ವಿಜಯನಗರ ಜಿಲ್ಲೆಯ – ಸ್ವಚ್ಛ ಹಂಪಿ. ಗ್ರೀನ್ ಹಂಪಿ.
ಹೊಸಪೇಟೆ ಸ .26

ಸ್ವಚ್ಛ ಹಂಪಿ, ಗ್ರೀನ್ ಹಂಪಿ ವಿಶೇಷ ಕಾರ್ಯಕ್ರಮವು ಸೆ.25 ರಂದು ಹಂಪಿಯಲ್ಲಿ ವಿಶಿಷ್ಟವಾಗಿ ನಡೆಯಿತು.ವಿಶ್ವ ಪ್ರವಾಸೋದ್ಯಮ ದಿನಾಚರಣೆ-2024 ರ ಪ್ರಯುಕ್ತವಿಶ್ವ ಪ್ರಸಿದ್ಧ ಐತಿಹಾಸಿಕ ಹಂಪಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸಾರ್ವಜನಿಕರಲ್ಲಿ ನೈರ್ಮಲ್ಯ, ಶುಚಿತ್ವ ಕುರಿತು ವ್ಯಾಪಕವಾಗಿ ಪ್ರಚಾರ ಪಡಿಸಲು ಕಾರ್ಯಕ್ರಮ ನಡೆಯಿತು.ಸ್ವಚ್ಛತಾ ಹೀ ಸೇವಾ-2024 ಕಾರ್ಯಕ್ರಮ ಪ್ರಯುಕ್ತ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನ ಮುಂಭಾಗ ಹಂಪಿ ಬಜಾರ್, ಎದುರು ಬಸವಣ್ಣ, ಮಾತಂಗ ಪರ್ವತ, ಕಮಲ್ ಮಹಲ್ ಪಾರಂಪರಿಕ ತಾಣಗಳಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು.ಈ ಕಾರ್ಯಕ್ರಮದ ಬಗ್ಗೆ ವಿಶೇಷ ಸಂದೇಶ ನೀಡಲು ರಂಗೋಲಿ ಸ್ಪರ್ಧೆಯನ್ನು ಸಹ ನಡೆಸಲಾಯಿತು.ಜೊತೆಗೆ, ಪರಿಸರ ಸ್ನೇಹಿ ಹಂಪಿಯ ಬಗ್ಗೆ ಪ್ರವಾಸಿಗರಿಗೆ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಪ್ರಭುಲಿಂಗ ಎಸ್ ತಳಕೇರಿ, ಹಂಪಿ ಗ್ರಾಮ ಪಂಚಾಯತ್ಅಧ್ಯಕ್ಷರಾದ ಶ್ರೀಮತಿ ರಜನಿ ಷಣ್ಮುಖಗೌಡ, ಉಪಾಧ್ಯಕ್ಷರಾದ ಎಸ್ ಹನುಮಂತಪ್ಪ, ಎ.ಎಸ್.ಐ ನ ಸಹಾಯಕ ಸಂರಕ್ಷಣಾಧಿಕಾರಿ ಅನಿರುದ್ಧ ದೇಸಾಯಿ, ಕೆ.ಎಸ್.ಟಿ.ಡಿ.ಸಿ ವ್ಯವಸ್ಥಾಪಕರಾದ ಸುನಿಲ್ ಕುಮಾರ್, ಪಿಡಿಓ ಬಿ ಗಂಗಾಧರ್, ವಿರುಪಾಕ್ಷಿ ವಿ ಹಂಪಿ ಪ್ರವಾಸಿ ಮಾರ್ಗದರ್ಶಿ ವಿರೂಪಾಕ್ಷಿ ವಿ ಹಂಪಿ, ಪ್ರವಾಸಿ ಮಿತ್ರರು, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಟಿ.ಎಚ್.ಎಂ.ರಾಜಕುಮಾರ.ಕಂಪ್ಲಿಬಳ್ಳಾರಿ