ಶ್ರೀಮಾತೆಯವರದು ಭಕ್ತಿ- ಭಾವ ಭರಿತ ಜೀವಂತ ಪೂಜೆ – ಮಾತಾಜೀ ತ್ಯಾಗಮಯೀ.

ಚಳ್ಳಕೆರೆ ಮೇ.22

ದಿವ್ಯತ್ರಯರ ಇಂದಿನ ಅಲಂಕಾರ 🌺💐

ಶ್ರೀಮಾತೆ ಶಾರದಾದೇವಿಯವರು ಶ್ರೀರಾಮಕೃಷ್ಣ ಪರಮಹಂಸರಿಗೆ ಮಾಡುತ್ತಿದ್ದ ಪೂಜೆಯು ಭಕ್ತಿ-ಭಾವಭರಿತ ಸಾಕ್ಷಾತ್ ಜೀವಂತ ಪೂಜೆಯೇ ಆಗಿತ್ತು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು.

ಶ್ರೀಮಾತೆಯವರ ಪೂಜಾವಿಧಾನ

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಸ್ವಾಮಿ ಆತ್ಮಸ್ಥಾನಂದಜೀ ಅವರ ಸ್ಮೃತಿಗಳು” ಹಾಗೂ ಸ್ವಾಮಿ ಅಸೀಮಾನಂದರು ಬರೆದ “ಶ್ರೀಮಾತೆಯವರು ಹೇಗೆ ಪೂಜಿಸುತ್ತಿದ್ದರು ?” ಎಂಬ ಲೇಖನದ ಕುರಿತು ವಿಶೇಷ ಪ್ರವಚನ ನೀಡುತ್ತಾ ಮಾತನಾಡುತ್ತಿದ್ದರು.

ಪೂಜ್ಯ ಮಾತಾಜೀ ತ್ಯಾಗಮಯೀ ಅವರಿಂದ ದಿವ್ಯತ್ರಯರಿಗೆ ಮಂಗಳಾರತಿ

ಸತ್ಸಂಗದ ಆರಂಭದಲ್ಲಿ ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ವಿಶೇಷ ಭಜನೆ, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.

ಸತ್ಸಂಗ ಸಭೆಯಲ್ಲಿ ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಮಂಜುಳಮ್ಮ, ಕವಿತಾ, ವೆಂಕಟೇಶ್, ಚೆನ್ನಕೇಶವ, ಗೀತಾ ವೆಂಕಟೇಶ್, ಸಿ.ಎಸ್ ಭಾರತಿ, ಕಾವೇರಿ ಸುರೇಶ್, ಸುನೀತಾ, ಮಾನ್ಯ ಸೇರಿದಂತೆ ಸದ್ಭಕ್ತರು ಉಪಸ್ಥಿತರಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button