ಚಿಟಗಿನಕೊಪ್ಪ ಗ್ರಾಮದಲ್ಲಿ ಎನ್.ಎಸ್.ಎಸ್ ವಾರ್ಷಿಕ ಅಂಗವಾಗಿ 50 ಜನ – ಶಿಬಿರಾರ್ಥಿಗಳಿಂದ ಶ್ರಮದಾನ.
ಚಿಟಗಿನಕೊಪ್ಪ ಏ.13

ಬೇವೂರ ಸಮೀಪದ ಚಿಟಗಿನಕೊಪ್ಪ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ಎನ್.ಎಸ್.ಎಸ್ ವಾರ್ಷಿಕ ಶಿಬಿರದ ಅಂಗವಾಗಿ ಗ್ರಾಮದ ವಿವಿಧ ಕಡೆಗಳಲ್ಲಿ 50 ಜನ ಶಿಬಿರಾರ್ಥಿಗಳಿಂದ ಸ್ವಚ್ಚತೆ, ಮುಳ್ಳು ಗಿಡ ಕಡಿಯುವುದು, ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಗಿಡ ನೆಡುವುದು, ಗ್ರಾಮದ ಬಸವೇಶ್ವರ ದೇವಾಸ್ಥಾನ ಆವರಣದಲ್ಲಿ ಸ್ವಚ್ಚತೆ, ಬೀದಿಗಳ ಸ್ವಚ್ಚತಾ, ಹಳೆಯ ಬಾವಿಯ ಕಟ್ಟೆಯ ಸುತ್ತ ಮುತ್ತಲಿನ ಪರಿಸರದ ಸ್ವಚ್ಚತೆ ಸೇರಿದಂತೆ ಗ್ರಾಮದ ಮಸೀದಿ ಭಾಗದಲ್ಲಿನ ಕಟ್ಟಡ ಕಾರ್ಯದ ಸಿದ್ದತೆಗಾಗಿ ಸ್ವಚ್ಚತಾ ಹಾಗೂ ಸಿದ್ದಾರೋಡ ಮಠದ ಕಟ್ಟಡಕ್ಕೆ ಸ್ಲಾಬ್ ಕಾರ್ಯದಲ್ಲಿ ಭಾಗಿಯಾಗಿ ಗ್ರಾಮದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದು.

ಇನ್ನೂ ಐದು ದಿನಗಳ ವರೆಗೆ ಗ್ರಾಮದ ಪ್ರಮುಖ ಕಡೆಗಳಲ್ಲಿ ಶ್ರಮದಾನ ಕಾರ್ಯ ನಡೆಯಲಿದೆ ಎಂದು ಎನ್.ಎಸ್.ಎಸ್ ಶಿಬಿರದ ಸಂಯೋಜನಾ ಅಧಿಕಾರಿ ಜಿ.ಎಸ್ ಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರತಿ ನಿತ್ಯ ಸಾಯಂಕಾಲ ಶಿಬಿರದ ವಿವಿಧ ತಂಡದ ಸ್ವಯಂ ಸೇವಕರಿಂದ ಜನ ಜಾಗೃತಿ ಕಾರ್ಯಕ್ರಮಗಳು ಮನರಂಜನೆ ಕಾರ್ಯಕ್ರಮಗಳು, ಕಿರುನಾಟಕಗಳು, ಸಂಗೀತ ರಸ ಮಂಜರಿ ನೆರವೇರುವುದು ಎಂದು ಪತ್ರಿಕಾ ಮಾಧ್ಯಮ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ತಿಳಿಸಿದ್ದಾರೆ.