ದೀಪಾವಳಿ…..

ಸಾಲು ಸಾಲು ಹಣತೆಗಳ ಬೆಳಕಿನಲ್ಲಿ
ಈ ದೀಪಾವಳಿಯು ಬಂದಿಹುದು
ಮನೆ ಮನಗಳಲ್ಲಿ ಹರುಷವ ಚೆಲ್ಲಿ
ಸಡಗರ ಸಂಭ್ರಮದಿ ನಗುತಿಹುದು
ಬಾಳಿನ ಜ್ಯೋತಿಯು ಪ್ರಜ್ವಲಿಸುತ
ಜಾತಿ ಧರ್ಮಗಳ ಸರಿಸುವಂತಾಗ
ಲಿಮನುಜ ಮತಕ್ಕೆ ತಲೆದೂಗಿ
ಎಲ್ಲರ ಮನ ಬೆಳಗುವಂತಾಗಲಿ
ನಾವೂ ಮರೆತು ನಗುವ ಚೆಲ್ಲಿ
ಆಸೆ ಕನಸುಗಳನು ಅರಳಿಸಿಹುದು
ನವ ಚೈತನ್ಯದ ಬೆಳಕಿನಲ್ಲಿ
ತನು ಮನವನು ತಣಿಸಿಹುದು
ನೋವಾ ಮರೆತು ನಗುವ ಚೆಲ್ಲಿ
ಹೂವಂತೆ ಮನವು ಅರಳಿಹುದು
ಬಣ್ಣ ಬಣ್ಣಗಳ ಚಿತ್ತಾರದ ಬೆಳಕಲ್ಲಿ
ಒಲವಿನಾಟದಿ ಮನವು ಬೆಳಗಿಹುದು
ಕಷ್ಟಗಳನು ಹಿಂದೆ ಸರಿಸುತ
ನಮ್ಮ ಬದುಕಿನಲಿ ನಗುವ ತರಲಿ
ಈ ದೀಪಾವಳಿಯು ಎಲ್ಲರ ಮನೆ
ಮನಗಳಲ್ಲಿ ಬೆಳಕನು ತರುವಂತಾಗಲಿ
– ಅಶ್ವಿನಿ ನಕ್ಷತ್ರ
ಆನೇಕಲ್