ರಾಜ್ಯ ಮಟ್ಟದ ಅಯ್ಯಪ್ಪ ಮಹಾ ಸಂಗಮ – ಧರ್ಮ ಜಾಗೃತಿ ಸಭೆ.
ಕೂಡಲ ಸಂಗಮ ಮೇ.31

ಇಂದು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಕರ್ನಾಟಕ ವತಿಯಿಂದ “ಸಾಸ್ 18 ರ ಹೊಸ್ತಿಲಲ್ಲಿ” ಕೂಡಲ ಸಂಗಮದಲ್ಲಿ ರಾಜ್ಯ ಮಟ್ಟದ ಅಯ್ಯಪ್ಪ ಮಹಾ ಅಧಿಕ ಜೇಷ್ಠ ಪುರುಷೋತ್ತಮ ಮಾಸದ ನಿಮಿತ್ತ. ತ್ರಿವೇಣಿ ಸಂಗಮದ ಆರತಿ, (ಕ್ರಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ) 108 ಗುರುಸ್ವಾಮಿ ದಂಪತಿಗಳಿಂದ ಲಕ್ಷಾರ್ಚನೆ, 108 ಪೂರ್ಣಕುಂಭ ಮೆರವಣಿಗೆ ಮಹಾಪ್ರಸಾದ ಹು ಸಂಗಮ ಅಯ್ಯಪ್ಪ ಧರ್ಮ ಜಾಗೃತಿ ಸಭೆ ದಿನಾಂಕ:- ರವಿವಾರ 31 ಮೇ 2026 ಸ್ಥಳ:ಕೂಡಲ ಸಂಗಮ ತಾವು ಬನ್ನಿ ತಮ್ಮವರನ್ನೂ ಕರೆ ತನ್ನಿ.

ಆದರಣಿಯ ಅಯ್ಯಪ್ಪ ಭಕ್ತರೆಕೇರಳದ ಪಟ್ಟಣತಿಟ್ಟಂನಲ್ಲಿ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಸಂಸ್ಥೆ 2008 ರಲ್ಲಿ ಸ್ಥಾಪಿತವಾಗಿ ಕೆಲವೇ ವರ್ಷಗಳಲ್ಲಿ ರಾಷ್ಟ್ರೀಯ ಸಂಸ್ಥೆಯಾಗಿ ಬೆಳಯಿತು. ಅಯ್ಯಪ್ಪ ಧರ್ಮ ಜಾಗೃತಿ ಗೋಸ್ಕರ ಹಲವಾರು ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ತನ್ನದೇ ಆದ ಹೆಜ್ಜೆ ಗುರುತನ್ನು ಮೂಡಿಸುತ್ತಾ 18 ರ ಹರಯಕ್ಕೆ ಪಾದಾರ್ಪಣೆ ಮಾಡುತ್ತಿದೆ. ನಿತ್ಯ ಭಕ್ತಿಯೊಂದಿಗೆ “ಅಯ್ಯಪ್ಪ ಯೋಗಂ” ಹೆಸರಿನ ಸಂಗದ ಮೂಲಕ ಅಯ್ಯಪ್ಪ ಧರ್ಮ ಜಾಗೃತಿಯನ್ನು ಪಸರಿಸುತ್ತಾ, ಅಯ್ಯಪ್ಪ ಸೇವಾ ಕೇಂದ್ರಗಳ (ASK) ಮೂಲಕ “ಮಂಡಲ ಮತ್ತು ಮಕರ ವಿಳಕ್ಕು” ಪುಣ್ಯಕಾಲದಲ್ಲಿ ಶಬರಿಮಲೈ ಯಾತ್ರೆ ಗೈಯುವ ಲಕ್ಷಾಂತರ ಅಯ್ಯಪ್ಪ ಯಾತ್ರಾರ್ಥಿಗಳಿಗೆ ರಾಜ್ಯದ ಯಾವುದೇ ಸ್ಥಳದಿಂದ ಯಾತ್ರೆ ಕೈಗೊಂಡರೂ ಅವರಿಗೆ ಪ್ರಯಾಣದ ದಾರಿಯುದ್ದಕ್ಕೂ ತಾಲ್ಲೂಕು, ಜಿಲ್ಲಾ ಅಯ್ಯಪ್ಪ ಸೇವಾ ಕೇಂದ್ರಗಳಲ್ಲಿ ಉಚಿತ ತಾತ್ಕಾಲಿಕ ವಸತಿಯೊಂದಿಗೆ ‘ಅನ್ನ ಪ್ರಸಾದ’, ವನ್ನು ನೀಡುತ್ತಿದ್ದಾರೆ.

ಕಳೆದ 2025-26 ನೇ. ಸಾಲಿನಲ್ಲಿ ಸುಮಾರು 7,66,465 ಅಯ್ಯಪ್ಪ ಯಾತಾರ್ಥಿಗಳಿಗೆ ಅನ್ನ ಪ್ರಸಾದವನ್ನು ರಾಜ್ಯ ಅಯ್ಯಪ್ಪ ಸೇವಾ ಕೇಂದ್ರ ಉಣ ಬಡಿಸಿದೆ.ಅನೇಕ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿರುವ ಸಮಾಜಂ ರಾಜ್ಯದ ಎಲ್ಲಾ ಸೇವಕರನ್ನು ಒಟ್ಟು ಗೂಡಿಸಿ ಅಯ್ಯಪ್ಪ ಧರ್ಮ ಜಾಗೃತಿ ಸಭೆಯನ್ನು ನಡೆಸುವ ಸಲುವಾಗಿ “ಅಯ್ಯಪ್ಪ ಮಹಾ ಸಂಗಮ” ಹೆಸರಿನಲ್ಲಿ ಇದೀಗ ಪ್ರತಿ ಮೂರು ವರ್ಷಕ್ಕೊಮ್ಮೆ ಬರುವ ಅಧಿಕ ಮಾಸದ ಪುಣ್ಯಕಾಲದಲ್ಲಿ ಜೇಷ್ಠ ಮಾಸದ ಮೇ 31 ರ ರವಿವಾರ ದಂದು ವಿಶ್ವ ವಿಖ್ಯಾತ ಅಣ್ಣ ಬಸವಣ್ಣನವರ ಐಕ್ಯ ಸ್ಥಳ ಸುಕ್ಷೇತ್ರ ಕೂಡಲ ಸಂಗಮದಲ್ಲಿ 108 ಗುರುಸ್ವಾಮಿ ದಂಪತಿಗಳಿಂದ ಆಯ್ಯಪ್ಪ ಸ್ವಾಮಿಗೆ ಲಕ್ಷಾರ್ಚನೆ, 108 ತಾಯಂದಿರಿಂದ ಪೂರ್ಣ ಕುಂಭ ಮೆರವಣಿಗೆ, ತ್ರಿವೇಣಿ ಸಂಗಮದಲ್ಲಿ ಸ್ವಚ್ಛತೆಯೊಂದಿಗೆ ಗಂಗಾರತಿ ಹಾಗೂ ಅಯ್ಯಪ್ಪ ಧರ್ಮ ಜಾಗೃತಿ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅಧಿಕ ಜೇಷ್ಠ ಮಾಸದ ಈ “ಅಯ್ಯಪ್ಪ ಮಹಾ ಸಂಗಮ” ಕಾರ್ಯದಲ್ಲಿ ತಾವೆಲ್ಲರೂ ತನು, ಮನ, ಧನದೊಂದಿಗೆ ಸಂಪೂರ್ಣವಾಗಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸ ಬೇಕೆಂದು ತಮ್ಮಲ್ಲಿ ಭಕ್ತಿ ಪೂರ್ವಕ ಮನವಿ.
ದಿನಾಂಕ:31 ಮೇ 2026 ರವಿವಾರ

ಕಾರ್ಯಕ್ರಮದ ವಿವರ
ಗಣ ಹೋಮ
ಪ್ರಾತಃಕಾಲ 4-00 ಗಂಟೆಗೆ
ಸಾನಿಧ್ಯ:-
ಶ್ರೀಮತಿ ಮತ್ತು ಶ್ರೀ ಬಸವರಾಜ ರೇವಡಿ ದಂಪತಿಗಳು ಗಂಬಿಹಾಳ
ನೇತೃತ್ವ:-
ಶ್ರೀಮತಿ ಮತ್ತು ಶ್ರೀ ಅಖಂಡೇಶ್ವರ ಪತ್ತಾರ ದಂಪತಿಗಳು ಕೂಡಲ ಸಂಗಮ ಶ್ರೀಮತಿ ಮತ್ತು ಶ್ರೀ ಶ್ರೀಕಾಂತ ಪತ್ತಾರ ದಂಪತಿಗಳು ಇಳಕಲ್ಲ. ಶ್ರೀಮತಿ ಮತ್ತು ಶ್ರೀ ಮಲ್ಲಿಕಾರ್ಜುನ ಚೂರಿ ದಂಪತಿಗಳು ಹುನಗುಂದ ಶ್ರೀಮತಿ ಮತ್ತು ಶ್ರೀ ಬಸವರಾಜ ಪತ್ತಾರ ದಂಪತಿಗಳು ಕೂಡಲ ಸಂಗಮ
ಪುರೋಹಿತರು:-
ಶ್ರೀಯುತ ಮಂಜುನಾಥ ಮುಂಡಾಸದ ಪ್ರಧಾನ ಅರ್ಚಕರು ಶ್ರೀ ಹುಲಿಗೆಮ್ಮದೇವಿ ದೇವಸ್ಥಾನ ಚೂಲೇಬಾವಿ4.
ಅಯ್ಯಪ್ಪ ಲಕ್ಷಾರ್ಚನೆ
ಬೆಳಿಗ್ಗೆ 6-30 ರಿಂದ 8-30 ವರೆಗೆ
ಸಾನಿಧ್ಯ:-
ಪೂಜ್ಯಶ್ರೀ ಶಿವಪ್ರಕಾಶ ಶಿವಾಚಾರ್ಯ ಮಹಾ ಸ್ವಾಮಿಗಳು ಬಸವನ ಬಾಗೇವಾಡಿ
ಅಧ್ಯಕ್ಷತೆ:-
ನೇತೃತ್ವ:-
ಶ್ರೀಮತಿ ಮತ್ತು ಶ್ರೀ ರಾಚಪ್ಪ ಕಾಜಗಾರ ಗುರುಸ್ವಾಮಿಗಳು ಹುನಗುಂದ ಶ್ರೀಮತಿ ಮತ್ತು ಶ್ರೀ ಶಿವಾನಂದ ಮಸಬಿನಾಳ ದಂಪತಿಗಳು ಬಸವನ ಖಾಗೇವಾಡಿ ಶ್ರೀಮತಿ ಮತ್ತು ಶ್ರೀ ಡಾ, ಮಹಾದೇವ ಹೂಗಾರ ದಂಪತಿಗಳು ಯಲಗೂರು ಶ್ರೀಮತಿ ಮತ್ತು ಶ್ರೀ ರಾಜೇಂದ್ರ ಅನ್ವೇಕರ ದಂಪತಿಗಳು ಬಾಗಲಕೋಟೆ ಶ್ರೀಮತಿ ಮತ್ತು ಶ್ರೀ ಪ್ರಕಾಶ ಪರದೇಶಿ ದಂಪತಿಗಳು ಶೆರೂರ ಶ್ರೀಮತಿ ಮತ್ತು ಶ್ರೀ ಬಸವರಾಜ ಕಮ್ಮಾರ ದಂಪತಿಗಳು ಕೂಡಲ ಸಂಗಮ ಕ್ರಾಸ್
ಪುರೋಹಿತರು:-
ಶ್ರೀಯುತ ಮಂಜುನಾಥ ಮುಂಡಾಸದ ಪ್ರಧಾನ ಅರ್ಚಕರು ಶ್ರೀ ಹುಲಿಗೆಮ್ಮದೇವಿ ದೇವಸ್ಥಾನ ಶೂಲೇಬಾವಿ
ಶ್ರೀಯುತ ವಿದ್ಯಾನಂದ ಬಡಿಗೇರ ಸಾರ್ವಜನಿಕ ಸಂಪರ್ಕ ಅಧಿಕಾರಿ
ಉಪಹಾರ ಪ್ರಸಾದ ಬೆಳಿಗ್ಗೆ 8-30 ರಿಂದ 9-30 ವರೆಗೆ
