ಶ್ರೀ ಜಟ್ಟಿಂಗೇಶ್ವರ ಹಾಗೂ ಗ್ರಾಮ ದೇವತೆ – ಅದ್ದೂರಿ ಜಾತ್ರಾ ಮಹೋತ್ಸವ ಜರುಗುವುದು.
ಗುಡದಿನ್ನಿ ಮೇ.06

ಮುದ್ದೇಬಿಹಾಳ ತಾಲೂಕಿನ ಗುಡದಿನ್ನಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಜಟ್ಟಿಂಗೇಶ್ವರ ಹಾಗೂ ಗ್ರಾಮ ದೇವತೆ ಜಾತ್ರೆ ಅದ್ದೂರಿಯಾಗಿ ನಡೆಯಲಿದ್ದು. ಮೇ 10 ರವಿವಾರ ದಂದು ಮುಂಜಾನೆ 10:00 ಗಂಟೆಗೆ ಸಕಲ ವಾದ್ಯಗಳೊಂದಿಗೆ ಹಾಗೂ ಗುಡದಿನ್ನಿ ಮತ್ತು ಟಕ್ಕಳಕಿ ಗ್ರಾಮದ ಡೊಳ್ಳಿನ ವಾಲ್ಗದೊಂದಿಗೆ ಪಂಚ ಪಲ್ಲಕ್ಕಿ ಉತ್ಸವ ಕುಂಭ ಮೇಳ ಹಾಗೂ ಕಂಟಲೆತ್ತಿನ ಮೆರವಣಿಗೆ ಮೂಲಕ ಮಧ್ಯಾಹ್ನ 03:00 ಗಂಟೆಗೆ ಕಳಸಾ ರೋಹಣ ಹಾಗೂ ಹೂ ಏರಿಸುವುದು ನಂತರ ಅಗ್ನಿ ಹಾಯುವುದು ನಂತರ ಅನ್ನ ಸಂತರ್ಪಣೆ ನಡೆಯುತ್ತದೆ.
ಅಂದೆ ರಾತ್ರಿ 10 :00ಗಂಟೆಗೆ ವಾದಿ ಪ್ರತಿವಾದಿ ಡೊಳ್ಳಿನ ಪದಗಳು ಶ್ರೀ ಮರಡಿ ಸಿದ್ದೇಶ್ವರ ಡೊಳ್ಳಿನ ಗಾಯನ ಸಂಘ ಶಿವಣಗಿ,ಹಾಗೂ ಶ್ರೀ ಅಮೋಘಸಿದ್ದೇಶ್ವರ ಡೊಳ್ಳಿನ ಗಾಯನ ಸಂಘ ಕೆಂಪಟ್ಟಿ, ಇವರಿಂದ ಜರುಗುತ್ತವೆ.ಮೇ 11 ಸೋಮವಾರ ದಂದು ಮುಂಜಾನೆ 10:00 ಗಂಟೆಗೆ ಟ್ಯಾಕ್ಟರ್ ನಿಂದ ಕಲ್ಲು ಜಗ್ಗಿಸುವ ಸ್ಪರ್ಧೆ (ರೌಂಡ್ ಸುತ್ತುವುದು) ಕಾರ್ಯಕ್ರಮ ಜರುಗುತ್ತದೆ.
ಮೇ 12 ಮಂಗಳವಾರ ದಂದು ಮುಂಜಾನೆ 11:00 ಗಂಟೆಗೆ ಸಕಲ ವಾದ್ಯ ವೈಭವಗಳೊಂದಿಗೆ ಶ್ರೀ ಗ್ರಾಮ ದೇವತೆ ಉಡಿ ತುಂಬುವ ಕಾರ್ಯಕ್ರಮ ನಡೆಯುತ್ತದೆ, ಮಧ್ಯಾಹ್ನ 03:00 ಗಂಟೆಗೆ ಸಂಗ್ರಾಣಿ ಕಲ್ಲು ಸಾಗ ಎತ್ತುವುದು, ಸಂಗ್ರಾಣಿ ಕಲ್ಲು ಒತಗಲ್ಲು ಮಾಡುವದು, ಭಾರವಾದ ಚೀಲ ಎತ್ತುವುದು, ಉಸುಕ್ಕಿನ ಚೀಲ ಎತ್ತುವುದು, ಈ ರೀತಿ ಕಾರ್ಯಕ್ರಮ ಜರಗುತ್ತದೆ.
ಅಂದೇ 08:00 ಗಂಟೆಗೆ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಜರಗುತ್ತದೆ, ರಾತ್ರಿ 10:00 ಗಂಟೆಗೆ ಬಸವೇಶ್ವರ ಬಯಲಾಟ ನಾಟ್ಯ- ಸಂಘ ರೆಬಿನಾಳ ಇವರಿಂದ ಶ್ರೀ ರೇಣುಕಾ ಯಲ್ಲಮ್ಮ ಮಹಾತ್ಮೆ ಎಂಬ ಬೈಲಾಟ ಜರುತ್ತದೆ. ಮೇ 14 ಗುರುವಾರ ದಂದು ಸಾಯಂಕಾಲ 06:00 ಗಂಟೆಗೆ ಹೂ ಇಳಿಸುವ ಕಾರ್ಯಕ್ರಮ ಇರುತ್ತದೆ ಎಂದು ಜಾತ್ರಾ ಕಮಿಟಿಯವರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಬಸವರಾಜ. ಸಂಕನಾಳ ಮುದ್ದೇಬಿಹಾಳ
