ನಿಧನ ವಾರ್ತೆ:ಗೌರಮ್ಮ ಭರಮನಗೌಡ ಡಿ ಹನುಮನಹಳ್ಳಿ. ನಿಧನ.

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ತೂಲಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಭರಮನಗೌಡ ಇವರ ಧರ್ಮಪತ್ನಿ ಗೌರಮ್ಮನವರು ಶನಿವಾರ ಮಧ್ಯಾಹ್ನ ಅನಾರೋಗ್ಯದಿಂದ ಶಿವಮೊಗ್ಗದಲ್ಲಿರುವ ಆಸ್ಪತ್ರೆಯಲ್ಲಿ ವಿಧಿವಶವಾಗಿರುತ್ತಾರೆ.ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು ಅಪಾರ ಬಂದು ಬಳಗವನ್ನು ಗೌರಮ್ಮ ಇವರು ಬಿಟ್ಟು ಅಗಲಿದ್ದಾರೆ.*ಅಂತ್ಯಕ್ರಿಯೆ* ಹನುಮನಹಳ್ಳಿ ಗ್ರಾಮದಲ್ಲಿ 14.01.2024 ರಂದು ಬೆಳಿಗ್ಗೆ 11:30 ಕ್ಕೆ ಅಂತ್ಯ ಸಂಸ್ಕಾರ ನೆರವೇರಲಿದೆ.ತೂಲಹಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯರು ವಿವಿಧ ಸಮಾಜದ ಮುಖಂಡರು ಹನುಮನಹಳ್ಳಿ ಸಮಸ್ತ ಗ್ರಾಮಸ್ಥರು ರೈತ ಕಾರ್ಮಿಕರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ವಿವಿಧ ಜನ ಪ್ರತಿನಿಧಿಗಳು ಹಿರಿಯ ನಾಗರಿಕರು ಗಣ್ಯರು ವಿವಿಧ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಗೌರಮ್ಮನವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ.ಕೊಟ್ಟೂರು