ಕೆ.ಆರ್.ಎಸ್ ಪಕ್ಷದ ರೈತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ – ನಿರುಪಾದಿ.ಕೆ ಗೋಮರ್ಸಿ ನೇಮಕ.
ಬೆಂಗಳೂರು ಫೆ.04

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ರೈತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನಿರುಪಾದಿ.ಕೆ ಗೋಮರ್ಸಿ ಅವರನ್ನು ನೇಮಕ ಮಾಡಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ.ಎನ್ ಅವರು ಆದೇಶ ಹೊರಡಿಸಿದ್ದಾರೆ.ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ಆದೇಶ ಪತ್ರ ಸ್ವೀಕರಿಸಿ ಮಾತನಾಡಿದ ನಿರುಪಾದಿ.ಕೆ ಗೋಮರ್ಸಿ ಕೆ.ಆರ್.ಎಸ್ ಪಕ್ಷವೂ ನನ್ನ ಮೇಲೆ ನಂಬಿಕೆಯನಿಟ್ಟು ಈಗಾಗಲೇ ಹಲವಾರು ಜವಾಬ್ದಾರಿಗಳನ್ನ ಕೊಟ್ಟಿದ್ದು ಇನ್ನೂ ಹೆಚ್ಚಿನ ಜವಾಬ್ದಾರಿಯಾಗಿ ರೈತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದೆ, ನನ್ನ ನಿತ್ಯ ನಿರಂತರ ಬಡವರ, ಹಿಂದುಳಿದವರ, ರೈತರ ಸಮಾಜಿಕ ಸೇವೆಯನ್ನು ಮತ್ತು ಸಂಘಟನಾ ಶಕ್ತಿಯನ್ನು ಗುರುತಿಸಿ ಈ ಅವಕಾಶ ನೀಡಿದ್ದಕ್ಕಾಗಿ ಕೆ.ಆರ್‌ಎಸ್ ಪಕ್ಷದ ರಾಜ್ಯ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ಧನ್ಯವಾದಗಳು ಎಂದು ತಿಳಿಸಿದರು.

ಸ್ವಚ್ಛ, ಪ್ರಾಮಾಣಿಕ, ಪ್ರಾದೇಶಿಕ, ಜನಪರ ರಾಜಕಾರಣಕ್ಕಾಗಿ ಹಲವಾರು ವರ್ಷಗಳಿಂದ ಅನ್ಯಾಯ, ಅಕ್ರಮ, ಭ್ರಷ್ಟಾಚಾರ, ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ನಿತ್ಯ ನಿರಂತರವಾಗಿ ಹೋರಾಟ ಮಾಡುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ನಾಡಿನಾದ್ಯಂತ ರೈತರ ಸಮಸ್ಯೆಗಳು, ಕುಂದು ಕೊರತೆಗಳ ನಿವಾರಣೆಗಾಗಿ ಹಾಗೂ ರೈತರ ಶ್ರೇಯೋಭಿವೃದ್ಧಿಯ ಉಳಿವಿಗಾಗಿ ಪಕ್ಷವು ಈಗಾಗಲೇ ರಾಜ್ಯ ರೈತ ಘಟಕದಿಂದ ಹಲವಾರು ಹೋರಾಟಗಳು, ಅಭಿಯಾನಗಳು, ಕಾರ್ಯಕ್ರಮಗಳನ್ನ ಹಮ್ಮಿ ಕೊಂಡಿದ್ದು. ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ದಿಂದ ಸಿಗಬೇಕಾದ ಮೂಲಭೂತ ಸೇವಾ ಮತ್ತು ಸೌಲಭ್ಯಗಳು, ಯೋಜನೆಗಳು ಸಿಗದಂತಾಗಿದ್ದು ಅವುಗಳು ಮಧ್ಯವರ್ತಿಗಳ ಪಾಲಾಗುತ್ತಿವೆ. ಅಧಿಕಾರಿ ವರ್ಗದವರು ಸಹ ರೈತರ ಬಗ್ಗೆ ಕಿಂಚಿತ್ತು ಕಾಳಜಿ ವಹಿಸದೆ ಅವರ ಮೇಲೆ ನಾನಾ ರೀತಿಯ ದಬ್ಬಾಳಿಕೆ, ದೌರ್ಜನ್ಯಗಳು ನಡೆಸಿದಂತ ಉದಾಹರಣೆಗಳು ಕಂಡು ಬಂದಿದ್ದು. ಇನ್ನೂ ಮುಂದೆ ರಾಜ್ಯಾದ್ಯಂತ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ರೈತರ ಪರವಾದ ಅಭಿಯಾನಗಳನ್ನ, ಕಾರ್ಯಕ್ರಮಗಳನ್ನ, ಹೋರಾಟಗಳನ್ನ ಹಮ್ಮಿ ಕೊಳ್ಳಲಾಗುವು ದೆಂದು ತಿಳಿಸಿದರು. ರಾಜಾದ್ಯಂತ ರೈತರಿಗೆ ಯಾವುದೇ ಸಮಸ್ಯೆಗಳಾದಲ್ಲಿ ಕೆ.ಆರ್.ಎಸ್ ಪಕ್ಷದ ರೈತ ಸಹಾಯವಾಣಿ 7676791041 ಗೆ ಸಂಪರ್ಕಿಸುವಂತೆ ತಿಳಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ, ದೀಪಕ್ ಸಿ ಎನ್, ರಾಜ್ಯ ಸಂಘಟನಾ ಕಾರ್ಯದರ್ಶಿ ಹಬೀಬ್, ಎಸ್ಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಮಾಯ ಗಣೇಶ್ ಸೇರಿದಂತೆ ಇನ್ನೂ ಅನೇಕರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ