ಮಾನ್ವಿಯಲ್ಲಿ ಸೈಯದ್ ಆರೀಫ್ ಖಾದ್ರಿ ಸಾಹೇಬ್ ರ – ಹುಟ್ಟು ಹಬ್ಬದ ಆಚರಣೆ.
ಮಾನ್ವಿ ಫೆ.04

ಮಾನ್ವಿ ತಾಲೂಕ ಗೌಸ್ ಓ ಖ್ವಾಜಾ ಅಂಜುಮನ್ ಕಮಿಟಿ ಅಧ್ಯಕ್ಷ ಸೈಯದ್ ಆರೀಫ್ ಖಾದ್ರಿ ಸಾಹೇಬ್ ಹುಟ್ಟು ಹಬ್ಬವನ್ನು ಆಡಂಬರ ದಿಂದ ಆಚರಿಸಬಹುದಾಗಿತ್ತು. ಆದರೆ ಬಡವರ ಪರವಾಗಿ ನೊಂದವರಿಗೆ ಸಹಾಯ ಮಾಡುವ ವ್ಯಕ್ತಿ ಯಾಗಿದ್ದರಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದ್ದಾರೆಂದು ಜನಸೇವಾ ಫೌಂಡೇಶನ್ ರಾಜ್ಯಾಧ್ಯಕ್ಷ ಜಾವೀದ್ ಖಾನ್ ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ನೆರಳು ಅನಾಥಶ್ರಮ ಹಾಗು ಅಂಧ ಮಕ್ಕಳಿಗೆ ಅಂಜುಮನ್ ಕಮಿಟಿ ಆಯೋಜಿಸಿದ್ದ ಹಣ್ಣು ಹಂಪಲು ವಿತರಿಸುವ ಮೂಲಕ ಮಾತನಾಡಿದರು.
ಸೈಯದ್ ಆರೀಫ್ ಖಾದ್ರಿ ಅವರು ಬಡವರು ಅಭಿವೃದ್ಧಿಯಾಗ ಬೇಕು ಎಂದು ಮೆಹಂದಿ ತರಬೇತಿ, ಹೊಲಿಗೆ ಯಂತ್ರ ತರಬೇತಿ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಮಾಡಿದ ಉದಾಹರಣೆ ಇದೆ. ಹೀಗಾಗಿ ಸೈಯದ್ ಆರೀಫ್ ಖಾದ್ರಿಗೆ ಆ ದೇವರು ಆಯಸ್ಸು ಆರೋಗ್ಯ ಕೊಡುವ ಮೂಲಕ ಹೆಚ್ವಿನ ರೀತಿಯಲ್ಲಿ ಕಾರ್ಯಕ್ರಮ ಮಾಡಲಿ ಎಂದು ಆಶಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ