ಅಭಿಮಾನಿಗಳಿಂದ ಬಿ.ವಿ ನಾಯಕರ 58 ನೇ. ಹುಟ್ಟು ಹಬ್ಬ ಆಚರಣೆ.
ಮಾನ್ವಿ ನ.14

ಮಾಜಿ ಸಂಸದ ಬಿ.ವಿ ನಾಯಕರ 58 ನೇ. ಹುಟ್ಟು ಹಬ್ಬವನ್ನು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಅಂಧರಿಗೆ, ವೃದ್ಧಾಶ್ರಮ ಹಾಗೂ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಆಚರಿಸಿದರು.
ಸರಳ ಸಜ್ಜನಿಕೆಯ ವ್ಯಕ್ತಿ ಹಾಗೂ ಅಭಿಮಾನಿಗಳ ಹೃದಯಕ್ಕೆ ಮಿಡಿಯುವ ವ್ಯಕ್ತಿ ಬಿ.ವಿ ನಾಯಕ ಅವರು ಎಂದು ಕಾರ್ಯಕರ್ತರು ಶುಭ ಹಾರೈಸಿದರು.
ಬಿ.ವಿ ನಾಯಕ ಅವರ 58 ನೇ. ಹುಟ್ಟು ಹಬ್ಬದ ನಿಮಿತ್ತ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸೇರಿ ಕೊಂಡು ಹಣ್ಣು ಹಂಪಲು ವಿತರಿಸಿದರು. ಬಿ.ವಿ ನಾಯಕರಿಗೆ ಆಯುಷ್ಯ ಮತ್ತು ಆರೋಗ್ಯ ದೇವರು ಕೊಡಲಿ ಎಂದು ಪ್ರಾರ್ಥಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ