ವಿರುದ್ಧ ಹೋರಾಟ ಮಾಡಿದ್ದರಿಂದ ಇಂದು ಶೋಷಿತ ಕಡೆಯ ಸಮುದಾಯದವರು ಸಹ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಯಿತು. ಆದ್ದರಿಂದ ಡಾ. ಬಿಆರ್ ಅಂಬೇಡ್ಕರ್ ಮತ್ತು ಮಹಾತ್ಮ ಪ್ರೊ ಬಿ ಕೃಷ್ಣಪ್ಪ ರವರ ಹೋರಾಟಗಳು, ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮವನ್ನು ತಾಲೂಕು ಸಂಚಾಲಕರಾದ ಎನ್ ಹೆಚ್ ಬಸವರಾಜ್ ಉದ್ಘಾಟನೆ ಮಾಡಿದರು. ಮುಖ್ಯ ಶಿಕ್ಷಕಿಯಾದ ಮೆಹರೋನಿಸಾ, ಹಾಗೂ ತಾಲೂಕು ಸಂಘಟನಾ ಸಂಚಾಲಕರಾದ ಹಾದಿಕೆರೆ ಅಣ್ಣಪ್ಪ, ಬೈರನಾಯಕನಹಳ್ಳಿ ಗುರುಮೂರ್ತಿ ಉಪಸ್ಥಿತರಿದ್ದು, ಟಿ ಕಮಲಮ್ಮ ಪ್ರಾರ್ಥಿಸಿ, ತಾಲೂಕು ಖಜಾಂಚಿ ಕುಂಟಿನಮಡು ನಾಗರಾಜ್ ಸ್ವಾಗತಿಸಿ ವಂದಿಸಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ