🚨 ಬ್ರೇಕಿಂಗ್ ನ್ಯೂಸ್, ಅಂಗನವಾಡಿಗಳಿಗೆ ಹೈಟೆಕ್ ಸ್ಪರ್ಶ – ನೂತನ ಕಟ್ಟಡಗಳಿಗೆ ಅದ್ಧೂರಿ ಚಾಲನೆ..! 🚨💥ಕರಾವಳಿ ನಗರಿಯ ಪುಟಾಣಿಗಳ ಶೈಕ್ಷಣಿಕ ಸುಧಾರಣೆಗೆ – ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ!💥

ಉಡುಪಿ ಮೇ.06

ಮಕ್ಕಳ ಶೈಕ್ಷಣಿಕ ಬುನಾದಿಯನ್ನು ಭದ್ರ ಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಉಡುಪಿ ನಗರ ಸಭಾ ವ್ಯಾಪ್ತಿಯಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ನಗರದ “ಇಂದ್ರಾಳಿಯ ಮಂಚಿ ಕುಮೇರಿ” ಹಾಗೂ “ಆದಿಉಡುಪಿ ಮೀನು ಮಾರುಕಟ್ಟೆ” ಸಮೀಪದ ಎರಡು ಅಂಗನವಾಡಿ ಕೇಂದ್ರಗಳ ನೂತನ ಕಟ್ಟಡ ಕಾಮಗಾರಿಗೆ ಇಂದು ಬೆಳಿಗ್ಗೆ ಅದ್ಧೂರಿಯಾಗಿ ಶಿಲಾನ್ಯಾಸ ನೆರವೇರಿಸಲಾಯಿತು.

ಸದೃಢ ಕಟ್ಟಡ – ಉಜ್ವಲ ಭವಿಷ್ಯ:-

ಬಹಳ ದಿನಗಳ ಬೇಡಿಕೆ ಯಾಗಿದ್ದ ಈ ನೂತನ ಕಟ್ಟಡಗಳಿಗೆ ಒಟ್ಟು “40 ಲಕ್ಷ ರೂಪಾಯಿ” ಅನುದಾನ ಬಿಡುಗಡೆ ಯಾಗಿದ್ದು, “ಶಾಸಕ ಯಶ್ ಪಾಲ್ ಸುವರ್ಣ” ಅವರು ಶಿಲಾನ್ಯಾಸ ನೆರವೇರಿಸಿ ಕಾಮಗಾರಿಗೆ ವೇಗ ನೀಡಿದರು. ಈ ವೇಳೆ ಮಾತನಾಡಿದ ಗಣ್ಯರು, ಅಂಗನವಾಡಿಗಳು ಕೇವಲ ಕೇಂದ್ರಗಳಲ್ಲ, ಅವು ಮಕ್ಕಳ ಭವಿಷ್ಯದ ಅಡಿಪಾಯ ಎಂದು ಅಭಿಪ್ರಾಯ ಪಟ್ಟರು.

ಗಮನ ಸೆಳೆದ ಗಣ್ಯರ ಉಪಸ್ಥಿತಿ:-

ಕಾರ್ಯಕ್ರಮದಲ್ಲಿ ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ “ರಮೇಶ್ ಕಾಂಚನ್” ನಗರಾಭಿವೃದ್ಧಿ ಪ್ರಾಧಿಕಾರದ (UUDA) ಅಧ್ಯಕ್ಷ “ದಿನಕರ ಹೇರೂರು” ಪ್ರಾಧಿಕಾರದ ಸದಸ್ಯರಾದ ಸತೀಶ್ ಮಂಚಿ, ದಿಲೀಪ್ ಹೆಗ್ಡೆ ಸೇರಿದಂತೆ ಮಾಜಿ ನಗರಸಭಾ ಸದಸ್ಯರು, ಇಲಾಖಾ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

ಸರ್ಕಾರಕ್ಕೆ ಕೃತಜ್ಞತೆ:-

“ಉಡುಪಿಯ ಅಭಿವೃದ್ಧಿಗೆ ಮತ್ತು ಅಂಗನವಾಡಿಗಳ ಸುಧಾರಣೆಗೆ “ಮುಖ್ಯಮಂತ್ರಿ ಸಿದ್ದರಾಮಯ್ಯ” ಅವರು ಸ್ಪಂದಿಸಿದ್ದಾರೆ. ವಿಶೇಷವಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ “ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್” ಅವರು ವೈಯಕ್ತಿಕ ಮುತುವರ್ಜಿ ವಹಿಸಿ ಈ ಅನುದಾನ ಬಿಡುಗಡೆ ಗೊಳಿಸಿರುವುದು ಶ್ಲಾಘನೀಯ” ಎಂದು ರಮೇಶ್ ಕಾಂಚನ್ ಅವರು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

ವರದಿಯ ಮುಖ್ಯಾಂಶಗಳು:-

ಯೋಜನೆ:-

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರ.

ಸ್ಥಳಗಳು:-

ಮಂಚಿ ಕುಮೇರಿ ಹಾಗೂ ಆದಿಉಡುಪಿ.

ಒಟ್ಟು ವೆಚ್ಚ:-

₹40,00,000/-

ಉಪಸ್ಥಿತಿ:-

ಶಾಸಕರು, ಗ್ಯಾರಂಟಿ ಸಮಿತಿ ಅಧ್ಯಕ್ಷರು, UUDA ಅಧ್ಯಕ್ಷರು ಮತ್ತು ಸ್ಥಳೀಯ ಜನ ಪ್ರತಿನಿಧಿಗಳು. ಈ ನೂತನ ಹೈಟೆಕ್ ಕಟ್ಟಡಗಳು ಪೂರ್ಣ ಗೊಂಡಲ್ಲಿ, ಸ್ಥಳೀಯ ಮಕ್ಕಳಿಗೆ ಸುಸಜ್ಜಿತ ಪರಿಸರದಲ್ಲಿ ಪೌಷ್ಟಿಕ ಆಹಾರ ಮತ್ತು ಗುಣಮಟ್ಟದ ಪೂರ್ವ ಪ್ರಾಥಮಿಕ ಶಿಕ್ಷಣ ಲಭ್ಯವಾಗಲಿದೆ.

ವರದಿ:ಆರತಿ.ಗಿಳಿಯಾರು.ಉಡುಪಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button