ಅತಿಥಿ ಶಿಕ್ಷಕರ ವ್ಯಥೆ – ಯಾರಿಗೆ ಹೇಳೋಣ.
ಹಲ್ಯಾಳ ಫೆ.05

ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅತಿಥಿ ಶಿಕ್ಷಕರ ವ್ಯಥೆ ಯಾರಿಗೂ ಕಾಣಿಸದಂತಾಗಿದೆ. ಸರಕಾರಕ್ಕೆ ಲಾಭ ಬೇಕು ಮಕ್ಕಳ ಅಭಿವೃದ್ಧಿಯೂ ಬೇಕು ಆದರೆ ಅತಿಥಿ ಶಿಕ್ಷಕರ ವ್ಯಥೆ ಕೇಳೋದೇ ಬೇಡ. ಶಾಲೆ ಪ್ರಾರಂಭದಿಂದಲೂ ಕೇವಲ ಮೂರು ತಿಂಗಳ ವೇತನ ಅಂದರೆ ಜೂನ್, ಜುಲೈ ಮತ್ತು ಆಗಸ್ಟ್ ವರೆಗೆ ಮಾತ್ರ ವೇತನ ನೀಡಿದ್ದಾರೆ. ಜನೆವರಿ ವರೆಗೆ ಐದು ತಿಂಗಳ ವೇತನ ಇನ್ನೂ ಮಾಡಿಲ್ಲ. ಸರಕಾರಿ ಶಿಕ್ಷಕರ ವೇತನ ಪ್ರತಿ ತಿಂಗಳು ಆದರು ಕೂಡ ಮತ್ತೆ ಮುಂದಿನ ತಿಂಗಳ ವೇತನಕ್ಕೆ ಹಾತೊರೆಯುತ್ತಿರುತ್ತಾರೆ. ಇನ್ನೂ ಅತಿಥಿ ಶಿಕ್ಷಕರ ಪರಿಸ್ಥಿತಿಯನ್ನು ನೀವೇ ಅವಲೋಕನ ಮಾಡಿ. ಮನೆ ಬಾಡಿಗೆ, ಪೆಟ್ರೋಲ್ ಮನೆಗೆ ಬೇಕಾದ ಸಾಮಗ್ರಿಗಳು, ಸಂಸಾರಿಕರ ಪರಿಸ್ಥಿತಿ ಹೀಗೆ ಅನೇಕ ಸಮಸ್ಯೆಗಳು ಅತಿಥಿ ಶಿಕ್ಷಕರು ಅನುಭವಿಸುತ್ತಿದ್ದಾರೆ. ಅತಿಥಿ ಶಿಕ್ಷಕರ ವೇತನ ಪ್ರತಿ ತಿಂಗಳು ಮಾಡಬೇಕು. ಪ್ರತಿ ತಿಂಗಳು ವೇತನ ಮಾಡುವಲ್ಲಿ ಸರಕಾರ ಮಲತಾಯಿ ಧೋರಣೆ ಮಾಡುತ್ತಿದೆ ಮತ್ತು ಈಗ ನೇಮಕವಾದ ಅತಿಥಿ ಶಿಕ್ಷಕರು ಅದೇ ಶಾಲೆಗೆ ಕಲಿಸುವ ಇಚ್ಛೆ ಹೊಂದಿ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕ ಎಣಿಸಿ ಕೊಂಡಿದ್ದರೆ ಅವರನ್ನೇ ಮುಂದೆವರಿಸಬೇಕು. ಇದು ಒಬ್ಬ ಶಿಕ್ಷಕರ ವ್ಯಥೆ ಅಲ್ಲ ಎಂದು ಅಥಣಿ ತಾಲೂಕಿನ ನದಿ ಇಂಗಳಗಾವ ಕೆಪಿಎಸ್ ಪ್ರೌಢ ಶಾಲೆಗೆ ಹೋಗುತ್ತಿರುವ ಅಥಿತಿ ಶಿಕ್ಷಕ ಆನಂದ ಬಿರಾದರ ಮಾಧ್ಯಮದವರ ಮುಂದೆ ತನ್ನ ಅಳಲನ್ನು ತೋಡಿ ಕೊಂಡರು.
ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪೀರು.ನಂದೇಶ್ವರ.ಅಥಣಿ