ಪ್ರತಿಯೊಬ್ಬ ರೈತರು ಬಿತ್ತನೆಯ ಪೂರ್ವದಲ್ಲಿ ಮಣ್ಣು ಪರೀಕ್ಷೆ ಮತ್ತು ಬೀಜೋಪಚಾರ ಪದ್ದತಿಯನ್ನು ಕಡ್ಡಾಯವಾಗಿ ಮಾಡಿ – ಕೃಷಿ ಅಧಿಕಾರಿ ಗೋವಿಂದರೇಡ್ಡಿ ಮೆದಕಿನಾಳ.
ಢವಳಗಿ ಮೇ.31

ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಮಡಿಕೇಶ್ವರ, ಚೋಂಡಿ, ಹಳ್ಳೂರ, ಇಂಗಳಗೇರಿ, ಗುಂಡಕರ್ಜಗಿ, ಗ್ರಾಮಗಳಲ್ಲಿ ಕೃಷಿ ಇಲಾಖೆ ವತಿಯಿಂದ 2026-27 ನೇ. ಸಾಲಿನ ದ್ವಿದಳ ಧಾನ್ಯಗಳ ಆತ್ಮ ನಿರ್ಭರತೆ ಅಭಿಯಾನ ಯೋಜನೆ ಅಡಿಯಲ್ಲಿ ಮುಂಗಾರು ಹಂಗಾಮು ಆಂದೋಲನ ಹಾಗೂ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಅಧಿಕಾರಿ ಗೋವಿಂದರೇಡ್ಡಿ ಮೆದಕಿನಾಳ ಅವರು ರೈತರ ಮುಂದೆ ತೋಗರಿ ಬೆಳೆಯ ಬೀಜೋಪಚಾರದ ಕುರಿತು ಪ್ರಾಯೋಗಿಕವಾಗಿ ಮಾಡಿದರು.
ನಂತರ ಮಾತನಾಡಿ ಪ್ರತಿಯೊಬ್ಬ ರೈತರು ಬಿತ್ತನೆಯ ಪೂರ್ವದಲ್ಲಿ ಕಡ್ಡಾಯವಾಗಿ ಬೀಜೋಪಚಾರವನ್ನು ಮಾಡಬೇಕು. ಕಪ್ಪು ಮಣ್ಣು ಮತ್ತು ನೀರಾವರಿ ಸೌಲಭ್ಯದ ಇರುವ ರೈತರು ಅಗಲು ಸಾಲು ಪದ್ದತಿಯಲ್ಲಿ ಬಿತ್ತನೆ ಮಾಡಬೇಕು. ಮತ್ತು ಅಂತರ್ ಬೆಳೆ ಪದ್ದತಿಯು ಕೂಡಾ ಅನುಸರಿಸಬೇಕು.
ಇದಕ್ಕೂ ಮುಂಚೆ ಮೊದಲು ಮಣ್ಣು ಪರೀಕ್ಷೆ ಮಾಡಿಸಬೇಕು.ತೋಗರಿ ಬೆಳೆಯನ್ನು ಬಿತ್ತಿದ್ದ 40-50 ದಿನಗಳ ಬೆಳೆ ಇದ್ದಾಗ ಕುಡಿ ಚಿವುಟುಬೇಕು ಇದರಿಂದ ಸುಮಾರು ಶೇಕಡಾ 15 ರಷ್ಟು ಇಳುವರಿ ಹೆಚ್ಚಿಸಬಹುದು.

ರೋಗ ನಿರೋಧಕವನ್ನು ತಡೆಗಟ್ಟಲು ಕಡ್ಡಾಯವಾಗಿ ಬೀಜೋಪಚಾರವನ್ನು ಮಾಡಬೇಕು. ಬೀಜೋಪಚಾರ ಮಾಡುವಾಗ ಪ್ರತಿ ಕೆಜಿ ಬಿತ್ತನೆ ಬೀಜಕ್ಕೆ 3 ಗ್ರಾಂ ಶಿಲೀಂದ್ರನಾಶಕ ಮಿಶ್ರಣವಾದ ಕಾರ್ಬೆಡೈಜಿಮ್ ಶೇಕಡಾ 12 ಜೋತೆಗೆ ಮ್ಯಾಂಕೋಚೆಬ್ ಶೇಕಡಾ 64% ಅಥವಾ 10 ಗ್ರಾಂ ಜೈವಿಕ ಗೊಬ್ಬರಗಳಾದ ಟ್ವೆಕೋಡಮ್, ಹಾಗೂ ರೈಜೋಬಿಯಂ ಬಳಸಿ ಬೀಜೋಪಚಾರ ಮಾಡಬೇಕು. ನಂತರ 6-7 ಗಂಟೆಗಳ ಕಾಲ ನೆರಳಿನಲ್ಲಿ ಒಣಗಿಸಿ ಬಿತ್ತನೆ ಮಾಡಬೇಕು ಎಂದು ಹೇಳಿದರು.
ಇದೇ ವೇಳೆಯಲ್ಲಿ ಇಲಾಖೆ ಸಿಬ್ಬಂದಿಗಳಾದ ಆತ್ಮ ಯೋಜನೆಯ ಸಹಾಯಕ, ತಾಂತ್ರಿಕ ವ್ಯವಸ್ಥಾಪಕರು ಸಂಗಮೇಶ ಸಜ್ಜನ, ಕೈಷಿ ಸಂಜೀವಿನಿ ತಾಂತ್ರಿಕ ಸಹಾಯಕ ಸಂಗನಗೌಡ ರಬಿನಳ್ಳಿ, ಕೃಷಿಸಖಿ ಅನುವುಗಾರರು, ಭಾರತಿ ಮೇಟಿ, ಭಾಗ್ಯಶ್ರೀ ಚಲವಾದಿ, ಶರಣುಗೌಡ ಪಾಟೀಲ, ರೈತರಾದ ಶ್ರೀಶೈಲ ಮೇಟಿ, ರಾಜಶೇಖರ ಪೂಜಾರಿ, ಮದನಪ್ಪ ಮೇಟಿ, ಅವ್ವಣ್ಣ ನಾಯ್ಕೋಡಿ, ದುರಗಪ್ಪ ಮಾದರ, ಶಾಂತಗೌಡ ಬಿರಾದಾರ, ಕಲ್ಲಪ್ಪ ಸಜ್ಜನ, ಬಸವರಾಜ ರೂಡಗಿ, ಪ್ರಕಾಶ ದಿಂಡವಾರ ಸೇರಿದಂತೆ ಇತರರು ಇದ್ದರು.
ವರದಿ:- ಜಿ.ಎನ್ ಬೀರಗೊಂಡ (ಮುತ್ತು)
