ಭಗವಂತನಲ್ಲಿ ಶ್ರದ್ಧೆ-ನಂಬಿಕೆ- ಶರಣಾಗತಿಯ ಭಾವ ಇರಬೇಕು – ಮಾತಾಜೀ ತ್ಯಾಗಮಯೀ.

ಚಳ್ಳಕೆರೆ ಮೇ.31

ಭಕ್ತನಾದವನು ಭಗವಂತನಲ್ಲಿ ಶ್ರದ್ಧೆ-ನಂಬಿಕೆ-ಶರಣಾಗತಿಯ ಭಾವವನ್ನು ಇಟ್ಟು ಕೊಂಡಿರ ಬೇಕು. ಇದರಿಂದ ಅವನು ಜೀವನದ ಕಷ್ಟಗಳನ್ನು ಸುಲಭವಾಗಿ ಜಯಿಸಿ ಸಾರ್ಥಕ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಸ್ವಾಮಿ ಜಪಾನಂದರು” ಮತ್ತು “ಸ್ವಾಮಿ ಆತ್ಮಾನಂದರ ಸ್ಮೃತಿಗಳ” ಬಗ್ಗೆ ವಿಶೇಷ ಪ್ರವಚನ ನೀಡಿದರು‌.

ಸತ್ಸಂಗದ ಆರಂಭದಲ್ಲಿ ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.

ಸತ್ಸಂಗ ಸಭೆಯಲ್ಲಿ ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ವನಜಾಕ್ಷಿ ಮೋಹನ್,ಪಂಕಜಾ, ಅಶ್ವಿನಿ, ಹೃತಿಕ್, ದೇವೆಂದ್ರಪ್ಪ, ಜಿ.ಯಶೋಧಾ ಪ್ರಕಾಶ್, ಅಂಬುಜಾ, ಸಿ.ಎಸ್.ಭಾರತಿ, ಕವಿತಾ, ಕೆ.ಎಸ್.ವೀಣಾ, ಮಾನ್ಯ, ಡಾ.ಭೂಮಿಕಾ, ರತ್ನಮ್ಮ, ಡಿ.ಕಾವೇರಿ, ವೈಷ್ಣವಿ, ಸುದೀಪ್ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button