ರಕ್ತ ದೊತ್ತಡ ಮಧುಮೇಹ ನಿರ್ಲಕ್ಷ್ಯ ಬೇಡ ಜಾಗೃತಿ ಇರಲಿ – ಎಸ್.ಎಸ್ ಅಂಗಡಿ.
ಅಮೀನಗಡ ಮೇ.05

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ ವತಿಯಿಂದ ತಾಲೂಕಾ ಆರೋಗ್ಯ ಅಧಿಕಾರಿಗಳು ಹುನಗುಂದ ಪ್ರಾಥಮಿಕ ಆರೋಗ್ಯ ಕೇಂದ್ರ ಅಮೀನಗಡ ಸಹಯೋಗದಲ್ಲಿ, ಉಪ ಕೇಂದ್ರ ಅಮೀನಗಡ *ಚಳ್ಳಿಗಿಡದವರ ಒಣಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು* ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿವರು, *ರಕ್ತ ದೊತ್ತಡ ಮಧುಮೇಹ ನಿರ್ಲಕ್ಷ್ಯ ಬೇಡ ಜಾಗೃತಿ ಇರಲಿ* *ಆಧುನಿಕ ಜೀವನ ಶೈಲಿ ಆಹಾರ ಪದ್ಧತಿಯಿಂದ ರಕ್ತ ದೊತ್ತಡ ಮಧುಮೇಹ ನರ ದೌರ್ಬಲ್ಯ ಕ್ಯಾನ್ಸರ್ ರೋಗಗಳಿಗೆ ಕಾರಣ* ಘೋಷ ವಾಕ್ಯಯೊಂದಿಗೆ, ಆಧುನಿಕ ಜೀವನ ಶೈಲಿಯಿಂದ ಅಸಾಂಕ್ರಾಮಿಕ ರೋಗಗಳು ಮಾನವ ದೇಹ ಆವರಿಸಿ ದಿನನಿತ್ಯ ಜೀವನದಲ್ಲಿ ನರಳುವಂತೆ ಮಾಡುವುದು, ರಕ್ತ ದೊತ್ತಡ, ಮಧುಮೇಹ, ಸ್ತೂಲಕಾಯ, ಕ್ಯಾನ್ಸರ್, ಕಣ್ಣಿನ ಅಂಧತ್ವ ಸಾಮಾನ್ಯವಾಗಿ ಕುಟುಂಬದ ಸದಸ್ಯರಿಗೆ ಸಹಜವಾಗಿ ಬರುತ್ತವೆ, ಮೂವತ್ತು ವರ್ಷ ಮೇಲ್ಪಟ್ಟವರು ಆರೋಗ್ಯ ತಪಾಸಣೆ ಮಾಡಿಸಿ ಕೊಳ್ಳಬೇಕು ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಿ, ಆರೋಗ್ಯವಂತ ಜೀವನ ಸಾಗಿಸುವುದು ಸೂಕ್ತವಾಗಿದೆ. ದುಶ್ಚಟಗಳಾದ ಬೀಡಿ ಸೀಗರೇಟು ಸೇದುವುದು, ಗುಟ್ಕಾ ಮಧ್ಯಪಾನದಿಂದ ರಕ್ತ ದೊತ್ತಡ, ಮಧುಮೇಹ ನರ ದೌರ್ಬಲ್ಯ ಪಾರ್ಶವಾಯು ಆವರಿಸಿ ಮನುಷ್ಯನನ್ನು ನರಕ ಕೂಪಕ್ಕೆ ತಳ್ಳುವುದು, ಉತ್ತಮ ಆರೋಗ್ಯಕ್ಕಾಗಿ ವಾಯು ವಿಹಾರ, ಯೋಗ, ತರಕಾರಿ ಹಣ್ಣು ಹಂಪಲ, ಮೊಳಕೆ ಒಡೆದ ಕಾಳು ಸೇವನೆ ಸಮತೋಲನ ಆಹಾರ ಸೇವಿಸಿ ಆರೋಗ್ಯವನ್ನು ಉತ್ತಮವಾಗಿಟ್ಟು ಕೊಳ್ಳಬಹುದು, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಉಪ ಕೇಂದ್ರ ಮಟ್ಟದಲ್ಲಿ ಅಸಾಂಕ್ರಾಮಿಕ ರೋಗಗಳ ತಪಾಸಣೆ ಚಿಕಿತ್ಸೆ ಉಚಿತ ವಾಗಿರುತ್ತದೆ. ಹಾಗೂ ಯಾವುದೇ ಆರೋಗ್ಯ ಸಮಸ್ಯೆಗಳಿಗೆ 104 ಸಂಖ್ಯೆಗೆ ಉಚಿತ ಕರೆ ಮಾಡುವ ಮುಖಾಂತರ ಸದುಪಯೋಗ ಪಡೆದು ಕೊಳ್ಳಿ ಎಂದರು, ಆರೋಗ್ಯ ತಪಾಸಣೆಯಲ್ಲಿ ರಕ್ತ ದೊತ್ತಡ ಮಧುಮೇಹ ಸಂಶಯುತರನ್ನು ಉನ್ನತ ಆಸ್ಪತ್ರೆಗೆ ಕಳಿಸಲಾಯಿತು. ಅಸಾಂಕ್ರಾಮಿಕ ಆರೋಗ್ಯ ತಪಾಸಣೆ ಶಿಬಿರದಲ್ಲಿ ಆರೋಗ್ಯ ಇಲಾಖೆಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸಿ.ಎಸ್ ಕೊಲ್ಕಾರ, ಆಶಾ ಕಾರ್ಯಕರ್ತೆಯರಾದ ಕಲಾವತಿ ರೂಢಗಿ, ಸರಸ್ವತಿ ಹಿರೇಮಠ, ಪಟ್ಟಣದ ಮುಖಂಡರಾದ ಮಲ್ಲಪ್ಪ ರಕ್ಕಸಗಿ, ಶೇಖರ ಚಳ್ಳಿಗಿಡದ, ಶಂಕರಪ್ಪ ಕಾಳಗಿ, ಮಲ್ಲಿಕಾರ್ಜುನ ನಿಡಗುಂದಿ, ವೀರುಪಾಕ್ಷಪ್ಪ ರಗಟಿ, ತಾಯಿಂದಿರು, ಯುವಕರು ಭಾಗವಹಿಸಿದ್ದರು.

