“ಜನನಿ”…..

ಜ- ಜಗದೊಳಗಿನ ಮೊದಲ ದೇವರು
ನ-ನಮ್ಮ ಉಸಿರಿಗೆ ಆದಳು ಹೆಸರು
ನಿ-ನಿಸ್ವಾರ್ಥ ಮನೋಭಾವನೆಯ ಕಲ್ಪತರು “ತಾಯಿ”…..
ತಾ-ತಾಯಿ ತಾನೇ ಮೊದಲ ದೇವರು
ಯಿ- ಯಾರು ಆಗರೂ ತಾಯಿಗೆ
ಸರಿಸಮಾನರು
“ಅಮ್ಮ”…..
ಅ- ಅತ್ತರೆ ನಾವು ತಾನು ನೋವು ಪಡುವ
ಮ್ಮ-ಮಕ್ಕಳಿಗಾಗಿ ತನ್ನ ಬದುಕನ್ನೇ ತ್ಯಾಗ
ಮಾಡುವ
“ಅವ್ವ”…..
ಅ- ಅಕ್ಷರ ಕಲಿಸಿದಳು ಮೊದಲ ಗುರುವಾಗಿ
ವ್ವ- ವರವ ನೀಡಿದಳು ಕಣ್ಣಿಗೆ ಕಾಣುವ
ದೇವರಾಗಿ
ಹಡೆದವ್ವ
ಹ- ಹಂಬಲಿಸಿದಳು ಕರುಳ ಕುಡಿಯ
ಬರುವಿಕೆಯನ್ನು
ಡೆ- ಧಣಿವರಿಯದೆ ಹೊತ್ತಳು ನವಮಾಸ
ಗರ್ಭವನ್ನು
ದ- ದಡ ತಲುಪಿಸಿದಳು ದಾಟಿ ಕಷ್ಟಗಳನ್ನು
ವ್ವ- ವರ್ಣಿಸಲು ಹುಡುಕಬೇಕಾಗಿದೆ ಹೆಚ್ಚು
ಪದಗಳನ್ನು
“ಮಾತೆ”…..
ಮಾ- ಮಾತುಗಳಿಗೆ ಧ್ವನಿಯಾಗಿ
ಪೋಷಿಸಿದಳು
ತೆ- ತೆಗಳಿದವರೇ ಹೊಗಳುವಂತೆ ಬೆಳೆಸಿದಳು
ಶ್ರೀ ಮುತ್ತು ಯ.ವಡ್ಡರ
ಶಿಕ್ಷಕರು 9019565294