“ಮಹಾಕವಿ ಮಹರ್ಷಿ ವಾಲ್ಮೀಕಿಯರು”…..

ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಓದಿ ಮಹಾ ಪದವಿ ಪುರಸ್ಕಾರಗಳನ್ನ ಪಡೆದ ನಾವುಗಳು ಅರ್ಥಗರ್ಭಿತವಾದ ಸಾಹಿತ್ಯದ ಒಂದು ಸಾಲನ್ನು ರಚಿಸಲು ಹೆನಗಾಡುತ್ತೇವೆ ಯಾರ್ಯಾರೋ ಬರೆದಿರುವುದನ್ನು ಅದಲು ಬದಲು ಮಾಡಿ ಬರೆದು ಅದಕ್ಕೆ ನಮ್ಮ ಹೆಸರನ್ನ ಹಾಕುತ್ತೇವೆ. ಬದುಕಿನ ಅರ್ಧ ಆಯುಷ್ಯವನ್ನೇ ನಾವುಗಳು ಶಾಲಾ-ಕಾಲೇಜುಗಳಲ್ಲೇ ಕಳೆಯುತ್ತೇವೆ .ಆದರೂ ನಮಗೆ ಸರಿಯಾಗಿ ಭಾಷಾ ಜ್ಞಾನದ ತಿಳುವಳಿಕೆ ಇಲ್ಲ ಹೊಸ ಹೊಸ ಶಬ್ದ ಪ್ರಯೋಗಗಳ ಕೊರತೆ ನಮ್ಮೊಳಗೆ ಇದೆ ಬಳಸಿದ ಪದಗಳನ್ನೇ ಮತ್ತೆ ಮತ್ತೆ ಬಳಸುತ್ತೇವೆ, ಕೆಲವು ಬಾರಿ ನಾವು ಬರದದ್ದು ಯಾರಿಗೂ ಅರ್ಥವಾಗದಂತೆ ಇರುತ್ತದೆ ಹಾಗಿದ್ದರೂ ಅದಕ್ಕೆ ಪ್ರಶಸ್ತಿ ಪುರಸ್ಕಾರಗಳ ಹುಡುಕಾಟದಲ್ಲಿರುತ್ತೇವೆ. ಆದರೆ ಯಾವ ಶಾಲಾ ಮೆಟ್ಟಿಲನ್ನು ಏರದೇ ನಮ್ಮಯ ಪ್ರಸಿದ್ಧ ವಿಶ್ವ ವಿದ್ಯಾಲಯಗಳತ್ತ ತೆಲೆ ಹಾಕದೆ ಇಂದಿನ ಹಾಗೆ ಶಿಕ್ಷಣದ ಸಾಮಗ್ರಿಗಳು ಇಲ್ಲದ ಕಾಲದಲ್ಲಿ ಅಕ್ಷರಗಳ ಜ್ಞಾನ ಇಲ್ಲದಾತ ಜಗತ್ತೇ ಬೆರಗಾಗುವಂತಹ ಇಡೀ ವಿಶ್ವದ ಪ್ರಸಿದ್ಧ ಮಹಾ ಕಾವ್ಯಗಳಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುವ ರಾಮಾಯಣ ಎಂಬ ಮಹಾಕಾವ್ಯದ ಕರ್ತೃವಾದವರೇ ಮಹರ್ಷಿ ವಾಲ್ಮೀಕಿಯರು. ಇಂದು ಆ ಒಂದು ಮಹಾ ಕಾವ್ಯದ ಮೇಲೆ ಸಾವಿರಾರು ಗ್ರಂಥಗಳು ಹೊರ ಬಂದಿವೆ ಅದರ ವಿಮರ್ಶೆ ಎಷ್ಟು ಮಾಡಿದರು ಮುಗಿಯಲಾಗದು ಶ್ರೀರಾಮನೆಂಬ ಯುಗ ಪುರುಷನ ಪ್ರತಿ ಹೆಜ್ಜೆ ಗುರುತುಗಳನ್ನು ಬಹು ಸುಂದರ ಪದಗಳಲ್ಲಿ ಹಿಡಿದಿಡಲಾಗಿದೆ ಒಂದು ವೇಳೆ ವಾಲ್ಮೀಕಿ ಮಹರ್ಷಿಗಳು ಈ ಮಹಾಕಾವ್ಯ ರಚಿಸದೇ ಹೋಗಿದ್ದರೆ ನಮಗ್ಯಾರಿಗೂ ಆ ಮರ್ಯಾದ ಪುರುಷೋತ್ತಮ ಪ್ರಭು ರಾಮಚಂದ್ರನ ಚರಿತ್ರೆಯ ಅರಿವಾಗುತ್ತಿರಲಿಲ್ಲ ಇಂದು ನಮಗೆ ಅಯೋಧ್ಯಾಧಿಪತಿಯ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ ಎಂದಾದರೆ ಅದೆಲ್ಲವೂ ವಾಲ್ಮೀಕಿ ಮಹರ್ಷಿಗಳ ಕೊಡುಗೆಯೇ ಆಗಿದೆ. ಇನ್ನೂ ಮಹರ್ಷಿಗಳ ಬದುಕಿನ ಕಥೆಯೇ ರೋಮಾಂಚನ ದಾಯಕವಾದದ್ದು ಅವರ ಮೂಲ ಹೆಸರು ರತ್ನಾಕರ. ಕೊಲೆ ಕಳ್ಳತನ ದರೋಡೆಗಳನ್ನ ಮಾಡುತ್ತಿದ್ದ ರತ್ನಾಕರರು ಒಂದು ದಿನ ಕಾಡಿನ ದಾರಿಯ ಮಧ್ಯ ನಾರದರು ಹೋಗುತ್ತಿರುವಾಗ ಅವರನ್ನ ತಡೆದು ನಿಮ್ಮ ಬಳಿ ಇರುವ ಎಲ್ಲಾ ಆಭರಣಗಳನ್ನು ಕೊಡದೆ ಹೋದರೆ ನಿಮ್ಮನ್ನು ಜೀವಂತವಾಗಿ ನಾನು ಬಿಡಲಾರೆ ಎಂದು ಬೆದರಿಸಿದರು ಆಗ ರತ್ನಾಕರರಿಗೆ ನಾರದರು ಹೇಳುತ್ತಾರೆ ನೀನು ಇಷ್ಟೆಲ್ಲಾ ಪಾಪಗಳನ್ನು ಮಾಡುತ್ತಿರುವೆ ಈ ಪಾಪಗಳನ್ನು ಯಾರಿಗಾಗಿ ಮಾಡುತ್ತಿರುವೆ ಅವರು ನಿನ್ನ ಪಾಪಗಳಲ್ಲಿ ಪಾಲುದಾರರಾಗುವವರೇ?ಎಂದು ಕೇಳಿದಾಗ ರತ್ನಾಕರರು ನಾನು ಈ ಪಾಪದ ಕಾರ್ಯಗಳನ್ನು ನನ್ನ ತಂದೆ ತಾಯಿ ಹೆಂಡರು ಮಕ್ಕಳನ್ನ ಸಾಕುವುದಕ್ಕಾಗಿ ಮಾಡುತ್ತಿರುವೆ ಅವರು ಇದರಲ್ಲಿ ಪಾಲುದಾರರಾಗುತ್ತಾರೆ ನನ್ನ ಜೊತೆಯಲ್ಲಿ ಎಲ್ಲವನ್ನೂ ಅವರು ಅನುಭವಿಸುವುದರಿಂದ ನನ್ನ ಪಾಪವನ್ನು ಅವರು ತೆಗೆದು ಕೊಳ್ಳುವರು ಎಂದನು ಆಗ ನಾರದರೂ ನಾನು ಇಲ್ಲೇ ಇರುವೆ ನೀನು ನಿನ್ನ ಮನೆಗೆ ಹೋಗಿ ಅವರು ನಿನ್ನ ಪಾಪದಲ್ಲಿ ಪಾಲುದಾರರಾಗುವರೆ ಕೇಳಿಕೊಂಡು ಬಾ ಎಂದು ಕಳಿಸಿದಾಗ ರತ್ನಾಕರನೂ ಮನೆಗೆ ಬಂದು ಎಲ್ಲರನ್ನೂ ಕೇಳುತ್ತಾನೆ ನಾನು ಪ್ರತಿನಿತ್ಯ ಅನೇಕ ಕೊಲೆ ಸುಲಿಗೆಗಳನ್ನು ಮಾಡಿ ನಿಮ್ಮನ್ನು ಸಾಕುತ್ತಿರುವೆ ಆ ಅನ್ಯಾಯದ ಮಾರ್ಗದಿಂದ ಬಂದ ಪಾಪದಲ್ಲಿ ನೀವೆಲ್ಲರೂ ಪಾಲುದಾರರಾಗುವಿರಲ್ಲವೇ ಎಂದಾಗ ಎಲ್ಲರೂ ಹೇಳಿದರು ನಾವೇಕೆ ನಿನ್ನ ಪಾಪದಲ್ಲಿ ಪಾಲುದಾರರಾಗ ಬೇಕು ಅದನ್ನು ನೀನೆ ಅನುಭವಿಸಬೇಕು ನಮ್ಮನ್ನು ದುಡಿದು ಸಾಕುವುದು ನಿನ್ನ ಕರ್ತವ್ಯ ಹೇಗೆ ಸಾಕುತ್ತಿರುವೆ ಎನ್ನುವುದು ಮುಖ್ಯವಾಗಲಾರದು ನಮಗೆ ಎಂದು ಹೇಳಿದಾಗ ಆ ಕ್ಷಣವೇ ಜ್ಞಾನೋದಯವಾಯಿತು ರತ್ನಾಕರಣಿಗೆ. ನಾನು ಮಾಡಿದ ಪಾಪ ಪುಣ್ಯದ ಪ್ರತಿ ಫಲಗಳು ನಾನೇ ಅನುಭವಿಸಬೇಕು ಒಳ್ಳೆಯದನ್ನು ಅನುಭವಿಸಲು ಎಲ್ಲರೂ ಇರುತ್ತಾರೆ ನನಗೆ ಬಂದ ಕೆಟ್ಟ ಸಮಯವನ್ನು ತೆಗೆದು ಕೊಳ್ಳಲು ನನ್ನ ಜೊತೆಗೆ ಯಾರು ನಿಲ್ಲಲಾರರು ಎನ್ನುವುದರ ಅರಿವಾಯಿತು ಆಗ ನಾರದರ ಬಳಿ ಹೊರಟು ಬಂದು ಅವರನ್ನೇ ಗುರುವಾಗಿ ಸ್ವೀಕರಿಸಿ ರಾಮ ಎಂಬುವ ಮಹಾ ಮಂತ್ರದ ದೀಕ್ಷೆ ಪಡೆದರು ಒಂದು ದಿನವು ಮಂತ್ರಗಳನ್ನ ಪಠಿಸದ ಆ ನಾಲಿಗೆಗೆ ರಾಮ ಎಂಬ ಮಂತ್ರಾಕ್ಷರವು ಉಚ್ಚಾರವಾಗಲೇ ಇಲ್ಲ. ಅದನ್ನು ಮರಾ ಮರಾ ಎಂದು ಹೇಳುತ್ತಲೇ ಮುಂದೆ ಅದೇ ರಾಮ ರಾಮ ಎಂದು ಉಚ್ಚಾರವಾಗುತ್ತಾ ಹೋಯಿತು. ಆ ಮಂತ್ರವನ್ನೇ ಪಟ್ಟಿಸುತ್ತಾ ಹತ್ತಾರು ವರುಷಗಳ ಕಾಲ ತಪಸ್ಸುನ್ನು ಆಚರಿಸಿ ಮುಂದೆ ಅದೇ ಪ್ರಭು ರಾಮಚಂದ್ರನ ಮಹಾ ಕಾವ್ಯವನ್ನು ರಚಿಸಿ ರಾಮನನ್ನೇ ಜಗತ್ತಿಗೆ ಪರಿಚಯಿಸಿದರು. ತುಂಬ ಗರ್ಭಿಣಿಯಾದ ಸೀತಾ ಮಾತೆಯನ್ನು ರಾಮನು ಕಾಡಿಗೆ ಅಟ್ಟಿದಾಗ ಅವಳಿಗೆ ಆಶ್ರಯವನ್ನ ನೀಡಿ ಅವಳ ಅವಳಿ ಮಕ್ಕಳಾದ ಲವ ಕುಶರಿಗೆ ಬಿಲ್ವಿದ್ಯಾ ಕಲೆಯ ಜೊತೆಗೆ ಶಿಕ್ಷಣದ ಜ್ಞಾನವನ್ನು ನೀಡಿದರು ರಾಮನ ಹೆಸರು ಎಲ್ಲಿಯವರೆಗೂ ಈ ಭೂಮಿಯ ಮೇಲಿರುತ್ತದೆಯೋ ಅಲ್ಲಿಯವರೆಗೆ ಮಹರ್ಷ ವಾಲ್ಮೀಕಿಯರ ಹೆಸರು ಸ್ಥಿರ ಸ್ಥಾಯಿಯಾದದ್ದು.

✍️ ಶ್ರೀ ರಾಮಕೃಷ್ಣ ದೇವರು

ಶ್ರೀ ಷಣ್ಮುಖಾರೂಢ ಮಠ.

ವಿಜಯಪುರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button