ಪಿಂಜಾರ/ನದಾಫ್ ಸಮುದಾಯದ ಏಳಿಗಿಗೆ ಒಗ್ಗಟ್ಟು ಮುಖ್ಯ – ಷೇಕ್ ಬುಡೇನ್ ಅಭಿಮತ.
ಚಳ್ಳಕೆರೆ ಫೆ.03

ಪಿಂಜಾರ ಸಂಘ ಚಳ್ಳಕೆರೆ ತಾಲ್ಲೂಕು ಘಟಕದ ವತಿಯಿಂದ ದ್ವಿತೀಯ ತ್ರೈಮಾಸಿಕ ಸಭೆ ಇಂದು ಮಧ್ಯಾನ್ಹ ೨.೩೦ ಕ್ಕೆ ನಗರದ ಭಾರತ್ ಬೆಡ್ಡಿಂಗ್ ಹೌಸ್ ನಲ್ಲಿ ನಡೆದಿದ್ದು ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕು ಅಧ್ಯಕ್ಷರಾದ ಷೇಕ್ ಬುಡೇನ್ ಅವರು ವಹಿಸಿದ್ದರು. ಪ್ರಾಸ್ತಾವಿಕ ನುಡಿಯನ್ನು ರಾಜ್ಯ ಸಮಿತಿಯ ಸದಸ್ಯರಾದ ಜನಾಬ್ ಹೆಚ್.ಅಬ್ದುಲ್ ಲತೀಫ್ ಮಾತನಾಡಿ, ಮೀಸಲಾತಿ ಬಗ್ಗೆ ನಮ್ಮ ಸಮುದಾಯದವರಲ್ಲಿ ಜಾಗೃತಿ ಮೂಡಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಚಿತ್ರದುರ್ಗ ವಿಭಾಗೀಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಜನಾಬ್ ಕರೀಂಸಾಬ್ ಅವರಿಗೆ ತಾಲೂಕು ಘಟಕದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಒಗ್ಗಟ್ಟಿನಿಂದ ಇದ್ದರೆ ಮಾತ್ರ ಸಮುದಾಯದ ಏಳಿಗೆ ಸಾಧ್ಯ, ಸಂಘ ನಮಗೆ ಏನು ಮಾಡಿದೆ ಅನ್ನುವುದಕ್ಕಿಂತ ಸಂಘಕ್ಕಾಗಿ ನಾವೇನು ಮಾಡಿದ್ದೇವೆ ಎಂಬುದು ಮುಖ್ಯ. ಹಾಗಾಗಿ ನಾವೆಲ್ಲರೂ ಬದ್ಧತೆಯಿಂದ ಸಮುದಾಯದ ಏಳಿಗಿಗೆ ಶ್ರಮಿಸಬೇಕು ಎಂದರು. ಮತ್ತೋರ್ವ ರಾಜ್ಯಸಮಿತಿಯ ಸದಸ್ಯರಾದ ಜನಾಬ್ ಬಷೀರ್ ಅಹಮದ್ ಅವರು ಮಾತನಾಡಿ, ಸದಸ್ಯತ್ವ ಮಾಡಿಸುವಲ್ಲಿ ಸ್ವ ಇಚ್ಚೆ ಬಹಳ ಮುಖ್ಯವಾಗುತ್ತದೆ. ಎಲ್ಲರೂ ಬದ್ದತೆಯಿಂದ ಇದ್ದಾಗ ಮಾತ್ರ ಸದಸ್ಯತ್ವ ಅಭಿಯಾನ ಯಶಸ್ವಿ ಯಾಗುತ್ತದೆ ಎಂದರು. ಜಿಲ್ಲಾ ಸಮಿತಿಯ ಸದಸ್ಯರಾದ ಮಹಮದ್ ಅಲಿ ಎಂ.ಐ ಅವರು ಮಾತನಾಡಿ, ಎಲ್ಲಿ ಸದಸ್ಯತ್ವ ಸ್ಥಗಿತವಾಗಿದಿಯೊ ಅಲ್ಲಿ ಹೆಚ್ಚಿನ ಗಮನ ವಹಿಸಿ ಸಮುದಾಯದವರ ಮನೆ ಮನೆಗೆ ಸೌಲಭ್ಯಗಳ ಮಾಹಿತಿ ತಲುಪಿಸಬೇಕು.ಆಗ ಮಾತ್ರ ಸದಸ್ಯತ್ವ ಸಂಖ್ಯೆ ಹೆಚ್ಚಾಗುತ್ತದೆ ಎಂದರು. ತಾಲೂಕಿನ ಕಾರ್ಯದರ್ಶಿಗಳಾದ ಕಡದರಹಳ್ಳಿ ಬಾಬು ಅವರು ಹಿಂದಿನ ಸಭೆಯ ನಡಾವಳಿಯನ್ನು ಓದಿ ಅರ್ಥೈಸಿ, ಪ್ರತಿ ಊರಿನ ಜವಾಬ್ದಾರಿಯನ್ನು ಆಯಾ ಊರಿನವರು ವಹಿಸಿಕೊಂಡು ಸದಸ್ಯತ್ವ ಮಾಡಿಸ ಬೇಕೆಂದು ಅಭಿಪ್ರಾಯಿಸಿದರು. ಅರಣ್ಯ ಇಲಾಖೆಯ ಬಾಬು ಅವರು ಮಾತನಾಡಿ ಜವಾಬ್ದಾರಿ ಹಂಚಿಕೆಯಾದರೆ ಕಾರ್ಯಭಾರ ಒತ್ತಡ ಆಗುವುದಿಲ್ಲ. ಒಬ್ಬಬ್ಬರು ಒಂದೊಂದು ಜವಾಬ್ದಾರಿ ವಹಿಸಿಕೊಂಡು ಬದ್ದತೆಯಿಂದ ಸಮುದಾಯದ ಸೇವೆ ಮಾಡೋಣಾ ಎಂದರು.ಜಿಲ್ಲಾ ಸಮಿತಿಯ ಸದಸ್ಯರಾದ ಶಬ್ರಿನಾ ಮಹಮದ್ ಅಲಿ ಅವರು ಮಾತನಾಡಿ ಸಮುದಾಯದಲ್ಲಿ ಯಾರಿಗೆ ಆರ್ಥಿಕ ಸಹಾಯದ ಅಗತ್ಯ ಇದೆ ಅವರಿಗೆ ಎಲ್ಲರೂ ಸೇರಿ ನಮ್ಮಿಂದಾದ ಧನ ಸಹಾಯ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಮಹಮದ್ ಇಮಾಮ್ ,ಇಬ್ರಾಹಿಂ ಸಾಬ್, ರಾಮಜೋಗಿಹಳ್ಳಿ ದಾದಾಪೀರ್, ನೆಲಗತನಹಟ್ಟಿ ಚಮನ್ ಸಾಬ್, ಫಾತೀಮಾಬಿ, ಸುಫಿಯಾ ಬಾನು,ಷಂಷಾದ್ ಮತ್ತಿರರು ಭಾಗವಹಿಸಿದ್ದರು. ಸಭೆ ಯಶಸ್ವಿಯಾಗಿ ನಡೆಯಿತು.
ವರದಿ:ಕೋಡಿಹಳ್ಳಿ.ಟಿ.ಶಿವಮೂರ್ತಿ.ಚಿತ್ರದುರ್ಗ