ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಂತಾಗಿದೆ ಎಚ್.ಆರ್. ರಸ್ತೆಗಳು ; ಇನ್ನಾದರೂ ಅಧಿಕಾರಿಗಳಿಗೆ ಎಚ್ಚೆತ್ತುಗೊಳ್ಳಲು ಸಾರ್ವಜನಿಕರ ಆಗ್ರಹ …….

ಮೊಳಕಾಲ್ಮೂರು ಪಟ್ಟಣದಲ್ಲಿ ಎಚ್ಆರ್ ರಸ್ತೆ ನಡೆಯುತ್ತಿರುವ ಕಾಮಗಾರಿ ವೆಚ್ಚ 30 ಕೋಟಿ ಅನುದಾನ ಬಿಡುಗಡೆಯಾಗಿದ್ದು , ಸರಿಯಾದ ರೀತಿ ಇಂದ ಅಗಲೀಕರಣ ಆಗುವುದಿಲ್ಲವೆಂದು ಕಂಡುಬರುತ್ತದೆ …..

ಮೊಳಕಾಲ್ಮೂರು ( ಜೂನ್.9 ) :

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಎದ್ದಲ ಬೊಮ್ಮೈನಟ್ಟಿ ಇಂದ ಪಿಟಿ ಅಟ್ಟಿವರಿಗೆ ಎಚ್ ಆರ್ ರಸ್ತೆ ಮೊಳಕಾಲ್ಮೂರು ಪಟ್ಟಣದಲ್ಲಿ ಹಿಂದೆ ಈ ಎಚ್ ಆರ್ ರಸ್ತೆಗೆ ಸರ್ಕಾರದ ಕಾನೂನಾತ್ಮಕವಾಗಿ ಎಷ್ಟು ಅಗಲ ಅಳತೆ ಇದೆ ಎಂಬುದು ಮೊಳಕಾಲ್ಮುರು ಪಟ್ಟಣದ ಸಾರ್ವಜನಿಕರು ಪ್ರಜ್ಞಾವಂತರಿದ್ದು ಪ್ರತಿಯೊಂದನ್ನೂ ಕೂಡ ಸಾವಧಾನದಿಂದ ಅವಲೋಕಿಸುತ್ತಾರೆ ಅನ್ನುವ ವಿಚಾರ ತಿಳಿಯದಂತೆ ಕಾಣುತ್ತದೆ . ಕಾರಣ ಎಚ್ ಆರ್ ರಸ್ತೆ ಅಗಲೀಕರಣದ ಸಮಸ್ಯೆ ಇನ್ನೂ ಸರಿಯಾದ ರೀತಿಯಿಂದ ಆಗಿರುವುದಿಲ್ಲ.

ರಸ್ತೆ ಕಾಮಗಾರಿ ನಡಿತಾ ಇದ್ದು ಹಿಂದೆ ಇರುವಂತ ಚರಂಡಿ ಅನುಗುಣವಾಗಿ ರಸ್ತೆ ಅಗಲೀಕರಣ ಮಾಡಬೇಕಾಗಿತ್ತು , ಆದರೆ ಈಗ ಹಳೆ ಚರಂಡಿ ಹೊರತುಪಡಿಸಿ ರಸ್ತೆಯ ಪಕ್ಕಕ್ಕೆ ಹೊಸ ಚರಂಡಿ ಮಾಡಿ ರಸ್ತೆ ಅಗಲೀಕರಣದ ಟು ವೀಲರ್ ಓಡಾಡುವ ಗಾಡಿಗಳಿಗೆ ರಸ್ತೆ ಮಾಡಿದರೆ ಮತ್ತು ಸಾರ್ವಜನಿಕರು ಓಡಾಡುವ ರಸ್ತೆ ಮಾಡಿದರೆ ಮತ್ತು ದೊಡ್ಡ ದೊಡ್ಡ ವಾಹನಗಳು ಓಡಾಡುವ ರಸ್ತೆ ಮಾಡಿದರೆ ಮತ್ತು ಮಧ್ಯದಲ್ಲಿ ಡಿವೈಡರ್ ಮಾಡಿದರೆ ರಸ್ತೆ ಆಗಲೀಕರಣ ಸರಿಯಾದ ರೀತಿಯಿಂದ ಆಗದು ಎಂದು ಕಂಡುಬರುತ್ತದೆ , ಏಕೆಂದರೆ ಪ್ರಭಾವಿಗಳ ಒತ್ತಡದಿಂದ ರಸ್ತೆಯ ಪಕ್ಕಕ್ಕೆ ಲಾಡ್ಜ್ ಗಳು ಬಿಲ್ಡಿಂಗ್ ಗಳು ಇರುವವರು ಅಧಿಕಾರಿಗಳನ್ನು ಬಳಸಿಕೊಂಡು ರಸ್ತೆ ಇರಿಸು ಮುರಿಸು ಅಗಲೀಕರಣ ಕಂಡು ಬರುತ್ತದೆ ಮತ್ತು ಚರಂಡಿ ಎಸ್ಟಿಮೇಟ್ ಪ್ರಕಾರವಾಗಿ ಕ್ವಾಂಟಿಟಿ ಕ್ವಾಲಿಟಿ ಇಲ್ಲದಿರುವುದರಿಂದ ಸಿಕ್ಸ್ ಎಂ ಎಂ ರಾಡ್ ಹಾಕಿ ಏಯ್ಟ್ ಎಂ ಎಂ ರಾಡ್ ಹಾಕಿ ಚರಂಡಿ ಕಾಮಗಾರಿ ಮುಗಿಸಿದ್ದಾರೆ ಮತ್ತು ಈ ಎಚ್ ಆರ್ ರಸ್ತೆಗೆ 4. 5 ಕಡೆ ಡಕ್ಕುಗಳು ಹಾಕಬೇಕಾಗಿತ್ತು ಆದರೆ ಡಕ್ಕುಗಳು ಹಾಕದೆ ಸಾಪಾಗಿ ರಸ್ತೆ ಮಾಡಿದ್ದಾರೆ .

ಮೊಳಕಾಲ್ಮುರು ಪಟ್ಟಣದಲ್ಲಿ ಇಂಥ ಸಮಸ್ಯೆಯನ್ನು ಪಟ್ಟಣ ಪಂಚಾಯತಿಯವರು ಯಾರು ತಲೆಕೆದಿಸಿಕೊಂಡಿಲ್ಲ. ಪಿಡಬ್ಲ್ಯೂಡಿ ಸಂಬಂಧಪಟ್ಟ ಅಧಿಕಾರಿ ಪ್ರಭಾವಿಗಳಿಗೆ ರಾಜಕೀಯ ಒತ್ತಡದಿಂದ ಈ ರೀತಿ ರಸ್ತೆ ಕಾಮಗಾರಿ ನಡೆದಿದೆ ಎಂದು ಸಾರ್ವಜನಿಕ ವಲಯಗಳಲ್ಲಿ ಪಿಸು ಪಿಸು ಮಾತುಗಳಿಂದ ಕೇಳಿಬರುತ್ತದೆ ಮೊಳಕಾಲ್ಮೂರು ಪಟ್ಟಣದಲ್ಲಿ ನಡೆದಿರುವ ಎಚ್ ಆರ್ ರಸ್ತೆ ಅಗಲೀಕರಣದ ಅಳತೆ ಕಮ್ಮಿ ಮಾಡಿರುವುದರಿಂದ ಮುಂದೆ ಜನಸಂಖ್ಯೆ ಹೆಚ್ಚುತ್ತಲೆ ಇರುತ್ತದೆ ಆದರೆ ಈ ರಸ್ತೆ ನೋಡಿದರೆ ಇಕ್ಕಟ್ಟಿನ ರಸ್ತೆ ಮತ್ತು ಟ್ರಾಫಿಕ್ ಮುನ್ಸೂಚನೆಯಂತೆ ರಸ್ತೆ ಅಗಲೀಕರಣ ಆಗುತ್ತದೆ ಎಂದು ಭಾವಿಸಿದ ಜನರಿಗೆ ಗರ್ ಬಡಿದಂತಾಗಿರುವುದು ಗುಟ್ಟಾಗಿ ಉಳದಿಲ್ಲ.

ಮಾನ್ಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಎನ್. ವೈ. ಗೋಪಾಲಕೃಷ್ಣ ಶಾಸಕರು ಈ ಎಚ್ ಆರ್ ರಸ್ತೆ ಎಸ್ಟಿಮೇಟ್ ಬಗ್ಗೆ ಗಮನಹರಿಸಿ ಇನ್ನೂ ಮುಂದೆ ತೊಂದರೆ ಆಗದಂತೆ ಎಲ್ಲಿ ತಪ್ಪು ನಡೆದಿದೆಯೋ ಅಲ್ಲಿ ತಿದ್ದಿ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ಕೊಟ್ಟು ರಸ್ತೆ ಅಗಲೀಕರಣ ಮಾಡುವಂತೆ ತಿಳಿಸಬೇಕು ಮತ್ತು ಕ್ವಾಟ್ಲೆಗುಂದಿ ಕೆರೆವರಿಗೂ ಏಳು ಕೋಟಿ ಚರಂಡಿಗೆ ಅನುದಾನ ಬಿಡುಗಡೆಯಾಗಿದ್ದು ಈಗ ಆ ಹಳೆ ಚರಂಡಿಗಳು ನುಂಕಪ್ಪನ ಕಟ್ಟೆಯಿಂದ ಬ್ಲಾಕ್ ಆಗಿ ಹೋಗಿವೆ ಆದರೆ ಹಳೆ ಚರಂಡಿಗಳನ್ನು ಮುಚ್ಚಿರುತ್ತದೆ ಎಂದು ಕಂಡುಬರುತ್ತದೆ ಆದರೆ ಮಳೆ ಜಾಸ್ತಿ ಬಂದು ಕೆರೆಕಟ್ಟುಗಳು ತುಂಬಿದರೆ ಅದೇ ಚರಂಡಿಯಿಂದ ನೀರು ಬರಬೇಕಾಗುತ್ತೆ ಆವಾಗ ಚರಂಡಿ ವ್ಯವಸ್ಥೆ ಇಲ್ಲದೆ ಮನೆಗಳಿಗೆ ನೀರು ನುಗ್ಗುವ ಪರಿಸ್ಥಿತಿ ಬರಬೇಕಾಗುತ್ತದೆ ಎಂದು ವರದಿಯಾಗಿದೆ.

www.sknewskannada.in

ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button