ತಾಂಡದಲ್ಲಿ ಜಾನಪದ ಸಂಗೀತ – ರಸದೌತಣ ಕಾರ್ಯಕ್ರಮ ಜರಗಿತು.

ಆನೆಕಲ್ ಮೇ.30

ತಾಂಡದಲ್ಲಿ ನಡೆಯುತ್ತಿರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ದಿನಾಂಕ 30/04/2026 ರಂದು ಭರ್ಜರಿ ಜಾನಪದ ಸಂಗೀತ ಕಾರ್ಯಕ್ರಮವು ಜರುಗಿತು. ಈ ಸಂದರ್ಭದಲ್ಲಿ ಖ್ಯಾತ ಜಾನಪದ ಗಾಯಕ ಶ್ರೀ ಉಮೇಶ್ ನಾಯ್ಕ್ (ಚಿನ್ನ ಸಮುದ್ರ), “ಸರಿಗಮ” ಖ್ಯಾತಿಯ ಶ್ರೀ ರಮೇಶ್ ಲಮಾಣಿ ಹಾಗೂ ಶ್ರೀ ದ್ಯಾಮೇಶ್ ಅವರು ತಮ್ಮ ಮನಮೋಹಕ ಗಾಯನದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಕಾರ್ಯಕ್ರಮದ ಆರಂಭದಿಂದಲೇ ಕಲಾವಿದರು ಜಾನಪದ ಗೀತೆಗಳು, ಭಕ್ತಿಗೀತೆಗಳು ಹಾಗೂ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಹಾಡುಗಳನ್ನು ಹಾಡಿ, ಶ್ರೋತೃಗಳನ್ನು ತಲ್ಲೀನ ಗೊಳಿಸಿದರು.

ವಿಶೇಷವಾಗಿ ಶ್ರೀ ರಮೇಶ್ ಲಮಾಣಿ ಅವರ ಗಾಯನಕ್ಕೆ ಪ್ರೇಕ್ಷಕರಿಂದ ಭಾರೀ ಚಪ್ಪಾಳೆಗಳು ವ್ಯಕ್ತವಾದವು.

ಶ್ರೀ ಉಮೇಶ್ ನಾಯ್ಕ್ ಅವರ ಜಾನಪದ ಶೈಲಿ ಮತ್ತು ಶ್ರೀ ದ್ಯಾಮೇಶ್ ಅವರ ಸಂಗೀತ ಸಹಕಾರ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿತು.

ಸ್ಥಳೀಯರು ಹಾಗೂ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಪರಂಪರೆ ಉಳಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಸಂಘಟಕರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಧೀಶರಾದ ಶ್ರೀ ವಿಜಯ ಕುಮಾರ್ ಎಲ್ಲಾ ಕಲಾವಿದರನ್ನು ಸನ್ಮಾನಿಸಿದರು ಎಂದು ವರದಿಯಾಗಿದೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button