ಪೌರ ಕಾರ್ಮಿಕರ ದಿನಾಚರಣೆ, ಪೌರ ಕಾರ್ಮಿಕರ ಸ್ವಚ್ಛತೆಯ ಪರಿಶ್ರಮದ ಸೇವೆ ಸ್ಮರಣೀಯ – ಪ.ಪಂ ಮುಖ್ಯಾಧಿಕಾರಿ ಕೆ.ಎಂ. ಮುಗುಳಿ.
ಕೂಡ್ಲಿಗಿ ಸ.23

ಪ.ಪಂ ಮುಖ್ಯಾಧಿಕಾರಿ ಕೆ.ಎಂ ಮುಗುಳಿ,
ಸ್ವಚ್ಛತೆಯು ನಮ್ಮ ಆರೋಗ್ಯದ ಅತ್ಯಂತ ಪ್ರಮುಖ ಅಂಶವಾಗಿದೆ, ಸ್ವಚ್ಛತೆ ಇಲ್ಲದಿದ್ದರೆ ಅನೇಕ ರೋಗಗಳಿಗೆ ಕಾರಣವಾಗುವುದು, ನಮ್ಮ ವೈಯುಕ್ತಿಕ ಸ್ವಚ್ಛತೆಗಾಗಿ ನಾವು ಶ್ರಮಿಸಿದರೆ, ನಮ್ಮ ಸುತ್ತ ಮುತ್ತಲಿನ ಪರಿಸರದ ಸ್ವಚ್ಛತೆಗೆ ಪೌರ ಕಾರ್ಮಿಕರ ಸೇವೆಯು ಸ್ಮರಣೀಯ. ಬಿಸಿಲು, ಮಳೆ, ಚಳಿ ಎನ್ನದೆ ತಮ್ಮನ್ನು ತಾವು ಗ್ರಾಮ ಪಂಚಾಯಿತಿ ಯಿಂದ ಹಿಡಿದು ಬೃಹತ್ ಮಹಾನಗರ ಪಾಲಿಕೆಯಲ್ಲಿನ ಸ್ವಚ್ಛತೆಯ ಸಂಕೇತವಾಗಿ ಗುರುತಿಸಿ ಕೊಂಡಿರುವರು ನಮ್ಮ ಹೆಮ್ಮೆಯ ಪೌರ ಕಾರ್ಮಿಕರು.ನಮಗೆಲ್ಲರಿಗೂ ತಿಳಿದಿರುವಂತೆ ದಿನದಿಂದ ದಿನಕ್ಕೆ ಜನಸಂಖ್ಯಾ ಹೆಚ್ಚಳದಿಂದ ನಾವು ಉಪಯೋಗಿಸಿ ಬಿಸಾಕಿದ ತ್ಯಾಜ್ಯವು ಸರಿಯಾಗಿ ವಿಲೇವಾರಿ ಆಗದಿದ್ದರೆ ನಮ್ಮ ಪರಿಸ್ಥಿತಿ ಹೇಳತಿರದು, ಇಂತಹ ತ್ಯಾಜ್ಯಗಳನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡುತ್ತಿರುವ ನಮ್ಮ ಪೌರ ಕಾರ್ಮಿಕರು, ಒಂದು ವೇಳೆ ಇವರು ಮುನಿಸಿ ಕೊಂಡರೆ ಪರಿಸರದಲ್ಲಿ ಗಬ್ಬೆದ್ದು ನಾರುತ್ತಿರುವ ದೃಶ್ಯ ಕಂಡು ಬರುತ್ತದೆ. ಸಭೆ ಸಮಾರಂಭಗಳ ವೇದಿಕೆಯ ಮೇಲೆ ನಮ್ಮ ಸುತ್ತ ಮುತ್ತಲಿನ ಪರಿಸರದ ಸ್ವಚ್ಛತೆಯ ಕುರಿತು ಮಾತನಾಡುವುದು ಸುಲಭ ಆದರೆ ಸ್ವಚ್ಛತೆ ಮಾಡುವುದು ಕಷ್ಟಕರ ಕೆಲಸ.ದೇಶದ ಭದ್ರತೆಯ ಸೇವೆಗೆ ಸೈನಿಕರು ಚಳಿ, ಗಾಳಿ, ಮಳೆ, ಬಿಸಿಲೆನ್ನದೆ, ಗುಂಡಿಗೆ ಎದೆ ಕೊಟ್ಟು ಹೇಗೆ ನಿಂತ್ತು ತಮ್ಮ ಪ್ರಾಣಗಳನ್ನು ಲೆಕ್ಕಿಸದೆ ಯುದ್ಧ ಮಾಡುತ್ತಾರೋ ಹಾಗೆ ಪೌರ ಕಾರ್ಮಿಕರು ಸಹ ಪ್ರತಿಯೊಬ್ಬ ನಾಗರಿಕರಿಗೆ ರೋಗ, ಕಾಯಿಲೆಗಳು, ಅನಾರೋಗ್ಯಕ್ಕೆ ತುತ್ತಾಗದಂತೆ ಗ್ರಾಮ, ಪಟ್ಟಣ, ನಗರಗಳು, ಸ್ವಚ್ಛತೆ ಮಾಡುವುದ ರೊಂದಿಗೆ ತನ್ನ ಹಾಗೂ ತನ್ನ ಕುಟುಂಬದ ಬಗ್ಗೆ ಕಿಂಚಿತ್ತೂ ಯೋಚನೆ ಮಾಡದೆ, ಊರನ್ನು ಸ್ವಚ್ಛಗೊಳಿಸಿ ನನ್ನ ಕಾಯಕ ಎಂದು ತನ್ನ ಪ್ರಾಣ ಲೆಕ್ಕಿಸದೆ ಗ್ರಾಮ, ಪಟ್ಟಣ ನಗರ ದೊಡ್ಡ ದೊಡ್ಡ ಸಿಟಿಗಳಂತಹ, ಊರುಗಳನ್ನು ಸ್ವಚ್ಛಗೊಳಿಸಿ.

ಭಾರತ ದೇಶಾದ್ಯಂತ ರಾಷ್ಟ್ರದ ಸ್ವಚ್ಛತೆಯ ಸೇವೆಯಲ್ಲಿ ಪೌರ ಕಾರ್ಮಿಕರ ಸೇವೆ ಸ್ಮರಣೀಯವಾದದ್ದು, ಇವರ ಸೇವೆಯನ್ನು ಪ್ರತಿಯೊಬ್ಬ ನಾಗರಿಕರು ಊರಿನ ಸ್ವಚ್ಛತೆಯ ಹಾಗೂ ಪರಿಸರ ಸೇವೆಯ ಪರಿಶ್ರಮದ ಹಿನ್ನೆಲೆಯನ್ನು ಹೃದಯ ತುಂಬಿ ಮೆಚ್ಚುವಂತಹ ವಿಷಯವಾಗಿದೆ. ಪೌರ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಶುಭಾಶಯಗಳು ಕೋರುವವರು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಕೆ.ಎಂ ಮುಗುಳಿ, ಹಾಗೂ ಸಿಬ್ಬಂದಿ ವರ್ಗದವರು, ಹಾಗೂ ಪಟ್ಟಣ ಪಂಚಾಯಿತಿಯ ಅಧ್ಯಕ್ಷರು ಕಾವಲಿ ಶಿವಪ್ಪ ನಾಯಕ ಹಾಗೂ ಉಪಾಧ್ಯಕ್ಷರಾದ ಲೀಲಾವತಿ ಪ್ರಭಾಕರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸೈಯದ್ ಶುಕುರ್, ಹಾಗೂ ಪಟ್ಟಣ ಪಂಚಾಯತಿಯ ಸರ್ವ ಸದಸ್ಯರುಗಳು, ಕೂಡ್ಲಿಗಿಯ ಪೌರ ಕಾರ್ಮಿಕರ ತಾಲೂಕು ಅಧ್ಯಕ್ಷರಾದ ಹೆಚ್. ಅಜ್ಜಯ ಮತ್ತು ಸರ್ವ ಪೌರ ಕಾರ್ಮಿಕರಿಗೆ ಶುಭಾಶಯಗಳು ತಿಳಿಸಿರುತ್ತಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ