ಅಂಬೇಡ್ಕರ್ ಕಾಲೋನಿ ಅಭಿವೃದ್ಧಿ ಯಿಂದ ಮರೀಚಿಕೆ.
ಮರಿಯಮ್ಮನಹಳ್ಳಿ ಅ.05

ಹೋಬಳಿಯ ಜಿ.ನಾಗಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಗರಗ ಗ್ರಾಮದಲ್ಲಿ ಎಸ್ಸಿ ಕಾಲೋನಿಗಳನ್ನು ಅಭಿವೃದ್ಧಿಯಿಂದ ಕಡೆಗಣಿಸಲಾಗಿದೆ ಹಾಗಾಗಿ ಪ್ರತಿ ಸಲ ಮಳೆಗಾಲ ಬಂದಾಗ ಇದೇ ಪರಿಸ್ಥಿತಿ ಎದುರಿಸುತಿದ್ದೇವೆ. ಈ ಬಗ್ಗೆ ಯಾವೊಬ್ಬ ಅಧಿಕಾರಿಗಳು ಸಹ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ .ಪ್ರತೀ ವರ್ಷ ಮಳೆ ಶುರುವಾಯಿತು ಎಂದರೆ ನೀರಿನ ಹರಿವು ವಿಪರೀತವಾಗುತ್ತದೆ ಕಾಲೋನಿಗಳಲ್ಲಿ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆ ಮೇಲೆ ನೀರು ಹರಿದು ಮನೆಯೊಳಗೆ ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ. ಗರಗ ಗ್ರಾಮದಲ್ಲಿ ಎಸ್/ಸ್ಸಿ ಜನಾಂಗದ 50 ಮನೆಗಳಿರುವ ಅಂಬೇಡ್ಕರ್ ಕಾಲೋನಿಯಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ ಮತ್ತು ಚರಂಡಿ ಕಳೆದ 10 ವರ್ಷಗಳಿಂದ ಮಾಡಿಸದೆ ಇರುವುದರಿಂದ ಪ್ರತೀ ವರ್ಷ ಇಂತಹ ಅನಾಹುತಗಳು ಮರುಕಳಿಸುತ್ತಿವೆ. ಸ್ಥಳೀಯರು ಅಧಿಕಾರಿಗಳಿಗೆ ಹಲವು ಬಾರಿ ಮೌಕಿಕವಾಗಿ, ಪತ್ರದ ಮುಖಾಂತರ ಮನವಿ ಮಾಡಿದರು ಮಾಡಿಸುತ್ತೇವೆಂದು ಹೇಳಿ ನಿರ್ಲಕ್ಷ್ಯ ವಹಿಸಿದ್ದಾರೆ. ಜನ ಪ್ರತಿನಿಧಿಗಳು ಇತ್ತ ಗಮನ ಹರಿಸುತ್ತಿಲ್ಲ. ಚುನಾವಣೆಗಳು ಬಂದಾಗ ಮಾತ್ರ ನಾವು ನೆನೆಪಾಗುತ್ತೇವೆ. ಈ ಭಾರಿ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿ ಕೈ ಕಾಲು ಮುಗಿದು ಓಟು ಹಾಕಿಸಿ ಕೊಳ್ಳುತ್ತಾರೆ. ನಂತರ ನಮ್ಮ ಗೋಳು ಕೇಳೋರಿರುವುದಿಲ್ಲ, ಈ ಕಡೆ ಇಣಿಕಿಯೂ ನೋಡೋದಿಲ್ಲ. ಇದೇ ರೀತಿ ನಿರ್ಲಕ್ಷ್ಯ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಅಧಿಕಾರಿಗಳ ವಿರುದ್ಧ ಹೊರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸ್ಥಳೀಯರು ಪತ್ರಿಕೆಗೆ ತಿಳಿಸಿದರು. ಇನ್ನೂ ಮುಂದೆ ಯಾದರು ಅಧಿಕಾರಿಗಳು ಈ ಕಡೆ ಗಮನ ಹರಿಸಿ ಅಭಿವೃದ್ಧಿಗೆ ಮುಂದಾಗ ಬೇಕೆಂದರು.(ಬಾಕ್ಸ್)-ನಿನ್ನೆ ರಾತ್ರಿ ನಾವು ಮಲಗಿದ ಸಮಯದಲ್ಲಿ ವಿಪರೀತ ಮಳೆ ಬಂದಿದೆ. ಚರಂಡಿ, ರಸ್ತೆ ಇಲ್ಲದ ಕಾರಣ ನೀರು ಮನೆ ಒಳಗೆ ನುಗ್ಗಿದ್ದರಿಂದ ರಾತ್ರಿಯೆಲ್ಲಾ ನಾವು ನಿದ್ದೆ ಮಾಡಿಲ್ಲ. ಅಧಿಕಾರಿಗಳು ನಮ್ಮ ಕೇರಿಯನ್ನು ಗಮನದಲ್ಲಿಟ್ಟುಕೊಂಡು ಮೂಲಭೂತ ಸೌಕರ್ಯಗಳನ್ನು ಕೊಡಬೇಕು.- ತಳವಾರ ಹನುಮಂತಪ್ಪ, ಮನೆ ಮಾಲೀಕ (ಬಕ್ಸ್ )-ಪಂಚಾಯಿತಿಗೆ ಈ ಬಗ್ಗೆ ಮನವಿ ಪತ್ರ ಸಲ್ಲಿಸಿದ್ದೇವೆ, ಅಧಿಕಾರಿಗಳಿಂದ ಯಾವುದೇ ರೀತಿಯ ಸ್ಪಂದನೆ ಬಂದಿರುವುದಿಲ್ಲ. ಎಸ್ಸಿ ಕಾಲೋನಿ ಗಳೆಂದರೆ ಅಧಿಕಾರಿಗಳಿಗೆ ಅದೇಕೋ ನಿರ್ಲಕ್ಷ್ಯ ಗೊತ್ತಿಲ್ಲ ಇದೇ ರೀತಿ ಮುಂದಿನ ದಿನಗಳಲ್ಲಿ ನಿರ್ಲಕ್ಷಿಸಿದರೆ ಕಾನೂನಿನ ಮೊರೆ ಹೋಗ ಬೇಕಾಗುತ್ತದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ