ಅಧಿಕ ಮಾಸದ ಪ್ರಯುಕ್ತ ಶ್ರೀವಿಷ್ಣುವಿನ – ನಾಮಸ್ಮರಣೆ ಮತ್ತು ಅರ್ಚನೆ.
ಚಳ್ಳಕೆರೆ ಮೇ.28

ಶಿವ ನಗರದ ಸದ್ಭಕ್ತರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಅವರ ಜಿ.ವಿ.ಎಸ್ ನಿವಾಸದಲ್ಲಿ “ಅಧಿಕ ಮಾಸದ ಪ್ರಯುಕ್ತ 33 ಬಾರಿ ಶ್ರೀವಿಷ್ಣುವಿನ ನಾಮಸ್ಮರಣೆ ಮತ್ತು ಅರ್ಚನೆ” ನಡೆಯಿತು.
ಸತ್ಸಂಗದ ಪ್ರಯುಕ್ತ ಸದ್ಭಕ್ತರಿಂದ ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಾರಾಯಣ, ಯತೀಶ್.ಎಂ ಸಿದ್ದಾಪುರ ನೇತೃತ್ವದಲ್ಲಿ ಶ್ರೀಕೃಷ್ಣನ ಭಜನೆಗಳು, ಶ್ರೀಮದ್ ಭಗವದ್ಗೀತೆಯ ಪುರುಷೋತ್ತಮ ಯೋಗದ ಶ್ಲೋಕಗಳ ಕಲಿಕಾ ತರಗತಿ, ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಅವರಿಂದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು.

ವಿಶೇಷ ಸತ್ಸಂಗ ಸಭೆಯಲ್ಲಿ ಶಾಂತಮ್ಮ, ಗೀತಾಲಕ್ಷ್ಮೀ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ವಿಜಯಲಕ್ಷ್ಮೀ, ರಶ್ಮಿ, ಸಂಗೀತ, ವೀರಮ್ಮ, ಜಯಮ್ಮ, ದ್ರಾಕ್ಷಾಯಣಿ, ಸುಧಾಮಣಿ, ಸರಸ್ವತಿ, ಯುಕ್ತ, ಶಾರದಮ್ಮ, ಭಾಗ್ಯಲಕ್ಷ್ಮೀ ಸೇರಿದಂತೆ ಸದ್ಭಕ್ತರು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
