ಉದ್ಯೋಗ ಖಾತ್ರಿ ನಡಿಗೆ ಸಬಲತೆಯಡೆಗೆ ಅಭಿಯಾನ.
ಬೆಳಗಲ್ಲ ಅ.19

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬೆಳಗಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಗಲ್ಲ ಗ್ರಾಮದಲ್ಲಿ 2025-26 ನೇ ಕಾರ್ಮಿಕರ ಕ್ರಿಯಾಯೋಜನೆ ತಯಾರಿಸುವ ನಿಟ್ಟಿನಲ್ಲಿ ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.ವೈಯಕ್ತಿಕ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿ, ಗ್ರಾಮಸ್ಥರಿಂದ ಬೇಡಿಕೆ ಪಡೆಯಲಾಯಿತು. ಸ್ವಚ್ಛತಾ ವಾಹನದ ಮೂಲಕ ಗ್ರಾಮದಲ್ಲಿ ಅರಿವು ಮೂಡಿಸಲಾಯಿತು. ಜೊತೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ರೈತರಿಗೆ ತಿಳಿಸಿ ಕೊಡಲಾಯಿತು. ಇನ್ನೂ ದೇವಸ್ಥಾನ ಹಾಗೂ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ QR ಕೋಡ್ ಭಿತ್ತಿ ಪತ್ರವನ್ನು ಅಂಟಿಸಲಾಯಿತು.ಈ ಸಂದರ್ಭದಲ್ಲಿ ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಬಿ.ಎಫ್.ಟಿ ಬ್ರಹ್ಮಲಿಂಗೇಶ್ ಅಂತರಗೊಂಡ, ಬಿಲ್ ಕಲೆಕ್ಟರ್ ಮಾರುತಿ ದಾಸರ, ಸಿಪಾಯಿ ಸಿದ್ದು ಕುಂಬಾರ, ವಾಟರ್ ಮನ್ ಶರಣು ಸನಾಲ, ಹನುಮಂತ ಮೇಟಿ, ಕಾಯಕ ಬಂಧುಗಳು ಉಪಸ್ಥಿತರಿದ್ದರು.