“ಜೈ ಗದಾ ಕೇಸರಿ” ಶೀಘ್ರದಲ್ಲೇ ಬಿಡುಗಡೆ.
ಹೊಸಪೇಟೆ ಸ.08

ಬಿ.ಬಿ ಮೂವ್ಹಿ ಕ್ರಿಯೇಷನ್ಸ್ ನಿರ್ಮಾಣದ “ಜೈ ಗದಾ ಕೇಸರಿ” ಚಲನ ಚಿತ್ರ ಇದೀಗ ಸೆನ್ಸಾರ್‌ಗೆ ಹೋಗಿದ್ದು ಶೀಘ್ರದಲ್ಲೇ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುವುದು ಎಂದು ಕಾರ್ಯಕಾರಿ ನಿರ್ಮಾಪಕ ತಿಪ್ಪೇಸ್ವಾಮಿ ತಿಳಿಸಿದ್ದಾರೆ.ಕಲ್ಯಾಣ ಕರ್ನಾಟಕದ ಹೊಸಪೇಟೆ, ಸಂಡೂರ, ಬಳ್ಳಾರಿ, ಹಂಪಿ, ಕಮಲಾನಗರ, ಬಳ್ಳಾರಿ, ಅಲ್ಲದೆ ಗೋವಾ, ಬೆಂಗಳೂರ ಮೊದಲಾದ ಕಡೆ ನಲವತ್ತೈದು ದಿನಗಳ ಕಾಲ ಸತತ ಚಿತ್ರೀಕರಣ ನಡೆಸಲಾಗಿದ್ದು, ಆಕ್ಷನ್ ಮತ್ತು ಪ್ರೀತಿ, ಮಮತೆ ಹೊಂದಿದ್ದು, ಚಿತ್ರದಲ್ಲಿ ಐದು ಹಾಡುಗಳಿವೆ. ಗೀತೆಗೆ ಸಾಹಿತ್ಯವನ್ನು ಕಾರ್ತಿಕ ವೆಂಕಟೇಶ, ನಾಗಮೂರ್ತಿ ರಚಿಸಿದ್ದಾರೆ. ಆರು ಸಾಹಸ ದೃಶ್ಯಗಳಿವೆ. ಚಿತ್ರಾ, ಈಶ, ಶುಚಿ, ಇಂದು ನಾಗರಾಜ್, ಪ್ರಶಾಂತ, ಶೇಷಗಿರಿ, ಚಂದನಕುಮಾರ ಗುಪ್ಪತ, ಹಾಡಿದ್ದಾರೆ. ನಾಯಕನಾಗಿ ,ರಾಜಾಚರಣ, ಈಶ್ವರ ನಾಯಕ್, ಅವಿನಾಶ, ಅರವಿಂದ ರಾವ್, ಹೊನ್ನವಳ್ಳಿಕೃಷ್ಣ, ಸಿದ್ದಿಪ್ರಶಾಂತ, ಜಯರಾಮ್, ಧರ್ಮರಾಜ್, ನಾಯಕಿಯಗಿ ಜೀವಿತಾ, ಕೋಮಲ ಅಭಿನಯಿಸಿದ್ದಾರೆ.

ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಶ್ಯಾಮ್ ಸಿಂಧನೂರು, ಎಸ್. ನಾಗರಾಜ್, ಸಂಗೀತ ಜಾರ್ಜ್ ಥಾಮಸ್ ಸ್ಯಾಮ್-ಆರೋನ್ ಕಾರ್ತಿಕ್ ವೆಂಕಟೇಶ್-ಪ್ರಸನ್ನ ಬೋಜಶೆಟ್ಟರ್, ಸಂಕಲನ ಪೂಜಾ ಸಿ , ನೃತ್ಯ ಕಂಬಿರಾಜ್-ಪೂಜಾ. ಸಿ, ಸಾಹಸ ಸುಪ್ರೀಂಸುಬ್ಬು ಸೂರಿ-ರಾಮದೇವ್ ಜಾನಿ-ವೈಲೆಂಟ್ ವೇಲು-ಅಲ್ಟಿಮೇಟ್ ಶಿವು, ಕಲೆ ಶಿವಕಾಂತ್, ಪ್ರಸಾಧನ ಅಶೋಕ್-ವಿಜಿ, ಕೇಶಾಲಂಕಾರ, ವಸ್ತ್ರಾಲಂಕಾರ ಪ್ರಭು, ಪ್ರಚಾರ ಕಲೆ ಗುರು ಯಲ್ಲಾಪುರ, ಪಿ.ಆರ್ ಓ ಡಾ, ಪ್ರಭು ಗಂಜಿಹಾಳ, ಡಾ.ವೀರೇಶ್ ಹಂಡಿಂಗಿ, ಸಹ ನಿರ್ದೇಶಕರು ಕುಮಾರ್ ಡಿ, ನಾಗಮೂರ್ತಿ, ಸೋಮು, ವರದ, ಮಾದೇಶ, ಯೋಗಿ, ಕಥೆ – ಚಿತ್ರಕಥೆ – ಸಂಭಾಷಣೆ – ನಿರ್ದೇಶನ ಯತೀಶ್ ಕುಮಾರ್, ವಿ, ಮಂಜು ಹೊಸಪೇಟೆ ಅವರದಿದೆ. ಕಾರ್ಯಕಾರಿ ನಿರ್ಮಾಪಕರು ತಿಪ್ಪೇಸ್ವಾಮಿ (ಗೌಳಿ), ಸಹ-ನಿರ್ಮಾಪಕರು ಈಶ್ವರ ನಾಯಕ, ನಿರ್ಮಾಪಕರು ಬಸವರಾಜ ಎಲ್ಲರೂ ವಿಜಯನಗರ ಜಿಲ್ಲೆಯವರಾಗಿದ್ದಾರೆ.
*****
ವರದಿ:ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬