ಸ್ವಚ್ಚತೆ ಮಾಯಾ : ಅನೇಕ ಕಡೆ ಚರಂಡಿ ತುಂಬಾ – ಹೂಳು.

ನರೇಗಲ್ ಸ.13

ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ಸ್ವಚ್ಚತೆ ಮಾಯವಾಗಿದೆ. ಗ್ರಾಮದ ತುಂಬಾ ರಸ್ತೆಯಲ್ಲಿಯೇ ಹಾಗೂ ಮನೆಯ ಮುಂದೆ ತಿಂಗಳಾನು ಗಟ್ಟಲೆ ಕಸದ ರಾಶಿ ಬಿದ್ದಿರುತ್ತದೆ, ಚರಂಡಿ ತುಂಬಾ ಹೂಳು ತುಂಬಿರುತ್ತದೆ. ಅನೇಕ ಕಡೆಗಳಲ್ಲಿ ಕೊಳಚೆ ನೀರಿನಿಂದ ದುರ್ವಾಸನೆ ಬೀರುತ್ತಿದೆ. ಮಳೆ ಬಂದರೆ ಹೆಜ್ಜೆ ಇಡದಂತೆ ರಸ್ತೆಗಳು ಜಲಾವೃತ ಗೊಳ್ಳುತ್ತವೆ. ಇದರ ನಡುವೆಯೇ ವಾಸ ಮಾಡಬೇಕಾದ ಪರಿಸ್ಥಿತಿಯನ್ನು ಗ್ರಾಮದ ಜನರು ಎದುರಿಸುತ್ತಿದ್ದಾರೆ. 1 ನೇ. ವಾರ್ಡ್‌ನ ದಲಿತರ ಕಾಲೋನಿಯಲ್ಲಿ ರಸ್ತೆಯಲ್ಲಿಯೇ ಕಸದ ರಾಶಿ ಬಿದ್ದಿದೆ. ಕಸದ ರಾಶಿಯಿಂದ ಸಂಚಾರಕ್ಕೂ ತೊಂದರೆ ಯಾಗಿದೆ. ಅಷ್ಟೇ ಅಲ್ಲದೆ ತಿಂಗಾಳನು ಗಟ್ಟಲೆ ಕಸದ ರಾಶಿ ಅಲ್ಲಿಯೇ ಇರುವ ಕಾರಣ ಕೋಳಿ, ನಾಯಿ ಹಾಗೂ ಇತರೆ ಪ್ರಾಣಿಗಳು ಕಸವನ್ನು ಓಣಿಯ ತುಂಬಾ ಹರಡುತ್ತವೆ. ಇದರಿಂದ ಸೊಳ್ಳೆಗಳ ಉತ್ಪತ್ತಿಯೂ ಜಾಸ್ತಿಯಾಗಿದೆ. ಸುತ್ತ ಮುತ್ತಲಿನ ನಿವಾಸಿಗಳು ಕಸದ ರಾಶಿಯ ದುರ್ವಾಸನೆಗೆ ಬೇಸತ್ತಿದ್ದಾರೆ ಹಾಗೂ ಸಾಂಕ್ರಾಮಿಕ ರೋಗಗಳ ಭೀತಿಗೆ ಒಳಗಾಗಿದ್ದಾರೆ. ಚರಂಡಿ ನಿರ್ಮಾಣ ಮಾಡದೇ ಇರುವ ಕಾರಣ ಜನರು ಬಳಕೆ ಮಾಡಿದ ನೀರು ರಸ್ತೆಗೆ ಬರುತ್ತದೆ. ನಿರ್ಮಾಣ ಹಂತದಲ್ಲಿರುವ ಸಮುದಾಯ ಭವನದ ಹತ್ತಿರ ಚರಂಡಿ ಸ್ವಚ್ಚ ಗೊಳಿಸದೇ ಇರುವ ಕಾರಣ ಹೂಳು ತುಂಬಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್‌ ಮಾಡಿಲ್ಲ, ಪೌಡರ ಹಾಕಿಲ್ಲ. ಇತರೇ ವಾರ್ಡ್‌ಗೆ ನೀಡುವ ಕಾಳಜಿಯನ್ನು ನಮ್ಮ “ದಲಿತರ ವಾರ್ಡ್‌ಗೆ” ನೀಡುವುದಿಲ್ಲ.

ಆದ್ದರಿಂದ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಸ್ಥಾನಿಕ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳಾದ ದ್ಯಾಮಣ್ಣ ಕನಕಪ್ಪ ಮಾದರ, ಹನಮಂತ ಮಾದರ ಆಗ್ರಹಿಸಿದರು. ವಿಪರೀತವಾಗಿ ಸಂಚಾರ ಮಾಡುವ ಟ್ರಾಕ್ಟರ್‌ ನವರು ರಸ್ತೆಯಲ್ಲಿ ಮಣ್ಣು ಹಾಕಿ ಹೋಗುತ್ತಿರುವ ಕಾರಣ ಸಿ.ಸಿ ರಸ್ತೆ ಮಾಯವಾಗಿದೆ. ಅಲ್ಲಲ್ಲಿ ದೊಡ್ಡ ಪ್ರಮಾಣದ ಗುಂಡಿಗಳು ನಿರ್ಮಾಣವಾಗಿವೆ. ಮಳೆ ಬಂದರೆ ಜಾರಿ ಬೀಳುವಂತ ವಾತಾವರಣ ನಿರ್ಮಾಣವಾಗಿದೆ ಎಂದು ಚಂದ್ರು ಮಾದರ, ಬಸವರಾಜ ಯಮನಪ್ಪ ಮಾದರ ಹೇಳಿದರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಸ್ತೆ ಒಂದುಕಡೆ ಏರು, ಒಂದುಕಡೆ ಇಳಿಜಾರು ಆಗಿರುವ ಕಾರಣ ಮಳೆ ಬಂದರೆ ರಸ್ತೆ ತುಂಬಾ ನೀರು ನಿಲ್ಲುತ್ತದೆ.

ಜೋರು ಮಳೆ ಬಂದಾಗ ಶಾಲೆಯೊಳಗೆ ನುಗ್ಗುತ್ತದೆ. ಖಾಸಗಿ ವ್ಯಕ್ತಿಗಳು ರಸ್ತೆಯ ಒತ್ತುವರಿ ಹಾಗೂ ಅವರಿಚ್ಚೆಗೆ ತಕ್ಕಂತೆ ರಸ್ತೆಯ ಏರಿಳಿತವನ್ನು ಹೆಚ್ಚಿಸಿರುವ ಕಾರಣ ಮಕ್ಕಳಿಗೆ ತೊಂದರೆ ಯಾಗುತ್ತಿದೆ ಆದಷ್ಟು ಬೇಗ ಸರಿಪಡಿಸ ಬೇಕು ಎಂದು ರೋಣಪ್ಪ ಮಾದರ, ಫಕೀರಪ್ಪ ಮಾದರ ಆಗ್ರಹಿಸಿದರು.

ಬಾಕ್ಸ್:-

ಗ್ರಾ.ಪಂ.ಯಲ್ಲಿ ಒಬ್ಬರೂ ಸಿಬ್ಬಂದಿ ಇಲ್ಲ ಗ್ರಾಮದ ಕೆಲಸ ಮಾಡಲು ನಮ್ಮ ಗ್ರಾಮ ಪಂಚಾಯ್ತಿಯಲ್ಲಿ ಒಬ್ಬರೂ ಸಿಬ್ಬಂದಿಗಳಿಲ್ಲ. ಮೊದಲಿನವರು ನಿವೃತ್ತರಾಗಿದ್ದಾರೆ. ಹಾಗಾಗಿ ಕೂಲಿ ರೂಪದಲ್ಲಿ ತೆಗದುಕೊಂಡು ಕೆಲಸ ಮಾಡಿಸುತ್ತೇವೆ. ಮಳೆಗಾಲದಲ್ಲಿ, ಹೊಲದ ಕೆಲಸ ಜೋರು ಇದ್ದಾಗ ಯಾರು ಗ್ರಾ.ಪಂ. ಕೆಲಸಕ್ಕೆ ಬರುವುದಿಲ್ಲ. ಆದರೂ ಗ್ರಾಮಸ್ಥರಿಗೆ ತೊಂದರೆ ಯಾಗದಂತೆ ಜಾಗೃತಿ ವಹಿಸಿದ್ದೇವೆ. ಶಾಲೆಯ ಮುಂದಿರುವ ರಸ್ತೆ ತೊಂದರೆ ಸರಿಪಡಿಸುವ ಸಲುವಾಗಿ 3. ಲಕ್ಷ₹ ಅನುದಾನ ಬಂದಿದೆ ಅದನ್ನು ಬಳಕೆ ಮಾಡಿಕೊಂಡು ಎಸ್‌.ಡಿ.ಎಂ.ಸಿ ಯವರೇ ಮಾಡಿಸುತ್ತಾರೆ. ಈಗಾಗಲೇ ಗರಸು ಹಾಕಿ ಅಲ್ಲಿ ನೀರು ನಿಲ್ಲದಂತೆ ಮಾಡಿದ್ದೇವೆ. ಅಲ್ಲಿನ ರಸ್ತೆಯಲ್ಲಿ ನಿಲ್ಲುವ ಬಂಡಿ, ಟ್ರಾಕ್ಟರ್‌ ಹಾಗೂ ಅಲ್ಲಿರುವ ಅಂಗಡಿಗಳನ್ನು ತೆರವು ಗೊಳಿಸಲು ನೋಟಿಸ್‌ ನೀಡಲಾಗಿದೆ. ಮಾತು ಕೇಳದೆ ಇದ್ದರೆ ಪೊಲೀಸ್‌ ಸಹಾಯ ಪಡೆದು ಮಕ್ಕಳಿಗೆ ಅನುಕೂಲ ಮಾಡಿ ಕೊಡುತ್ತೇವೆ ಎಂದು ಗ್ರಾ.ಪಂ. ಅಧ್ಯಕ್ಷ ಬಸಪ್ಪ ಕಲ್ಲಪ್ಪ ಮಾರನಬಸರಿ ಹೇಳಿದರು.

ಕೋಟ್:-

ಗ್ರಾ.ಪಂ.ಯಿಂದ ಎಷ್ಟೇ ತಿಳುವಳಿಕೆ ನೀಡಿದರು ಸಹ ಜನರು ರಸ್ತೆಗೆ ತಂದು ಕಸ ಹಾಕುತ್ತಾರೆ ಇದರಿಂದ ಸಾಕಾಗಿದೆ ಆದರೂ ಸ್ವಚ್ಚತಾ ಕಾರ್ಯಗಳನ್ನು ತಪ್ಪದೆ ಮಾಡಿಸುತ್ತಿದ್ದೇವೆ- ಬಸಪ್ಪ ಕಲ್ಲಪ್ಪ ಮಾರನಬಸರಿ, ಗ್ರಾ.ಪಂ. ಅಧ್ಯಕ್ಷ ಹೊಸಹಳ್ಳಿ

ಕೋಟ್:-2

ಶಾಲೆ ಎದುರಿನ ರಸ್ತೆ ಸಮಸ್ಯೆ ಕುರಿತು ಪಿಡಬ್ಲೂಡಿಗೆ ಹಾಗೂ ಗ್ರಾ.ಪಂ.ಗೆ ಪೌರ ಕಾರ್ಮಿಕರನ್ನು ನೇಮಿಸುವಂತೆ ಜಿಲ್ಲಾ ಪಂಚಾಯತ ಅಧಿಕಾರಿಗಳಿಗೆ ಪ್ರತ್ಯೇಕವಾಗಿ ಪತ್ರ ಬರೆಯಲಾಗಿದೆ-ಶಿವಪ್ಪ ಪರಸಪ್ಪ ತಳವಾರ, ಪಿಡಿಒ ಹೊಸಹಳ್ಳಿ ನರೇಗಲ್‌ ಹೋಬಳಿ ಹೊಸಹಳ್ಳಿಯ 1 ನೇ. ವಾರ್ಡಿನ ದಲಿತರ ಕಾಲೋನಿಯ ರಸ್ತೆಯಲ್ಲಿ ಹಾಕಿರುವ ಕಸದ ರಾಶಿ ನರೇಗಲ್‌ ಹೋಬಳಿ ಹೊಸಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಎದುರಿನ ರಸ್ತೆ ಚರಂಡಿಯಲ್ಲಿ ಹಾಗೂ ಅದರ ಸುತ್ತಲೂ ಬೆಳೆದಿರುವ ಕಸ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ. ಎಫ್.ಗೋಗೇರಿ.ತೋಟಗುಂಟಿ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button