ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ – ದ್ವಿತೀಯ ಸ್ಥಾನ ಪಡೆದ ಯತೀಶ್.ಎಂ ಸಿದ್ದಾಪುರ.
ಬೆಂಗಳೂರು ಏ.04

ಸರಸ್ವತಿ ನಗರದ ಶ್ರೀಭವತಾರಿಣಿ ಆಶ್ರಮದ ರಜತ ಮಹೋತ್ಸವದ ಪ್ರಯುಕ್ತ ಆಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಭಜನಾ ಸ್ಪರ್ಧೆಯಲ್ಲಿ ಚಳ್ಳಕೆರೆ ಶ್ರೀಶಾರದಾಶ್ರಮದ ಸ್ವಯಂ ಸೇವಕ ಯತೀಶ್ ಎಂ ಸಿದ್ದಾಪುರ ಹಾಡಿದ “ಅಲೆದಲೆದು ಅತಿದಣಿದು” ಭಜನೆಗೆ ದ್ವಿತೀಯ ಸ್ಥಾನ ದೊರೆತಿದ್ದು ಶ್ರೀಭವತರಿಣಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ವಿವೇಕಮಯೀ ಅವರು ಅವರಿಗೆ ಅಭಿನಂದನಾ ಪ್ರಮಾಣ ಪತ್ರ ಮತ್ತು ಪುಸ್ತಕಗಳನ್ನು ಬಹುಮಾನವಾಗಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಮಿಸಿದ ಭಕ್ತರು ಸೇರಿದಂತೆ ಸೋದರಿ ರಶ್ಮಿ, ಜ್ಯೋತಿಲಕ್ಷ್ಮೀ, ಜಯಂತಿ ಸುರೇಶ್, ಆಶಾ ಶಿವಶಂಕರ್, ಪದ್ಮ ಆನಂದ, ನಳಿನಿ, ಭಾಗ್ಯಲಕ್ಷ್ಮೀ, ಯಲಹಂಕದ ನಾಗರತ್ನಮ್ಮ ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ,ಚಳ್ಳಕೆರೆ.

