“ಚುಂಬಕ ಗಾಳಿ”…..

ಸೂರ್ಯ ಚಂದ್ರ ಬೆಳಗುವ ಬೆಳಕಲಿ
ಭೂತಾಯಿ ಒಡಲ ಮುತ್ತಿನ ತೆನೆಗೆ
ಅನ್ನದಾತನ ಶ್ರಮದ ಬೆವರ ಬೆಳೆಗೆ
ಜಗದಲಿ ಸುತ್ತಿ ಸುಳಿವ ಜೀವನ ಕಳೆ
ಭೂಮಿ ಆಗಸ ಒಂದಾಗಿಸುವ ತಂಗಾಳಿ
ಕೋಗಿಲೆಗಳ ಗಾನ ಸುನಾದ ಲಹರಿ
ನವಿಲುಗಳ ಚಂದದ ನೃತ್ಯೆದ ಸುವ್ವಾಲಿ
ಸಕಲ ಜೀವರಾಶಿಗಳ ನಿತ್ಯ ಬಾಳ್ವೇಗೆ
ನವ ಜೋಡಿ ಪ್ರೇಮಿಗಳ ವಿಲಾಸಿ ನಗೆಗೆ
ನಿತ್ಯ ಜೀವನದ ಹರುಷದ ಹೊಳಪು
ಹೂವು ಲತೆಗಳ ಬಳಕಲು ಒನಪು
ವಾರಿಧಿ ತೆರೆಗಳ ಅಂದವು ಚುಂಬಕ ಗಾಳಿ
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ.