ಒಂದರಿಂದ ಹತ್ತು ತಾಯಿಯೇ ಮುತ್ತು…..

ಒಂದು ಎರಡು
ತಾಯಿಯ ಲಾಲಿ ಹಾಡು
ಎರಡು ಮೂರು
ತಾಯಿಯೇ ದೇವರು
ಮೂರು ನಾಲ್ಕು
ತಾಯಿಗೆ ನಮಸ್ಕಾರ ಹಾಕು
ನಾಲ್ಕು ಐದು
ತಾಯಿಯ ಮಡಿಲಲಿ ಓದು
ಐದು ಆರು
ತಾಯಿಯಂತೆ ಇಲ್ಲ ಯಾರು
ಆರು ಏಳು
ತಾಯಿಯೊಂದಿಗೆ ಬಾಳು
ಏಳು ಎಂಟು
ಇರಲಿ ತಾಯಿಯ ನಂಟು
ಎಂಟು ಒಂಬತ್ತು
ಅಮೃತ ತಾಯಿಯ ತುತ್ತು
ಒಂಬತ್ತು ಹತ್ತು
ತಾಯಿ ದೇವರು ಕೊಟ್ಟ ಮುತ್ತು
ಶ್ರೀ ಮುತ್ತು. ಯ. ವಡ್ಡರ
( ಶಿಕ್ಷಕರು )
ಬಾಗಲಕೋಟ
Mob-9845568484