“ನಮ್ಮ ದೇಶದ ಬೆನ್ನುಲುಬು ರೈತ”…..

ಭೂಮಿಯ ಮೇಲೆ ಇವನ ಜನನ ಎಂದಿಗೂ ತೀರಿಸಲಾಗದು ಇವನ ಋಣಗುಡಿಸಲಲ್ಲಿ ಕಷ್ಟಗಳೊಂದಿಗೆ ಬೆಳೆದವನು ಜಗತ್ತಿಗೆ ಅನ್ನವನ್ನು ನೀಡಿದವನು
ಕಾಯಕವನ್ನು ದೇವರೆಂದು ಭಾವಿಸಿದನುಕಾಯಕದಲ್ಲೇ ತನ್ನ ಜೀವನವನ್ನು ರೂಪಿಸಿಕೊಂಡವನುಎಲ್ಲರಲ್ಲೂ ಪ್ರೀತಿಯನ್ನು ಹಂಚಿದವನುಭಾರತ ದೇಶದ ಬೆನ್ನೆಲುಬು ಈ ರೈತನು
ಮಣ್ಣಿನ ಮಗನಾಗಿ ಹುಟ್ಟಿಮಣ್ಣಲಿ ಹೊನ್ನು ಬೆಳೆಯುವವನುಕಂಡ ಕನಸುಗಳ ಸಾಕಾರಗೊಳಿಸಿಕೊಳ್ಳುವನು ಶ್ರಮಜೀವ ಶ್ರಮಿಸಿ ಬದುಕುವ ಜೀವ ಇವನುತನ್ನ ಬಡತನದಲ್ಲೂ ಇನ್ನೊಬ್ಬರಹೊಟ್ಟೆ ತುಂಬಿಸುವ ದಾನಶೂರ ಈ ನಮ್ಮ ರೈತನು.
ಅನ್ನ ಬೆಳೆಯುವ ರೈತ ಸದಾ ಕೃಷಿಯಲ್ಲಿ ನಿರತನಾಗಿ ಹಗಲಿರುಳು ಎನ್ನದೆಭೂಮಿಯಲ್ಲಿ ಕಷ್ಟಪಟ್ಟು ದುಡಿಯುತ್ತಾರೆ ನಮ್ಮ ಹೊಟ್ಟೆಗಾಗಿಸಮರ್ಪಣೆ ಮಾಡಿರುವರು ರೈತರು ತಮ್ಮ ಜೀವನವನ್ನು ಭೂಮಿ ತಾಯಿಗಾಗಿಅದಕ್ಕೆನೇ ಕಂಡರೆ ನೀ ರೈತನನ್ನು ಕೈ ಮುಗಿದು ಚಪ್ಪಾಳೆ ಹೊಡಿ ಕೃತಜ್ಞತೆಗಾಗಿ.
ನೇಗಿಲ ಹಿಡಿದು ಹೊಲವನು ಬಿತ್ತಿ ದುಡಿಯುವನು ಬಂಜರು ಭುವಿಗೆ ರಂಗೋಲಿ ಹಾಕಿದವನುಎದೆಯೆತ್ತರಕ್ಕೆ ಬೆಳೆದ ಫಸಲನ್ನು ಕಂಡು ಸಂತಸಗೊಳ್ಳುವನುಸೈನಿಕರಂತೆ ಮೂರೊತ್ತು ದುಡಿದು ದೇಶದ ಒಳಿತಿಗೆ ಶ್ರಮಿಸುವನು
ಕು.ಜ್ಯೋತಿ ಆನಂದ ಚಂದುಕರ
ಬಾಗಲಕೋಟ