ಲಕ್ಷ್ಮಣ ಸವದಿ ಇವರಿಗೆ ಸಚಿವ ಸ್ಥಾನ ನೀಡಲು – ಗಾಣಿಗೆ ಸಮಾಜದ ಅಧ್ಯಕ್ಷ ಮಲ್ಲಣ್ಣ ಮನಗೂಳಿ ಅಗ್ರಹ.
ಸಿಂದಗಿ ಮೇ.30

ತಾಲೂಕಿನ ಗಾಣಿಗ ಸಮಾಜದ ಮಾಜಿ ಅಧ್ಯಕ್ಷರಾದ ಶ್ರೀ ಮಲ್ಲಣ್ಣ ಮನಗೂಳಿ ಅವರು ಮಾನ್ಯ ಶ್ರೀ ಲಕ್ಷ್ಮಣ್ ಸವದಿ ಅವರಿಗೆ ಸಚಿವ ಸ್ಥಾನ ನೀಡಲು ಸಿಂದಗಿ ತಾಲೂಕ ಗಾಣಿಗ ಸಮಾಜದಿಂದ ಆಗ್ರಹ.
ಅಥಣಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಹಿರಿಯ ಮುತ್ಸದ್ದಿ ನಾಯಕರಾದ ಮಾನ್ಯ ಶ್ರೀ ಲಕ್ಷ್ಮಣ್ ಸವದಿ ಅವರಿಗೆ ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ತಕ್ಷಣವೇ ಸಚಿವ ಸ್ಥಾನ ನೀಡಬೇಕು ಎಂದು ಸಿಂದಗಿ ತಾಲೂಕ ಗಾಣಿಗ ಸಮಾಜದ ಮಾಜಿ ಅಧ್ಯಕ್ಷರಾದ ಶ್ರೀ ಮಲ್ಲಣ್ಣ ಮನಗೂಳಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಶ್ರೀ ಲಕ್ಷ್ಮಣ್ ಸವದಿ ಅವರು ಸುದೀರ್ಘ ರಾಜಕೀಯ ಅನುಭವ ಹೊಂದಿರುವ ಧೀಮಂತ ನಾಯಕರಾಗಿದ್ದಾರೆ.
ಈ ಹಿಂದೆ ಸಚಿವರಾಗಿ ಹಾಗೂ ಉಪ ಮುಖ್ಯಮಂತ್ರಿಗಳಾಗಿ ಅವರು ನೀಡಿದ ಆಡಳಿತಾತ್ಮಕ ಕೊಡುಗೆ ಅಪಾರ. ಅಥಣಿ ಕ್ಷೇತ್ರದ ಜನತೆ ಅವರ ನಾಯಕತ್ವವನ್ನು ಮೆಚ್ಚಿ ಭಾರೀ ಬಹುಮತ ದಿಂದ ಆರಿಸಿ ಕಳುಹಿಸಿದ್ದಾರೆ. ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗದ ಅವರು, ಇಡೀ ಉತ್ತರ ಕರ್ನಾಟಕ ಭಾಗದ ಸರ್ವತೋಮುಖ ಅಭಿವೃದ್ಧಿಯ ಧ್ವನಿಯಾಗಿದ್ದಾರೆ” ಎಂದು ತಿಳಿಸಿದ್ದಾರೆ.
ಗಾಣಿಗ ಸಮಾಜ ಸೇರಿದಂತೆ ಹಿಂದುಳಿದ ವರ್ಗಗಳ ಮತ್ತು ಇಡೀ ಉತ್ತರ ಕರ್ನಾಟಕದ ನೀರಾವರಿ, ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ವೇಗ ಸಿಗಬೇಕಾದರೆ ಸವದಿ ಅವರಂತಹ ಅನುಭವಿಗಳ ಅಗತ್ಯ ಸರ್ಕಾರಕ್ಕೆ ಇದೆ. ಜನ ಸಾಮಾನ್ಯರ ನೋವಿಗೆ ತಕ್ಷಣ ಸ್ಪಂದಿಸುವ ಶಕ್ತಿ ಅವರಿಗಿದೆ. ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಠರು ಯಾವುದೇ ವಿಳಂಬ ಮಾಡದೆ ಶ್ರೀ ಲಕ್ಷ್ಮಣ್ ಸವದಿ ಅವರಿಗೆ DCM ಸ್ಥಾನದ ಜೋತೆಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಮತ್ತು ಪ್ರಮುಖ ಖಾತೆಯನ್ನು ಜವಾಬ್ದಾರಿಯಾಗಿ ನೀಡಬೇಕು” ಎಂದು ಶ್ರೀ ಮಲ್ಲಣ್ಣ ಮನಗೂಳಿ ಅವರು ಪ್ರಕಟಣೆಯಲ್ಲಿ ಅತ್ಯಂತ ಗೌರವ ಪೂರ್ವಕವಾಗಿ ಆಗ್ರಹಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಹಿರೇಮಠ.ಆಲಮೇಲ

