ಸಸಿ ನೆಟ್ಟು ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ – ಚಾಲನೆ ನೀಡಿದರು.
ರಾಯಭಾಗ ಸ.10

ಪ್ರತಿಯೊಬ್ಬರು ತಮ್ಮ ಮನೆಯ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಂಡಲ್ಲಿ ಯಾವುದೇ ತರಹದ ರೋಗಗಳೂ ಉಂಟಾಗುವುದಿಲ್ಲ ಇದರಿಂದ ಆರೋಗ್ಯವಂತ ರಾಗಿರಬಹುದು ಎಂದು ಬಿಡಿಸಿಸಿ ಬ್ಯಾಂಕ ನಿರ್ದೇಶಕ ಅಪ್ಪಾಸಾಹೇಬ ಕುಲಗುಡೆ ಅವರು ಹೇಳಿದರು.ಅವರು ಪಟ್ಟಣದ ರಾಯಭಾಗ ವಿವಿದ್ದೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘ ರಾಯಬಾಗದಲ್ಲಿ ಸಹಕಾರಿ ಸಂಘಗಳ ಇಲಾಖೆ ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ರಾಯಬಾಗ ಇವರ ಆಶ್ರಯದಲ್ಲಿ ಸಸಿ ವಿತರಣೆ ಕಾರ್ಯಕ್ರಮವನ್ನು ಸಸಿ ನೆಟ್ಟು ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿ, ಸ್ವೀಜರಲ್ಯಾಂಡ ದೇಶಧಲ್ಲಿ ತಾವು ಕಂಡ ಕೃಷಿ ಬಗ್ಗೆ ವಿವರಿಸುತ್ತಾ ಮಾತನಾಡಿ, ವಿದೇಶಗಳಲ್ಲಿ ಜನರು ಎಲ್ಲೆಂದರಲ್ಲಿ ಕಸಗಳನ್ನು ಎಸೆಯುವದಿಲ್ಲ ಅದನ್ನು ಕಸದ ಡಬ್ಬಿಗೆ ಹಾಕಿ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಚತೆಯನ್ನು ಕಾಪಾಡುತ್ತಾರೆ. ಶಿಸ್ತು ಬದ್ದತೆಯನ್ನು ಕಾಪಾಡಿ ಕೊಂಡು ಕೃಷಿಯೊಂದಿಗೆ ಹೈನುಗಾರಿಕೆಯನ್ನು ಕಡಿಮೆ ಸಮಯದಲ್ಲಿ ಯಂತ್ರೋಪಕರಣಗಳನ್ನು ಬಳಸಿ ಉತ್ತಮವಾದ ಆದಾಯವನ್ನು ಪಡೆಯುತ್ತಾರೆ. ಆದ್ದರಿಂದ ರೈತರು ಕೃಷಿಯಲ್ಲಿ ಮುಂದುವರೆದ ದೇಶಗಳಿಗೆ ಪ್ರವಾಸ ಕೈಕೊಂಡು ಅಲ್ಲಿಯ ಕೃಷಿ ಬಗ್ಗೆ ಅಧ್ಯಯನ ಮಾಡಬೇಕೆಂದು ಹೇಳಿದರು. ಶುದ್ದವಾದ ಗಾಳಿ ಪರಿಸರದಿಂದ ಮಾತ್ರ ದೊರೆಯಲು ಸಾಧ್ಯ ಆದ್ದರಿಂದ ನಾವೇಲ್ಲರು ಪರಿಸರದ ಬಗ್ಗೆ ಆಸಕ್ತಿ ಬೆಳಸಿಕೊಂಡು ಪ್ರತಿವರ್ಷ ಸಾಮಾನ್ಯ ಸಭೆಯನ್ನು ಕಡ್ಡಾಯವಾಗಿ ಸಸಿಗಳನ್ನು ನೆಡುವುದರ ಮೂಲಕ ಪ್ರಾರಂಭಿಸಬೇಕು. ಪ್ರತಿ ವರ್ಷ ಸಸಿಗಳನ್ನು ನಿಮಗೆ ನೀಡುವಂಥಹ ಕಾರ್ಯವನ್ನು ನಾವು ಮಾಡುತ್ತೇವೆ. ಅವುಗಳನ್ನು ನೀವು ಬೆಳೆಸುವಂತಹ ಕಾರ್ಯವನ್ನು ಮಾಡಬೇಕು ಇದರಿಂದ ಪರಿಸರಕ್ಕೆ ನಾವು ನೀವು ಕಾಣಿಕೆಯನ್ನು ನೀಡಲು ಸಾಧ್ಯ ಎಂದು ಸಹಕಾರಿ ಸಂಘಗಳ ಕಾರ್ಯದರ್ಶಿಗಳನ್ನುದ್ದೇಶಿಸಿ ಸಹಕಾರಿ ಸಂಘಗಳ ಸಿಡಿಓ ಶಂಕರ ಕರಿಬಸನ್ನವರ ಹೇಳಿದರು. ಈ ಸಂದರ್ಭದಲ್ಲಿ ಡಿ.ಸಿ.ಸಿ ಬ್ಯಾಂಕಿನ ಟಿಸಿಒ ಶಿವಾನಂದ ಪಾಟೀಲ, ಬಿ.ಆಯಗಳಾದ ಮಂಜುನಾಥ ಜಂಬಗಿ, ಸುಧೀರ ನಂದಗಾಂವ, ಚಿದಾನಂದ ಬನಶಂಕರಿ, ನಿಂಗರಾಜ ಕರೆನ್ನವರ, ಶ್ರೀಧರ ಪಾಟೀಲ, ಮಹಾಲಿಂಗ ಮರಡಿ, ಭರತ ಬಾಬನ್ನವರ, ಕಾರ್ಯದರ್ಶಇ ಹಾಲಪ್ಪ ಪೂಜೇರಿ, ಸಿದ್ದ್ಪು ಪೂಜೇರಿ, ಸಿದ್ದಪ್ಪ ಬಾಕಳೆ, ಪಾರೀಸ ಲಬಾಗೆ, ಹಾಗೂ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಕಾರ್ಯದರ್ಶಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ:ಬಸವರಾಜ.ಮಡಿವಾಳ.ರಾಯಬಾಗ