ಬಡತನದಲ್ಲಿ ಅರಳಿದ ನೀಲಮ್ಮನ ಶಿಕ್ಷಣಕ್ಕೆ ಎಸ್,ಎಸ್ ಪಾಟೀಲ್ (ನಡಹಳ್ಳಿ) ಆಸರೆ.
ಗುಂಡಕರ್ಜಗಿ ಮೇ.03

ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ ಗ್ರಾಮದ ಬಡ ದಲಿತ ಕುಟುಂಬದ ಹೆಣ್ಣು ಮಗಳು ನೀಲಮ್ಮ ಯಲ್ಲಪ್ಪ ಚಲವಾದಿ ಸಾಬೀತು ಪಡಿಸಿದ್ದಾರೆ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 593 (ಶೇ, 94,88) ಅಂಕಗಳನ್ನು ಪಡೆಯುವ ಮೂಲಕ ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ.
“ಕಡು ಬಡತನದಲ್ಲಿ ಛಲದ ಓದು” ಯಲ್ಲಪ್ಪ ಪರಸಪ್ಪ ಚಲವಾದಿ ಅವರ ಪುತ್ರಿಯಾದ ನೀಲಮ್ಮ ತೀವ್ರ ಆರ್ಥಿಕ ಸಂಕಷ್ಟದ ನಡುವೆಯೂ ಹಗಲಿರುಳು ಕ್ಷಮಿಸಿ ಈ ಸಾಧನೆ ಮಾಡಿದ್ದಾಳೆ.
ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಹಣದ ಕೊರತೆ ಎದುರಾದಾಗ ಕುಟುಂಬವು ಅಸಹಾಯಕ ಸ್ಥಿತಿಯಲ್ಲಿತ್ತು, ಮಗಳ ಮುಂದಿನ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದ ಪೋಷಕರಿಗೆ ಗ್ರಾಮದ ಹಿರಿಯರು ಧೈರ್ಯ ತುಂಬಿದರು.
ವಿಷಯ ತಿಳಿದ ತಕ್ಷಣ ಗ್ರಾಮದ ದಲಿತ ಸಮಾಜದ ಹಿರಿಯರಾದ ಹನುಮಂತ ಕಣಕಾಲ, ಚಂದಪ್ಪ ಕಣಕಾಲ, ಪರಸಪ್ಪ ಜಾಲಿಗಿಡದ, ಸೇರಿದಂತೆ ಅನೇಕರು ಸಮಾಜ ಸೇವಕ ಶಾಂತಗೌಡ್ರು ಎಸ್ ಪಾಟೀಲ್( ನಡಹಳ್ಳಿ) ಅವರನ್ನು ಭೇಟಿ ಮಾಡಿ ಸಹಾಯ ಕೋರಿದರು.
ತಕ್ಷಣವೇ ಸ್ಪಂದಿಸಿದ ಶಾಂತಗೌಡ್ರು “ಯಾವುದೇ ಸಮಾಜದ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು” ಎಂದು ಹೇಳಿ ನೀಲಮ್ಮ ಅವರ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿ ಕೊಂಡರು. “ಉಚಿತ ಪ್ರವೇಶ” ಶಾಂತಗೌಡರು ಅವರ ಶಿಫಾರಸ್ಸಿನ ಮೇರೆಗೆ ನೀಲಮ್ಮ ಅವರಿಗೆ ವಿಜಯಪುರದ ಪ್ರತಿಷ್ಠಿತ OXFORD PATIL,S ನಾಗರಭಟ್ NEET ಅಕಾಡೆಮಿ & PU SCIENCE COLLEGE ನಲ್ಲಿ ವಿಜ್ಞಾನ ವಿಭಾಗಕ್ಕೆ ಉಚಿತ ಪ್ರವೇಶ ಕೊಡಿಸಲಾಯಿತು.
ಈ ಮೂಲಕ ಬಡ ವಿದ್ಯಾರ್ಥಿನಿಯ ವೈದ್ಯಕೀಯ ಶಿಕ್ಷಣದ ಕನಸಿಗೆ ಹೊಸ ಆಯಾಮ ದೊರತಿದೆ, ಸಂಕಷ್ಟದ ಸಮಯದಲ್ಲಿ ದಲಿತ ಕುಟುಂಬಕ್ಕೆ ಆಸರೆಯಾದ ಶಾಂತಗೌಡ್ರು ಎಸ್, ಪಾಟೀಲ್ (ನಡಹಳ್ಳಿ) ಅವರ ಕಾರ್ಯಕ್ಕೆ ಗುಂಡಕರ್ಜಗಿ ಗ್ರಾಮಸ್ಥರು ಹಾಗೂ ದಲಿತ ಸಮಾಜದ ಮುಖಂಡರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಬಸವರಾಜ ಚಲವಾದಿ,ಹನುಮಂತ ಚಲವಾದಿ, ಶಾಂತಪ್ಪ ಚಲವಾದಿ,ಶಿವಪ್ಪ ಚಲವಾದಿ, ನೀಲಕಂಠ ಚಲವಾದಿ, ಸಾಬಣ್ಣ ಚಲವಾದಿ, ಯಲ್ಲಪ್ಪ ಚಲವಾದಿ, ಚೆನ್ನಮ್ಮ ಚಲವಾದಿ, ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಬಸವರಾಜ. ಸಂಕನಾಳ ಮುದ್ದೇಬಿಹಾಳ
