“ನವ ವರುಷ ಸದಾ ಹರುಷ ಶುಭ ತರಲಿ ಸರ್ವರ ಬಾಳಲಿ”…..

ನೂತನ ವರುಷ ಹರುಷದಿ
ಸ್ವಾಗತ ಸುಸ್ವಗತವು
ಕಹಿ ನೆನಪು ಮರೆಯೋಣ
ಸಿಹಿ ನೆನಪು ಹಂಚೋಣ
ಅನುದಿನವೂ ಶ್ರಮದಿ
ಖುಷಿಯಿಂದ ದುಡಿಯೋಣ
ನೋವು ಅಳಿಯಲಿ
ನಲಿವು ಬೆಳಯಲಿ
ಕನಸು ನೆನಸಾಗಲಿ
ಅನುಭವ ಬಳಸಿ
ನವ ನವ ಜ್ಞಾನ ಬೆರಸಿ
ನಲುಮೆ ಒಲುಮೆ ಬೆಳೆಯೋಣ
ಅದ್ಭುತ ಕಾಯಕ ನಿರ್ವಹಿಸಿ
ಜಗದ ಸಿರಿಗೆ ತಂದ ಹೆತ್ತವರ
ಹಿರಿಯರ ಪುಣ್ಯದ ಫಲ
ನಮಗೆಲ್ಲಾ ವರುಷ ಹರುಷವು
ಆನಂದದ ಕ್ಷಣಗಳಿಗೆ
ಕಾರಣೀಭೂತರ ಮರೆಯದಿರಿ
ಅನ್ನದಾತರಿಗೆ ಸೖನಿಕರಿಗೆ
ಸದಾ ಋಣಿಯಾಗಿರೋಣ
ಹೊಸ ವರುಷದ ಹರುಷದಿ
ಶುಭ ಕೋರಿ ಗೌರವಿಸಿ
ಸಂತೋಷದಿ ನಲಿಯೋಣ
ಹೊಸ ವರುಷ ಹರುಷ ತರಲಿ
ಜೀವನ ಪಯಣದಿ
ಸದಾ ಅಮೃತ ಘಳಿಗೆ ತರಲಿ
ಶುಭ ದಿನದ ಶುಭ ಲಾಭ
ನವ ವರುಷ ಸದಾ ಹರುಷ
ಶುಭ ತರಲಿ ಸರ್ವರ ಬಾಳಲಿ
-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.