“ಟೆಕ್ವಾಂಡೋ ಗರ್ಲ್” ಮೈಸೂರು ದಸರಾ ಚಲನ ಚಿತ್ರೋತ್ಸವಕ್ಕೆ ಆಯ್ಕೆ.
ಬೆಂಗಳೂರು ಅ.02

ಆತ್ರೇಯ ಕ್ರಿಯೇಶನ್ಸ್ ಬೆಂಗಳೂರ ಅವರ ಡಾ, ಸುಮಿತಾ ಪ್ರವೀಣ್ ಚೊಚ್ಚಲ ನಿರ್ಮಾಣದ “ಟೆಕ್ವಾಂಡೋ ಗರ್ಲ್’ ಸೌತ್ ಕೋರಿಯಾದ ಸಮರ ಕಲೆಯ ಚಿತ್ರ ವಿಶ್ವ ವಿಖ್ಯಾತ ಮೈಸೂರು ದಸರಾ ಚಲನ ಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದು. ಇದೆ ಅಕ್ಟೋಬರ್. ೫ ರಂದು ಮೈಸೂರಿನ ಐನೋಕ್ಷದಲ್ಲಿ ಪ್ರದರ್ಶಿತ ವಾಗಲಿದೆ. ರವೀಂದ್ರ ವಂಶಿ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಹೆಣ್ಣು ಮಕ್ಕಳು ತಮಗೆ ತಾವೇ ಹೇಗೆ ರಕ್ಷಿಸಿ ಕೊಳ್ಳಬೇಕು ಎಂಬುದರ ಮಹತ್ತರ ಸಂದೇಶವಿದೆ. ಸುಮಾರು ೨೦೦ ಮಕ್ಕಳಿಗೆ ಅವಕಾಶ ಕಲ್ಪಿಸಿದ ಸಾಮಾಜಿಕ ಕಳಕಳಿ ಇರುವ ಈ ಚಿತ್ರದಲ್ಲಿ ಮಗಳು ಋತು ಸ್ಪರ್ಶ ಸುಮಾರು ಎಂಟು ವರ್ಷಗಳಿಂದ ಟೆಕ್ವಾಂಡೋ ಸಮರ ಕಲೆಯನ್ನ ಕಲಿತು ನಾಲ್ಕು ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಬ್ಲಾಕ್ ಬೆಲ್ಟ್ ಪಡೆದಿದ್ದಾಳೆ. ಜೊತೆಗೆ ಅಂತಾರಾಷ್ಟ್ರೀಯ ನೃತ್ಯಗಾರ್ತಿಯು ಆಗಿರುವ ಈ ಅಪ್ಪಟ ದೇಸಿ ಕಲಾ ಪ್ರತಿಭೆಯ ಪೂರ್ಣ ಪ್ರಮಾಣದ ಮೊದಲ ಚಿತ್ರವಾಗಿದೆ. ಈಗಾಗಲೇ ಕನ್ನಡದ ಬಾಲ್ಯ, ಗಂಗೆ ಗೌರಿ, ತಾರಕೇಶ್ವರ ಚಿತ್ರಗಳಲ್ಲಿ ಅಭಿನಯಿಸಿದ್ದು, ತಾರಕೇಶ್ವರ ಚಿತ್ರದಲ್ಲಿ ಬಾಲ ಸುಬ್ರಹ್ಮಣ್ಯನಾಗಿ ಬಾಲಕನ ಪಾತ್ರದಲ್ಲಿ ಕಾಣಿಸಿದ್ದಾಳೆ. ತಾರಾ ಬಳಗದಲ್ಲಿ ಋತು ಸ್ಪರ್ಶ, ಡಾ, ಸುಮಿತ ಪ್ರವೀಣ್ , ಪ್ರವೀಣ್ ಸಿ ಭಾನು , ಪಲ್ಲವಿ ರಾವ್, ಸಹನಶ್ರೀ , ವಿಫ ರವಿ, ಸ್ವಾತಿ ಶಿವಮೊಗ್ಗ, ರೇಖಾ ಕೂಡ್ಲಗಿ ಮೊದಲಾದವರು ಅಭಿನಯಿಸಿದ್ದು, ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಪ್ರಮೋದ್ ಭಾರತೀಯ, ಸಾಹಿತ್ಯ ಮನೋಜಕುಮಾರ, ಸಂಗೀತ ಎಂ.ಎಸ್ ತ್ಯಾಗರಾಜ, ಸಾಹಸ ವಿಫ ರವಿ, ಸಂಕಲನ ರವಿಚಂದನ್ ಸಿ, ಧ್ವನಿಗ್ರಹಣ ಕೃಸ್ಣಮೂರ್ತಿ, ಪ್ರಸಾಧನ ವೆಂಕಟೇಶ, ಕಲೆ ಚೇತನ್, ಪಿಆರ್ ಓ ಆರ್.ರಜನಿಕಾಂತ್, ಪತ್ರಿಕಾ ಸಂಪರ್ಕ ವೀರೇಂದ್ರ ಬೆಳ್ಳಿಚುಕ್ಕಿ, ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ , ಸಹನಿರ್ದೇಶನ ಅನಿಲ್, ಯುವಸೂರ್ಯ, ಸೂರಿ, ರಚನೆ ನಿರ್ದೇಶನ ರವೀಂದ್ರ ವಂಶಿ ಅವರದಿದ್ದು ಈ ಚಿತ್ರದ ಸಹ ನಿರ್ಮಾಪಕರು ಪ್ರವೀಣ್ ಸಿ ಭಾನು , ನಿರ್ಮಾಪಕರು ಡಾ, ಸುಮಿತ ಪ್ರವೀಣ್ ಅವರಾಗಿದ್ದಾರೆ. ಪ್ರೇಕ್ಷಕರು ಮೈಸೂರು ಚಿತ್ರೋತ್ಸವದಲ್ಲಿ ಚಿತ್ರವನ್ನು ವೀಕ್ಷಿಸಿ ಬಾಲ ಪ್ರತಿಭೆಯನ್ನು ಮತ್ತು ತಂಡವನ್ನು ಪ್ರೋತ್ಸಾಹಿಸಬೇಕು ಎಂದು ಡಾ, ಸುಮಿತ ಪ್ರವೀಣ ಕೋರಿದ್ದಾರೆ.
*****
ವರದಿ:ಡಾ, ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬