ಹೆಣ್ಣು ಹುಣ್ಣಲ್ಲ ಹೊನ್ನು…..

ಪ್ರತಿ ಮನೆಯ ಮನಸಿನ ನಂದಾದೀಪ ಹೆಣ್ಣುನೆನಪಿರಲಿ ಅವಳೊಂದಿಗೂ ಸಮಾಜದ ಕಣ್ಣು ಯಾರೊ ಮೂರ್ಖರಂದರು ಮಹಿಳೆಯು ಹುಣ್ಣುಸ್ತ್ರೀಯನು ದೂಷಿಸಿದರೆ ಸೇರಬೇಕಾಗುವುದು ಮಣ್ಣುಸಿಗಬೇಕಾಗಿದೆ ಸ್ವಾತಂತ್ರ್ಯ ಪ್ರತಿಯೊಬ್ಬ ಹೆಣ್ಣಿಗೆಎಷ್ಟು ಕೆಲಸ ಮಾಡಿದರೂ ಇಲ್ಲ ನೆಮ್ಮದಿ ಮನಸ್ಸಿಗೆ ನಿಷ್ಕಲ್ಮಶವಾದ ಪ್ರೀತಿ ಅಡಗಿದೆ ಹೃದಯದೊಳಗೆಗುಡಿಯ ಕಟ್ಟಿ ಪೂಜಿಸಿ ಸ್ತ್ರೀಯ ತ್ಯಾಗದ ಮಹಿಮೆಗೆಮಹಿಳಾ ಸಮಾನತೆ ಕೇವಲ ಭಾಷಣಕ್ಕಾಗದಿರಲಿಮಹಿಳೆ ಅಬಲೆ ಅಲ್ಲ ಸಬಲೆ ಗೊತ್ತಿರಲಿಹೆಣ್ಣಿರದೆ ಗಂಡು ಶೂನ್ಯ ಎಂಬುದು ತಿಳಿದಿರಲಿಹೆಣ್ಮಕ್ಕಳ ಮನಸ್ಸಿಗೆ ನೋವಾಗದಂತೆ ಇರಲಿ ಕರುಣೆಗೆ ಮಮತೆಗೆ ತಾಯಿಯಾಗಿ ಹೆಣ್ಣುಪ್ರೀತಿಗೆ ಬಾಳಿಗೆ ಮಡದಿಯಾಗಿ ಹೆಣ್ಣುಬಾಂಧವ್ಯಕ್ಕೆ ಋಣಾನುಬಂದಕ್ಕೆ ಮಗಳಾಗಿ ಹೆಣ್ಣುಪವಿತ್ರ ಹಬ್ಬ ರಕ್ಷಾಬಂಧನಕ್ಕೆ ಸೋದರಿಯಾಗಿ ಹೆಣ್ಣುಬದುಕಲು ಬಿಡಿ ಅವಳ ಪಾಡಿಗೆ ಅವಳನ್ನುಅವಳಿಗೂ ಒಂದು ಕ್ಷಣ ನೀಡಿ ಸ್ವಾತಂತ್ರ್ಯವನ್ನುಹಿರಿಯರೇ ಹೇಳಿದ್ದಾರೆ ಹೆಣ್ಣು ಹುಣ್ಣಲ್ಲ ಹೊನ್ನು ಕೈ ಮುಗಿದು ನಮಸ್ಕರಿಸಿ ಹೆಣ್ಣು ಜಗದ ಕಣ್ಣು

ಶ್ರೀ ಮುತ್ತು.ಯ.ವಡ್ಡರ (ಶಿಕ್ಷಕರು)

ಬಾಗಲಕೋಟMob -9845568484

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button