ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ ದಿಂದ – ಧನ ಸಹಾಯ.
ಗದಗ ಮೇ.06

ಆರ್ಥಿಕ ಸಂಕಷ್ಟದಲ್ಲಿರುವ ೧೦ನೇ ತರಗತಿ ನಂತರದ ಶಿಕ್ಷಣ ಮುಂದುವರಿಕೆಗಾಗಿ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಧಾರವಾಡದ ವಿದ್ಯಾಪೋಷಕ ಸಂಸ್ಥೆಯು ನರ್ಚರ್ ಮೆರಿಟ್ ಯೋಜನೆಯಡಿಯಲ್ಲಿ ೨೦೨೬-೨೭ನೆ ಶೈಕ್ಷಣಿಕ ಸಾಲಿಗಾಗಿ ಆರ್ಥಿಕ ನೆರವನ್ನು ನೀಡಲು ಮುಂದಾಗಿದೆ.
ವಿದ್ಯಾರ್ಥಿಗಳು ಮಾರ್ಚ ೨೦೨೬ರಲ್ಲಿ ಪ್ರಥಮ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಬರೆದು ಮೊದಲನೇ ಪ್ರಯತ್ನದಲ್ಲಿ ಶೇ. ೮೦% ಅಂಕ ಗಳಿಸಿರಬೇಕು. ಪಿ.ಯು.ಸಿ. ಮೊದಲನೇ ವರ್ಷದ ವಾಣಿಜ್ಯ ಮತ್ತು ಡಿಪ್ಲೋಮಾ ಕೋರ್ಸಗೆ ಸೇರಲು ಬಯಸುವ ವಿದ್ಯಾರ್ಥಿ/ನಿಯರು ಕುಟುಂಬದ ಮಾಸಿಕ ವರಮಾನ ರೂ. ೧೦,೦೦೦/- ಕ್ಕಿಂತ ಕಡಿಮೆ ಇರಬೇಕು.
ವಿದ್ಯಾರ್ಥಿಯ ಪಾಲಕರು/ಪೋಷಕರು ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಉತ್ತರಕನ್ನಡ, ಶಿವಮೊಗ್ಗ, ವಿಜಯಪುರ, ಬಾಗಲಕೋಟೆ, ದಾವಣಗೆರೆ ಹಾಗೂ ಕುಷ್ಟಗಿ ಜಿಲ್ಲೆಗಳಲ್ಲಿ ವಾಸವಿದ್ದವರಾಗಿರಬೇಕು. ವಿದ್ಯಾಪೋಷಕ ನರ್ಚರ್ ಮೆರಿಟ್ ಕಾರ್ಯಕ್ರಮವು ಸ್ವಯಂ ಸೇವಕರ ಲಭ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ.
ಕಾರಣ ಹೊಸ ಅರ್ಜಿಯನ್ನು ೨೦೨೬-೨೭ ಪರಿಗಣಿಸುವುದು ಕೆಲವೊಂದು (ಸ್ವಯಂ ಸೇವಕರು ಲಭ್ಯವಿರುವ) ಜಿಲ್ಲಾ ಅಥವಾ ತಾಲೂಕುಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಧನ ಸಹಾಯದ ಅರ್ಜಿಯು ವಿದ್ಯಾಪೋಷಕ ಸಂಸ್ಥೆಯ ಅಂತರ್ಜಾಲ www.vidyaposhak.ngo ಲಭ್ಯವಿದೆ. ವಿದ್ಯಾರ್ಥಿಗಳು ಅರ್ಜಿಯನ್ನು ಆನ್‌ಲೈನ್ ಮೂಲಕ ಅದರಲ್ಲಿ ನಮೂದಿಸಿರುವ ಮಾಹಿತಿಯನ್ನು ತುಂಬಿ ಅಗತ್ಯ ದಾಖಲಾತಿಗಳನ್ನು ಅಪ್‌ಲೋಡ್ ಮಾಡಬೇಕು.
ಆನ್‌ಲೈನ್‌ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ೩೦, ೨೦೨೬. ಕಛೇರಿ: ವಿದ್ಯಾಪೋಷಕ, ನಂ. ೩೦೭/೪ಎ೧, ನಗರಕರ ಕಾಲೋನಿ, ಮಹಿಷಿ ರಸ್ತೆ, ಮಾಳಮಡ್ಡಿ ಧಾರವಾಡ, ದೂರವಾಣಿ ಸಂಖ್ಯೆ :೦೮೩೬- ೨೭೪೭೩೫೭/೯೫೧೩೩೨೨೩೫೫ನ್ನು ಸಂಪರ್ಕಿಸಿರಿ. ಹೆಚ್ಚಿನ ಮಾಹಿತಿಗಾಗಿ ಗದಗ ಜಿಲ್ಲೆಯವರು ಡಾ.ಎಸ್.ಬಿ.ಸಜ್ಜನರ್-ಮೊ-೯೯೪೫೫೫೫೦೮೪, ಡಾ.ಪ್ರಭು ಗಂಜಿಹಾಳ-ಮೊ-೯೪೪೮೭೭೫೩೪೬, ಡಾ.ಪ್ರಕಾಶ ಕಣವಿ-ಮೊ-೯೪೪೯೧೨೧೬೮೮, ಪ್ರೊ.ಮಂಜುನಾಥ ಹೊಳ್ಳಿಯವರ-ಮೊ- ೯೮೮೬೮೯೩೮೫೯, ವಿಜಯಕುಮಾರ ಸಜ್ಜನರ-ಮೊ- ೮೪೪೫೬೪೬೯೧೧ ಇವರನ್ನು ಸಂಪರ್ಕಿಸಬಹುದಾಗಿದೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಡಾ, ಪ್ರಭು ಗಂಜಿಹಾಳ ಗದಗ

