ಪ್ರಶ್ನಿಸುವ ಗುಣ ಬೆಳೆಸಿ ಕೊಳ್ಳಿ – ಶಿವಪ್ರಸಾದ್.

ಕೊಟ್ಟೂರು ನ.23

ನಿಸರ್ಗದ ಬಗ್ಗೆ ಅರ್ಥೈಸಿ ಕೊಳ್ಳುವುದರ ಜೊತೆಯಲ್ಲಿ ಕುತೂಹಲ ಗುಣ ಬೆಳೆಸಿ ಕೊಂಡವರು ವಿಜ್ಙಾನಿ ಗಳಾಗಲು ಸಾಧ್ಯ ಎಂದು ಧಾರವಾಡ ಐ.ಐ.ಟಿ ಪ್ರಾಧ್ಯಾಪಕ ಹಾಗೂ ವಿಜ್ಞಾನಿ ಪ್ರೊ. ಎಸ್.ಎಂ ಶಿವಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಗೊರ್ಲಿ ಶರಣಪ್ಪ ಪದವಿ ಪೂರ್ವ ಕಾಲೇಜಿನ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾಗೂ ಸಂಘ ಸಂಸ್ಥೆಗಳ ಸಹ ಯೋಗದೊಂದಿಗೆ ವಿವಿಧ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶನಿವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ‘ವಿಜ್ಞಾನ ಅರಿವು ಮತ್ತು ಜಾಗೃತಿ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಸಂವಾದ ನಡೆಸಿದರು. ವಿಜ್ಙಾನ ಎಂಬುದು ಸತ್ಯವಾದ ಮತ್ತು ಸುಂದರವಾದ ವಿಷಯವಾಗಿದೆ. ವಿದ್ಯಾರ್ಥಿಗಳು ಕೇವಲ ಪಠ್ಯ ಕ್ರಮಕ್ಕೆ ಸೀಮಿತವಾಗದೇ ಅದರಾಚೆಗೂ ವ್ಯಾಪಕ ಕಲಿಕೆಗೆ ಒತ್ತು ನೀಡುವತ್ತ ಗಮನ ಹರಿಸಬೇಕು ಹಾಗೂ ಪ್ರಶ್ನಿಸುವ ಗುಣ ಬೆಳೆಸಿ ಕೊಳ್ಳಬೇಕು ಎಂದರು. ವಿದ್ಯಾರ್ಥಿಗಳನ್ನು ವೈಜ್ಞಾನಿಕ ಚಿಂತನೆಗೆ ಪ್ರಚೋದಿಸುವ ಹಾಗೂ ಮೂಲ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಉಪನ್ಯಾಸಕರ ಪಾತ್ರ ಮುಖ್ಯವಾಗಿದೆ ಎಂದರು. ಕೇವಲ ಅಂಕಗಳ ಮಾನದಂಡ ದಿಂದ ವಿದ್ಯಾರ್ಥಿಗಳ ಜಾಣತನ ಅಳೆಯ ಬಾರದು ಅವರಲ್ಲಿ ಅಡಗಿರುವ ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹಿಸುವ ನಿಟ್ಟಿನತ್ತ ಪಾಲಕರು ಹಾಗೂ ಶಿಕ್ಷಕರು ಮುಂದಾಗ ಬೇಕೆಂದರು. ಯಂತ್ರಗಳ ಸಹಾಯದಿಂದ ಜಗತ್ತು ಮುನ್ನಡೆಯುವುದರ ಜೊತೆಯಲ್ಲಿ ವಯಸ್ಸನ್ನು ತಡೆ ಗಟ್ಟುವಂತಹ ತಂತ್ರಜ್ಙಾನ ಹಾಗೂ ಸಾವನ್ನು ಗೆಲ್ಲುವಂತಹ ದಿನಗಳು ಬರುವುದರಿಂದ ಆಧುನಿಕ ತಂತ್ರಜ್ಙಾನಕ್ಕೆ ತಕ್ಕಂತೆ ಜಗತ್ತು ಹೊಂದಿ ಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದರು.ಪರೀಕ್ಷಾ ರಹಿತ ಶಿಕ್ಷಣ ವ್ಯವಸ್ಥೆ ಕಲ್ಪಿಸಿದರೆ ಮಕ್ಕಳು ಒತ್ತಡದಿಂದ ಪಾರಾಗಿ ಜೀವನದಲ್ಲಿ ತಮಗಿಷ್ಟವಾದ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ವಿದ್ಯಾರ್ಥಿಗಳು ತಮ್ಮ ಭವಿಷ್ಯದ ದಿನಗಳನ್ನು ತಾವೇ ರೂಪಿಸಿ ಕೊಳ್ಳಬೇಕೇ ವಿನಃ ಇನ್ನೊಬ್ಬರ ನೆರವಿನಿಂದ ಸಾಧ್ಯವಿಲ್ಲ ಎಂಬುದನ್ನು ಮನದಟ್ಟು ಮಾಡಿ ಕೊಂಡರೆ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯ ಎಂದರು, ಪಾಲಕರ ಆಕಾಂಕ್ಷೆಗಳನ್ನು ಈಡೇರಿಸುವುದರ ಜೊತೆಯಲ್ಲಿ ಸಂಸ್ಕಾರ ಹಾಗೂ ಮಾನವೀಯ ಗುಣಗಳನ್ನು ಮೈಗೂಡಿಸಿ ಕೊಂಡಾಗ ವಿದ್ಯಾರ್ಥಿಗಳ ಬದುಕು ಅರ್ಥ ಪೂರ್ಣವಾಗುತ್ತದೆ ಎಂದರು. ಉಪನ್ಯಾಸಕ ಸಿದ್ದೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದಾಪುಗಾಲು ಇಡುವಲ್ಲಿ ವಿಜ್ಞಾನಿಗಳ ಕೊಡುಗೆ ಅಪಾರವಾಗಿದೆ ಎಂದರು.ಈ ಸಂದರ್ಭದಲ್ಲಿ ವಿಜ್ಙಾನ ಸಮಿತಿ ಸದಸ್ಯ ಅಲಬೂರು ಶಾಂತಕುಮಾರ್, ರಾಮಣ್ಣ, ನಾಗರಾಜ್ ಬಂಜಾರ್, ವಿನಯ್ ಮುದೇನೂರ್, ಉಪನ್ಯಾಸಕರಾದ ಸಿ.ಬಸವರಾಜ್, ಕೆ.ಎಂ.ರೇಣುಕಾಸ್ವಾಮಿ, ಆರಾದ್ಯ ಸ್ವಾಮಿ, ಚೇತನ್ ಚೌವಾಣ್, ಡಾ.ವಿಜಯಕುಮಾರ್, ಕೆ.ಕೊಟ್ರೇಶ್, ಶಿಪಪ್ರಕಾಶ್ ಮುಂತಾದವರು ಪಾಲ್ಗೊಂಡಿದ್ದರು.23 ಕೆ.ಟಿ.ಆರ್ ಇ.ಪಿ 1- ಕೊಟ್ಟೂರಿನ ಗೊರ್ಲಿ ಶರಣಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ವಿಜ್ಞಾನ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಧಾರವಾಡ ಐ.ಐ.ಟಿ ಪ್ರಾಧ್ಯಾಪಕ ಪ್ರೊ, ಎಸ್.ಎಂ ಶಿವಪ್ರಸಾದ್ ಇವರನ್ನು ಸನ್ಮಾನಿಸಲಾಯಿತು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button