ಲಾಭದತ್ತ ಪಿ.ಎಲ್.ಡಿ ಬ್ಯಾಂಕ್ – ಎಚ್.ಆರ್ ನಾಗರಾಜ್.
ತರೀಕೆರೆ ಸ.24

ಪ್ರತಿ ವರ್ಷ ನಮ್ಮ ಬ್ಯಾಂಕು ನಷ್ಟದಲ್ಲಿ ನಡೆಯುತ್ತಿತ್ತು ಆದರೆ ಈ ಬಾರಿ ಎಲ್ಲರ ಸಹಕಾರ ದಿಂದ ಒಂದು ಕೋಟಿ 41, ಲಕ್ಷ ರೂ ಗಳು ಸಾಲ ವಸೂಲಾತಿ ಮಾಡಿ 20 ಲಕ್ಷ ರೂಗಳು ಸಂಪೂರ್ಣ ಲಾಭ ಗಳಿಸಿದೆ ಎಂದು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎಚ್ ಆರ್ ನಾಗರಾಜ್ ತಿಳಿಸಿದ್ದಾರೆ. ಪಿ ಎಲ್ ಡಿ ಬ್ಯಾಂಕ್ ಆವರಣದಲ್ಲಿ ಏರ್ಪಡಿಸಿದ್ದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೀಟಿಂಗ್ ನೋಟಿಸು ಓದಿ ದಾಖಲು ಮಾಡುವಾಗ ಆಗಿದ್ದ ಲೋಪ ದೋಷಗಳ ಬಗ್ಗೆ ಸದಸ್ಯರಾದ ಹಾಲು ವಜ್ರಪ್ಪ, ಟಿಎಲ್ ರಮೇಶ್ ಮತ್ತು ನಿರ್ದೇಶಕರಾದ ಶೇಖರಪ್ಪ ಆಕ್ಷೇಪಣೆ ಮಾಡಿ ಸರಿ ಮಾಡಲು ಸೂಚಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶಾರದಮ್ಮ, ನಿರ್ದೇಶಕರಾದ ಮಲ್ಲಿಕಾರ್ಜುನ ಎಚ್ ಎಂ, ಗೋವಿಂದಪ್ಪ ಟಿ ಡಿ, ಯೋಗೇಶ್ ಎ ಎಂ, ಶಿವಣ್ಣ ಉಪಸ್ಥಿತರಿದ್ದು ವ್ಯವಸ್ಥಾಪಕರಾದ ಕೆಬಿ ನಾಗೇಶ್ ಸಭಾ ನಡಾವಳಿಗಳನ್ನು ನಡೆಸಿ ಕೊಟ್ಟರು, ಮಾಜಿ ಪುರಸಭಾ ಅಧ್ಯಕ್ಷರಾದ ಟಿ ಆರ್ ರಮೇಶ್ ಪ್ರಾರ್ಥಿಸಿದರು ಕೆಬಿ ನಾಗೇಶ್ ಸ್ವಾಗತಿಸಿ ಯೋಗೇಶ್ ವಂದಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕ ಮಗಳೂರು